DECEMBER current affairs for all govt ex

rharshitha439 5 views 32 slides Oct 27, 2025
Slide 1
Slide 1 of 32
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8
Slide 9
9
Slide 10
10
Slide 11
11
Slide 12
12
Slide 13
13
Slide 14
14
Slide 15
15
Slide 16
16
Slide 17
17
Slide 18
18
Slide 19
19
Slide 20
20
Slide 21
21
Slide 22
22
Slide 23
23
Slide 24
24
Slide 25
25
Slide 26
26
Slide 27
27
Slide 28
28
Slide 29
29
Slide 30
30
Slide 31
31
Slide 32
32

About This Presentation

December month detailed current affairs use full for all aspirant who are preparing for government exams like kas upsc sda fda kea group c


Slide Content

BHARAT IAS & KAS Coaching Academy December Month current affairs 1 ASHWINI KS

1) BSF ರೈಸಿಂಗ್ ಡೇ :- ಭಾರತದ ಗಡಿ ಭದ್ರತಾ ಪಡೆ ವಾರ್ಷಿಕವಾಗಿ 1 ಡಿಸೆಂಬರ್ 1965 ರಂದು ಅಸ್ತಿತ್ವಕ್ಕೆ ಬಂದಿತು. 1965 ರ ಪಾಕಿಸ್ತಾನದೊಂದಿಗಿನ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ BSF ಅನ್ನು ಸ್ಥಾಪಿಸಲಾಯಿತು, ಭಾರತದ ಪ್ರಾಥಮಿಕ ಗಡಿ-ರಕ್ಷಕರ ಪಡೆ BSF ಸ್ಥಾಪನೆಯನ್ನು ಗುರುತಿಸಲು BSF ರೈಸಿಂಗ್ ಡೇ ಅನ್ನು ಡಿಸೆಂಬರ್ 1 ರಂದು ಆಚರಿಸಲಾಗುತ್ತದೆ BSF ಭಾರತದ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಂದಾಗಿದೆ. ಪ್ರಸ್ತುತ ಮುಖ್ಯಸ್ಥ - ನಿತಿನ್ ಅಗರ್ವಾಲ್ , ಐಪಿಎಸ್. ಇದರ ಧ್ಯೇಯವಾಕ್ಯವು “ಜೀವನ್ ಪರ್ಯಾಂತ್ ಕರ್ತವ್ಯ” ಅಂದರೆ “ಸಾವಿನವರೆಗೆ ಕರ್ತವ್ಯ”.

Central Armed Police Forces Assam Rifles (AR) Border Security Force (BSF) Central Industrial Security Force (CISF) Central Reserve Police Force (CRPF) Indo Tibetan Border Police (ITBP) National Security Guard (NSG) Sashastra Seema Bal (SSB)

2) ‘ Michaung ’ ಚಂಡಮಾರುತ :- ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯು ( NCMC) ಬಂಗಾಳ ಕೊಲ್ಲಿಯಲ್ಲಿ ಸನ್ನಿಹಿತವಾಗಿರುವ ‘ಮೈಚಾಂಗ್’ ಚಂಡಮಾರುತದ ಸಿದ್ಧತೆಯನ್ನು ಪರಿಶೀಲಿಸಲು ಸಭೆ ನಡೆಸಿತು. ಭಾರತ ಹವಾಮಾನ ಇಲಾಖೆ ( IMD) ಮಿಚಾಂಗ್ ಚಂಡಮಾರುತವು ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಅಪ್ಪಳಿಸುತ್ತಿರುವುದರಿಂದ ಎಚ್ಚರಿಕೆಯನ್ನು ನೀಡಿದೆ . ‘Myanmar’ Cyclone Michaung ಗೆ ಹೆಸರನ್ನು ಸೂಚಿಸಿದೆ. ಹೆಸರಿನ ಅರ್ಥ "ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ".

3) COP 33 ಆತಿಥ್ಯಕ್ಕೆ ಭಾರತ ಸಿದ್ದ :- 2028ರಲ್ಲಿ ಭಾರತದಲ್ಲಿ COP 33 . ಶೃಂಗ ಸಭೆಯನ್ನು ಆಯೋಜಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದಾರೆ. ಭಾರತವು ಜಾಗತಿಕ ಜನಸಂಖ್ಯೆಗೆ 17 - 18% ಕೊಡುಗೆ ನೀಡುತ್ತದೆ. ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ಭಾರತ ಕೇವಲ 4% ಹೊರಸೂಸುತ್ತದೆ. ಭಾರತವು 2070 ವರ್ಷಕ್ಕೆ ನೇಟ ಝಿರೋ ಗುರಿಯನ್ನು ಹಾಕಿಕೊಂಡಿದೆ . ಭಾರತವು 2030ರ ವೇಳೆಗೆ ಭಾರತವು ತನ್ನ ಇಂಗಾಲದ ಹೊರಸೂಸುವಿಕೆಯ ತೀವ್ರತೆಯನ್ನು 45% ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

4) ಭಾರತದ ಜಿ20 ಒಕ್ಕೂಟದ ಅಧ್ಯಕ್ಷತೆ ಅವಧಿ ಮುಕ್ತಾಯ :- ಭಾರತದ ಜಿ-20 ಅಧ್ಯಕ್ಷತೆಯ ಅವಧಿ ಡಿಸೆಂಬರ್ 1 (2022) ರಿಂದ ನವೆಂಬರ್ 30 ( 2023 ) ಭಾರತದ ಜಿ-20 ಅಧ್ಯಕ್ಷತೆಯ ಅವಧಿ ನವೆಂಬರ್ 30ಕ್ಕೆ ಅಂತ್ಯಗೊಂಡಿದೆ. ಡಿಸೆಂಬರ್ 1 , 2023ರಂದು ಬ್ರೆಜಿಲ್ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.

2022ರ G 20 ಶೃಂಗಸಭೆಯು ಇಂಡೋನೇಷ್ಯಾದ ಬಾಲಿಯ ನುಸಾ ದುವಾದಲ್ಲಿ ನಡೆಯಿತು ಇದು G 20 ಸಂಘಟನೆಯ 17ನೇ ಸಭೆಯಾಗಿದೆ. ಈ ಶೃಂಗಸಭೆಯ ಧೈಯವಾ ಕ್ಯ “ Recover Together, Recover Stronger” 18 ನೇ G 20 ಶೃಂಗಸಭೆಯು ಭಾರತದ ನವ ದೆಹಲಿದಲ್ಲಿ ನಡೆಯಿತು . ಥೀಮ್ – “ ವಸುಧೈವ ಕುಟುಂಬಕಮ್ ” ಇದರ ಅರ್ಥ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ

ಜಿ-20 ಸಂಘಟನೆ :- 1999 ರಲ್ಲಿ ಸ್ಥಾಪಿಸಲಾಯಿತು ಸದಸ್ಯ ರಾಷ್ಟ್ರಗಳು :20 + 1 ( new joining ) ಏಷ್ಯಾ ಖಂಡ:-ಭಾರತ, ಜಪಾನ, ಚೀನಾ, ದ. ಕೊರಿಯಾ, ಸೌದಿ ಅರೆಬಿಯಾ, ರಷ್ಯಾ , ಇಂಡೋನಷಿಯಾ ಯುರೋಪ್ ಖಂಡ:- ಬ್ರಿಟನ, ಇಟಲಿ, ಜರ್ಮನಿ, ಫ್ರಾನ್ಸ್, ಟರ್ಕಿ, ಯುರೋಪಿಯನ ಯುನಿಯನ್. ಆಫ್ರಿಕಾ ಖಂಡ:- ದಕ್ಷಿಣ ಆಫ್ರಿಕಾ , ಆಸ್ಟ್ರೇಲಿಯಾ ಖಂಡ:-ಆಸ್ಟ್ರೇಲಿಯಾ ಉ. ಅಮೇರಿಕಾ ಖಂಡ:- ಅಮೇರಿಕಾ, ಮೆಕ್ಸಿಕೊ, ಕೆನಡಾ ದ. ಅಮೇರಿಕಾ ಖಂಡ:- ಬ್ರೆಜಿಲ, ಅರ್ಜೆಂಟೈನ

ಇದು ಒಟ್ಟು ವಿಶ್ವದ ಉತ್ಪನ್ನದ ( ಜಾಗತಿಕ GDP ) 80%ರಷ್ಟು, ಜಾಗತಿಕ ವ್ಯಾಪಾರದ 75% ರಷ್ಟು , ಜಾಗತಿಕ ಜನಸಂಖ್ಯೆಯ ಮೂರನೆ ಎರಡರಷ್ಟು ಮತ್ತು ಭೂಪ್ರದೇಶದ 60% ರಷ್ಟು ಅನ್ನು ಒಳಗೊಂಡಿವೆ. G-20 ಸಭೆಗಳು :- ಮೊದಲ ಸಭೆ- ವಾಷಿಂಗಟನ ಡಿ.ಸಿ 2019 ರ ಸಭೆ- ಜಪಾನ್‌ನ ಒಸಾಕಾ 2020 ರ ಸಭೆ- ಸೌದಿ ಅರೇಬಿಯಾದ ರಿಯಾದ್ 2021ರ ಸಭೆ-ರೋಮ್ ಇಟಲಿ

ಕೆಳಗಿನ ಯಾವ ಗುಂಪಿನಲ್ಲಿ ಎಲ್ಲಾ ನಾಲ್ಕು ದೇಶಗಳು G20 ಸದಸ್ಯರಾಗಿದ್ದಾರೆ? (2020 UPSC ) ಅರ್ಜೆಂಟೀನಾ, ಮೆಕ್ಸಿಕೋ, ದಕ್ಷಿಣ ಆಫ್ರಿಕಾ ಮತ್ತು ಟರ್ಕಿ ಆಸ್ಟ್ರೇಲಿಯಾ, ಕೆನಡಾ, ಮಲೇಷ್ಯಾ ಮತ್ತು ನ್ಯೂಜಿಲೆಂಡ್ ಬ್ರೆಜಿಲ್, ಇರಾನ್, ಸೌದಿ ಅರೇಬಿಯಾ ಮತ್ತು ವಿಯೆಟ್ನಾಂ (d) ಇಂಡೋನೇಷ್ಯಾ, ಜಪಾನ್, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾ

5) ಭಾರತ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್ ಗೆ ಮರು ಚುನಾಯಿತವಾಗಿದೆ :- ಇದು 2 ವರ್ಷದ ಅವಧಿಗೆ ( 2024-20 25 ) ಆಯ್ಕೆಯಾಗಿದೆ. ಲಂಡನ್‌ನಲ್ಲಿ ನಡೆದ IMO ನ 33 ನೇ ಅಸೆಂಬ್ಲಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ . ಈ ಅಸೆಂಬ್ಲಿಯಲ್ಲಿ ಭಾರತದ ಹೈಕಮಿಷನರ್ “ ವಿಕ್ರಮ್ ದೊರೈ ಸ್ವಾಮಿ ” ಭಾರತವನ್ನು ಪ್ರತಿನಿಧಿಸಿದ್ದರು. ಈ ಹಿಂದೆ ಭಾರತವು 2017 IMO ಕೌನ್ಸಿಲ್‌ಗೆ ಮರು-ಚುನಾಯಿಸಲ್ಪಟ್ಟಿತು

IMO International Maritime Organisation:- ಇದು ವಿಶ್ವಸಂಸ್ಥೆಯ ವಿಶೇಷ ಸಂಸ್ಥೆ , ಅಂತರಾಷ್ಟ್ರೀಯ ಶಿಪ್ಪಿಂಗ್‌ನ ಸುರಕ್ಷತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಮತ್ತು ಹಡಗುಗಳಿಂದ ಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳಿಗೆ ಇದು ಜವಾಬ್ದಾರವಾಗಿದೆ. ಇದು 1948 ರಲ್ಲಿ ಸ್ಥಾಪಿಸಲಾಯಿತು, ಸದಸ್ಯರು: ಇದು ಪ್ರಸ್ತುತ 175 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಪ್ರಧಾನ ಕಛೇರಿ: ಲಂಡನ್ ( UK )

6) ICFRE ಮಹಾನಿರ್ದೇಶಕರಾಗಿ “ ಕಾಂಚನ್ ದೇವಿ ” ನೇಮಕ :- ಭಾರತೀಯ ಅರಣ್ಯ ಸಂಶೋಧನಾ ಶಿಕ್ಷಣ ಮಂಡಳಿಯ ( ICFRE) ಮಹಾನಿರ್ದೇಶಕರಾಗಿ ( DG) ನೇಮಕಗೊಂಡ ಪ್ರಥಮ ಮಹಿಳೆ . ಭಾರತೀಯ ಅರಣ್ಯ ಸೇವಾ ಅಧಿಕಾರಿ ಕಾಂಚನ್ ದೇವಿ ಅವರು ಭಾರತೀಯ ಅರಣ್ಯ ಸಂಶೋಧನಾ ಶಿಕ್ಷಣ ಮಂಡಳಿಯ ಮಹಾನಿರ್ದೇಶಕರಾಗಿ ( DG) ನೇಮಕಗೊಂಡಿದ್ದಾರೆ. ಕೇಂದ್ರ ಪರಿಸರ, ಅರಣ್ಯ ಮತ್ತು ಕವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಪ್ರಧಾನ ಮಂಡಲಿಯ ಕಾಂಚನ್ ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

Indian Council of Forestry Research and Education (ICFRE):- ಸ್ಥಾಪನೆ 1986 ಕೇಂದ್ರ ಕಛೇರಿ – ಡೆಹ್ರಾಡೂನ್ ಪೋಷಕ ಸಂಸ್ಥೆ - ಪರಿಸರ ಮತ್ತು ಅರಣ್ಯ ಸಚಿವಾಲಯ

7) 2023ರ ಮಲೇರಿಯಾ ವರದಿ :- ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ 2023ರ ಮಲೇರಿಯಾ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಭಾರತದಲ್ಲಿ ಮಲೇರಿಯಾ ಪ್ರಕರಣಗಳು ಮತ್ತು ಸಾವುಗಳನ್ನು ಗಣನಿಯ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ಎತ್ತಿ ತೋರಿಸುತ್ತದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2022ರಲ್ಲಿ ಪ್ರಕರಣಗಳಲ್ಲಿ 30% ಮತ್ತು ಮರಣದಲ್ಲಿ 34% ಇಳಿಕೆಯಾಗಿರುವುದನ್ನು ತೋರಿಸುತ್ತದೆ.

ಮಲೇರಿಯಾ :- ಪ್ಲಾಸ್ಕೋಡಿಯಂ ಜಾತಿಗೆ ಸೇರಿದ ಪರವಾಲಂಬಿಸಿ ಈ ರೋಗಕ್ಕೆ ಕಾರಣವಾಗಿದೆ. 2025ರಲ್ಲಿ ರಾಜ್ಯವು ಮಲೇರಿಯಾ ಶೂನ್ಯ ಹಂತ ತಲುಪುವ ಗುರಿಯನ್ನು ಹೊಂದಿದೆ. 2030 ರ ವೇಳೆಗೆ ಭಾರತದಾದ್ಯಂತ ಮಲೇರಿಯಾವನ್ನು ತೊಡೆದುಹಾಕಲು ಮತ್ತು ಮಲೇರಿಯಾ ಮುಕ್ತ ವಲಯಗಳನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ. ಮಲೇರಿಯಾ ರೋಗಕ್ಕೆ ಬಳಸುವ ಔಷಧಿ-ಕ್ವಿನೈನ್ ಅಥವಾ ಆರ್ಟೆಮಿಸಿನಿನ್‌ ಜನ್ಯಗಳಂತಹ ಮಲೇರಿಯಾ-ನಿರೋಧಕ ಔಷಧಿಗಳನ್ನು ಬಳಸಿ ಮಲೇರಿಯಾ ಸೋಂಕುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

8) ಗುಜರಾತ್‌ನ ಗರ್ಬಾ ನೃತ್ಯ ಯುನೆಸ್ಕೋ ಪಟ್ಟಿಗೆ :- ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು 'ಗರ್ಬಾ ರೂಪದಲ್ಲಿ ದೇವಿಯ ಮೇಲಿನ ಭಕ್ತಿಯ ಪ್ರಾಚೀನ ಸಂಪ್ರದಾಯವು ಜೀವಂತವಾಗಿದೆ ಮತ್ತು ಬೆಳೆಯುತ್ತಿದೆ. ಗುಜರಾತಿನ ಗುರುತಾಗಿರುವ ಗರ್ಬಾವನ್ನು ಯುನೆಸ್ಕೋ ತನ್ನ ಸರಿಸಾಟಿ ಯಿಲ್ಲ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಅನುಮೋದಿಸಿದೆ' ಎಂದು ಹೇಳಿದ್ದಾರೆ . ಯುನೆಸ್ಕೋ ಪಟ್ಟಿಯಲ್ಲಿ ಸೇರಿದ 15ನೇ ಭಾರತದ ಸಾಂಸ್ಕೃತಿಕ ವಸ್ತುವಾಗಿದೆ.

ಏನಿದು ಗರ್ಬಾ ಡ್ಯಾನ್ಸ್? ಗರ್ಬಾ ಎಂಬುದು ಗುಜರಾತಿ ಜಾನಪದ ನೃತ್ಯದ ಒಂದು ರೂಪವಾಗಿದೆ ಇದನ್ನು 9 ದಿನಗಳ ಹಿಂದೂ ಹಬ್ಬ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ, ಇದು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಆಚರಿಸುತ್ತದೆ ಭಾರತದ ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಗಳು:- ಭಾರತವು ತನ್ನ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ, UNESCO ನ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ 14 ಸಾಂಸ್ಕೃತಿಕ ಪರಂಪರೆಗಳಿವೆ . ರಾಮಲೀಲಾ – 2008 ವೇದ ಪಠಣ - 2008 ಕುಡಿಯಾಟಮ್ – 2008 ರಮ್ಮನ್ - 2009

5) ಚೌ ನೃತ್ಯ – 2010 6) ಕಲ್ಬೆಲಿಯಾ – 2010 7) ಮುದಿಯೆಟ್ಟು – 2010 8) ಬೌದ್ಧ ಪಠಣ – 2012 9) ಸಂಕೀರ್ತನೆ - 201 10) ಪಾತ್ರೆಗಳ ತಯಾರಿಕೆಯ ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಕರಕುಶಲ – 2014 11) ಯೋಗ - 2016 12) ನೌರುಜ್ – 2016 13) ಕುಂಭಮೇಳ – 2017 14) ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ - 2021

UNESCO ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ( ICH) ಎಂದರೇನು? UNESCO ICH ಎಂಬುದು ಸಮುದಾಯ, ಗುಂಪು ಅಥವಾ ವ್ಯಕ್ತಿಯ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಗುರುತಿಸಲ್ಪಟ್ಟ ಅಭ್ಯಾಸಗಳು, ಪ್ರಾತಿನಿಧ್ಯಗಳು, ಅಭಿವ್ಯಕ್ತಿಗಳು, ಜ್ಞಾನ, ಕೌಶಲ್ಯಗಳು ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ಉಲ್ಲೇಖಿಸುವ ಪದವಾಗಿದೆ. 2003 ರಲ್ಲಿ, ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ( ICH) ರಕ್ಷಣೆಗಾಗಿ ಕನ್ವೆನ್ಶನ್ ಅನ್ನು ಅಳವಡಿಸಿಕೊಂಡಿದೆ .

9) 2023ನೇ ಸಾಲಿನ ಕುವೆಂಪು ರಾಷ್ಟ್ರೀಯ ಪ್ರಶಸ್ತಿ :- ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತ 'ಕುವೆಂಪು ರಾಷ್ಟ್ರೀಯ ಪುರಸ್ಕಾರ 2023'ಕ್ಕೆ ಬಂಗಾಳಿ ಬರಹಾಗಾರ “ ಶೀರ್ಷೆಂದು ಮುಖ್ಯೋಪಾಧ್ಯಾಯ ” ಅವರನ್ನು ಆಯ್ಕೆ ಮಾಡಲಾಗಿದೆ . ಪುರಸ್ಕಾರವು 5 ಲಕ್ಷ ನಗದು ಬಹುಮಾನ , ಬೆಳ್ಳಿ ಪದಕ ಒಳಗೊಂಡಿದೆ. ಕುವೆಂಪು ಅವರ ಜನ್ಮದಿನವಾದ ಡಿಸೆಂಬರ 29ರಂದು ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

10) ವಿಶ್ವ ಡಿಜಿಟಲ್ ಸ್ಪರ್ಧಾತ್ಮಕತೆ ಶ್ರೇಯಾಂಕ 2023 :- 7ನೇ ಆವೃತ್ತಿಯ ವಿಶ್ವ ಡಿಜಿಟಲ್ ಸ್ಪರ್ಧಾತ್ಮಕತೆ ಶ್ರೇಯಾಂಕ 2023 ( World Digital Competitiveness Ranking-2023) ಭಾರತವು 49 ನೇ ಸ್ಥಾನ ಪಡೆದುಕೊಂಡಿದೆ. ಹಿಂದಿನ ಆವೃತ್ತಿಯಲ್ಲಿ ಭಾರತವು 44 ನೇ ಸ್ಥಾನ ಪಡೆದುಕೊಂಡಿತ್ತು. ಬಿಡುಗಡೆ ಮಾಡುವ ಸಂಸ್ಥೆ International Institute for Management Development (IMD)

ಯುಎಸ್ಎ ಮೊದಲ ಸ್ಥಾನ ಪಡೆದುಕೊಂಡಿದೆ. ವರದಿಯು ಮೂರು ವರ್ಗಗಳ ಆಧಾರದ ಮೇಲೆ 64 ದೇಶಗಳ ದೇಶಗಳ ಸಾಮರ್ಥ್ಯ ಮತ್ತು ಸನ್ನದ್ಧತೆಯನ್ನು ಅಳೆಯುತ್ತದೆ. Knowledge 2. Technology 3. Future readiness

11) ವಿಶ್ವ ಮಣ್ಣಿನ ದಿನ : ಡಿಸೆಂಬರ್ 5 ಥೀಮ್ 2023: ಮಣ್ಣು ಮತ್ತು ನೀರು, ಜೀವನದ ಮೂಲ . 5ನೇ ಡಿಸೆಂಬರ್ 2014 ಅನ್ನು ಮೊದಲ ಅಧಿಕೃತ WSD ಎಂದು UN ಜನರಲ್ ಅಸೆಂಬ್ಲಿ ( UNGA) ಮೂಲಕ ಗೊತ್ತುಪಡಿಸಲಾಗಿದೆ

12) ಭಾರತದಲ್ಲಿ ಅಪರಾಧಗಳ ವಾರ್ಷಿಕ ವರದಿ :- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ( NCRB ) 2022ರ ಅಪರಾಧಗಳ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ NCRB ಕಾರ್ಯನಿರ್ವಹಿಸುತ್ತದೆ. ಈ ವರದಿಯು ಮಹಿಳೆಯರ ವಿರುದ್ದ ಅಪರಾಧ, ಸೈಬರ ಆರ್ಥಿಕ ಅಪರಾಧಗಳು , SC ಮತ್ತು ST ವಿರುದ್ಧದ ಅಪರಾಧಗಳ ಅಂಕಿ-ಅಂಶವನ್ನು ಒಳಗೊಂಡಿದೆ 2021ನೇ ಸಾಲಿಗೆ ಹೊಲಿಸಿದರೆ, 2022ರಲ್ಲಿ ಅಪರಾಧಗಳ ಸಂಖ್ಯೆ ಶೇ 4.5ರಷ್ಟು ಇಳಿಕೆಯಾಗಿದೆ.

ಕೊಲ್ಕತ್ತಾ ಸತತ 3ನೇ ವರ್ಷ ಭಾರತದ ಸುರಕ್ಷಿತ ನಗರವಾಗಿ ಹೊರಹೊಮ್ಮಿದೆ. ಮಹಿಳೆಯರ ವಿರುದ್ಧದ ಅಪರಾಧಗಳು ದೆಹಲಿಯಲ್ಲಿ ಅತಿ ಹೆಚ್ಚು ದಾಖಲಾಗಿವೆ. ಅತಿ ಹೆಚ್ಚು ಸೈಬರ ಅಪರಾಧ ಪ್ರಕರಣಗಳು ದಾಖಲಾಗುತ್ತಿರುವ ದೇಶದ ನಗರಗಗಳ ಪೈಕಿ ಬೆಂಗಳೂರು ಹಾಗೂ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಅತ್ಯಂತ ಕಡಿಮೆ ಇರುವ ರಾಜ್ಯಗಳಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನಗಳಲ್ಲಿ ಆಂಧ್ರಪ್ರದೇಶ ಮತ್ತು ಗುಜರಾತ ಇವೆ.

POCSO ಪ್ರಕರಣಗಳು ಅತಿ ಹೆಚ್ಚು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ. ಕರ್ನಾಟಕ 4ನೇ ಸ್ಥಾನದಲ್ಲಿದೆ . ಪರಿಶಿಷ್ಟ ಜಾತಿಗಳ ಮೇಲಿನ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ.2ನೇ ಸ್ಥಾನದಲ್ಲಿ ರಾಜ್ಯಸ್ಥಾನ. ಕರ್ನಾಟಕ 5ನೇ ಸ್ಥಾನದಲ್ಲಿದೆ.

13) ಮೌಂಟ್ ಮೆರಾಪಿ (ಇಂಡೋನೇಷ್ಯಾ) :- ಮೌಂಟ್ ಮೆರಾಪಿ , ಇದು ಇಂಡೋನೇಷ್ಯಾದಲ್ಲಿ ಅತ್ಯಂತ ಸಕ್ರಿಯ ಜ್ವಾಲಾಮುಖಿಯಾಗಿದೆ .

14) ಮೇಘಾಲಯ ಉತ್ಪನ್ನಗಳಿಗೆ GI ಟ್ಯಾಗ್‌ಗಳು :- ಲಕಾಡಾಂಗ್ ಅರಿಶಿನ : ಹೆಚ್ಚಿನ ಕರ್ಕ್ಯುಮಿನ್ ಅಂಶ ಗಾರೋ ಚುಬಿಚ್ಚಿ : ಗಾರೊ ಬುಡಕಟ್ಟಿನ ಅಕ್ಕಿ ಆಧಾರಿತ ಆಲ್ಕೊಹಾಲ್ಯುಕ್ತ ಪಾನೀಯ

ಗಾರೋ ದಕಮಾಂಡ : ಗಾರೋ ಬುಡಕಟ್ಟು ಜನಾಂಗದವರು ಧರಿಸುವ ಸಾಂಪ್ರದಾಯಿಕ ಉಡುಗೆ ಲಾರ್ನೈ ಕುಂಬಾರಿಕೆ : ಜೈಂತೈ ಹಿಲ್ಸ್‌ನಿಂದ ಕುಶಲಕರ್ಮಿ ಕಪ್ಪು ಕುಂಬಾರಿಕೆ

ASHWINI KS