Victoria hospital in Bangalore project work

mamtham217 13 views 50 slides Sep 10, 2025
Slide 1
Slide 1 of 50
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8
Slide 9
9
Slide 10
10
Slide 11
11
Slide 12
12
Slide 13
13
Slide 14
14
Slide 15
15
Slide 16
16
Slide 17
17
Slide 18
18
Slide 19
19
Slide 20
20
Slide 21
21
Slide 22
22
Slide 23
23
Slide 24
24
Slide 25
25
Slide 26
26
Slide 27
27
Slide 28
28
Slide 29
29
Slide 30
30
Slide 31
31
Slide 32
32
Slide 33
33
Slide 34
34
Slide 35
35
Slide 36
36
Slide 37
37
Slide 38
38
Slide 39
39
Slide 40
40
Slide 41
41
Slide 42
42
Slide 43
43
Slide 44
44
Slide 45
45
Slide 46
46
Slide 47
47
Slide 48
48
Slide 49
49
Slide 50
50

About This Presentation

Victoria hospital


Slide Content

ಇತಿಹಾಸ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸರ್ಕಾರಿ ಕಲಾ ಕಾಲೇಜು ಡಾ. ಬಿ. ಆರ್. ಅಂಬೇಡ್ಕರ್ ವೀಧಿ ಬೆಂಗಳೂರು - 560001 NAAC ಮೌಲ್ಯಮಾಪನ A+ ಗ್ರೇಡ್ ಸಿಜಿಪಿಎ 3.29 ಪತ್ರಿಕೆ: ಹಿಸ್ಟರಿ ಅಂಡ್ ಕಂಪ್ಯೂಟಿಂಗ್ ಸ್ನಾತಕೋತ್ತರ ಪದವಿಗಾಗಿ ಅರ್ಪಿಸಿರುವ ಕಿರು ಸಂಶೋಧನಾ ಚಿತ್ರ ಪ್ರಬಂಧ ವಿಕ್ಟೋರಿಯಾ ಆಸ್ಪತ್ರೆ ಅರ್ಪಣೆ ಮಾರ್ಗದರ್ಶಕರು ಡಾ. ಸುಮಾ.ಡಿ ಸಹ ಪ್ರಾಧ್ಯಾಪಕರು ಸರ್ಕಾರಿ ಕಲಾ ಕಾಲೇಜು, ಬೆಂಗಳೂರು ಅರ್ಪಿಸುವವರು ಸಂಶೋಧನಾ ವಿದ್ಯಾರ್ಥಿ: ಮಮತ. ಆರ್ ನಾಲ್ಕನೇ ಸೆಮಿಸ್ಟರ್ ಎಂ . ಎ . ಇತಿಹಾಸ ನೋಂದಣಿ ಸಂಖ್ಯೆ:P18CX23A0420 03 2024-2025

ಮೌಲ್ಯಮಾಪನ ವರದಿ ಸರ್ಕಾರಿ ಕಲಾ ಕಾಲೇಜಿನ ಎಂ . ಎ . ಇತಿಹಾಸ ಸ್ನಾತಕೋತ್ತರ ಪದವಿಗಾಗಿ ವಿದ್ಯಾರ್ಥಿ ಮಮತ.ಆರ್. ನೊಂದಣಿ ಸಂಖ್ಯೆ : P18CX23A0420 03 , ಅವರು ಸಿದ್ಧಪಡಿಸಿ ಸಲ್ಲಿಸಿರುವ “ ವಿಕ್ಟೋರಿಯಾ ಆಸ್ಪತ್ರೆ ” ಎಂಬ ಶೀರ್ಷಿಕೆಯ ಹಿಸ್ಟರಿ ಅಂಡ್ ಕಂಪ್ಯೂಟಿಂಗ್ ಎಂಬ ಪತ್ರಿಕೆಯ ಕಿರು ಸಂಶೋಧನಾ ಚಿತ್ರ ಪ್ರಬಂಧವು ಒಪ್ಪಿತವಾಗಿರುತ್ತದೆ ಎಂದು ದೃಢೀಕರಿಸಲಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ನಿಯಮಾವಳಿಯಂತೆ ಈ ಕಿರು ಸಂಶೋಧನಾ ಚಿತ್ರ ಪ್ರಬಂಧವು ಸ್ನಾತಕೋತ್ತರ ಪದವಿಗಾಗಿ ಪೂರ್ಣಗೊಂಡಿರುತ್ತದೆ . ದಿನಾಂಕ : ಸ್ಥಳ : ಬೆಂಗಳೂರು 1. ಪರಿವೀಕ್ಷಕರ ಸಹಿ 2. ಪರಿವೀಕ್ಷಕರ ಸಹಿ

ವಿದ್ಯಾರ್ಥಿಯ ಘೋಷಣಾ ಪತ್ರ ಈ ಮೂಲಕ ಪ್ರಮಾಣೀಕರಿಸುವುದೇನೆಂದರೆ ಸ್ನಾತಕೋತ್ತರ ಪದವಿಗಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ “ ವಿಕ್ಟೋರಿಯಾ ಆಸ್ಪತ್ರೆ ” ಎಂಬ ಶೀರ್ಷಿಕೆಯ ಕಿರು ಸಂಶೋಧನಾ ಚಿತ್ರ ಪ್ರಬಂಧವನ್ನು ಸಲ್ಲಿಸಿರುತ್ತೇನೆ . ಈ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನಾನು ವಿವಿಧ ಮೂಲಗಳಿಂದ ಸಂಗ್ರಹಿಸಿರುತ್ತೇನೆ. ಈ ಕಿರು ಪ್ರಬಂಧದ ಯಾವುದೇ ಭಾಗವನ್ನು ಭಾಗಶಃ ಅಥವಾ ಪೂರ್ಣವಾಗಿಯಾಗಲಿ ಯಾವುದೇ ವಿಶ್ವವಿದ್ಯಾಲಯದ ಡಿಪ್ಲೋಮೋ / ಸರ್ಟಿಫಿಕೇಟ್ ಗಳ ಪದವಿಗಾಗಿ ಸಲ್ಲಿಸಿರುವುದಿಲ್ಲವೆಂದು ಈ ಮೂಲಕ ದೃಡೀಕರಿಸುತ್ತೇನೆ. ಮಮತ.ಆರ್ ನಾಲ್ಕನೇ ಸೆಮಿಸ್ಟರ್ ಎಂ . ಎ .ಇತಿಹಾಸ ನೋಂದಣಿ ಸಂಖ್ಯೆ :P18CX23A0420 03 ದಿನಾಂಕ: ಸ್ಥಳ: ಬೆಂಗಳೂರು

ಮಾರ್ಗದರ್ಶಕರ ದೃಢೀಕರಣ ಪತ್ರ ಈ ಮೂಲಕ ದೃಢೀಕರಿಸುವುದೇನೆಂದರೆ “ ವಿಕ್ಟೋರಿಯಾ ಆಸ್ಪತ್ರೆ ” ಎಂಬ ಕಿರು ಸಂಶೋಧನಾ ಚಿತ್ರ ಪ್ರಬಂದವನ್ನು ವಿದ್ಯಾರ್ಥಿ ಮಮತ.ಆರ್ , ನಾಲ್ಕನೇ ಸೆಮಿಸ್ಟರ್ , ಎಂ . ಎ . ಇತಿಹಾಸ , ನೋಂದಣಿ ಸಂಖ್ಯೆ: P18CX23A042003 ಅವರು ಸಲ್ಲಿಸಿರುತ್ತಾರೆ. ಇದು ಪ್ರಾಥಮಿಕ ಹಾಗೂ ದ್ವಿತೀಯ ಆಕರಗಳ ಅಧ್ಯಯನದ ಮೂಲ ಸಂಶೋಧನೆಯಾಗಿದೆ. ಈ ಸಂಶೋಧನೆಯನ್ನು ಸ್ನಾತಕೋತ್ತರ ಪದವಿಯ ಭಾಗವಾಗಿ 2024-2025 ನೇ ಶೈಕ್ಷಣಿಕ ಸಾಲಿನಲ್ಲಿ ನನ್ನ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರೈಸಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ನಿಯಮಾವಳಿಯಂತೆ ಈ ಕಿರು ಸಂಶೋಧನಾ ಚಿತ್ರ ಪ್ರಬಂಧವು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಪೂರ್ಣಗೊಂಡಿರುತ್ತದೆ . ಮಾರ್ಗದರ್ಶಕರು

ದೃಢೀಕರಣ ಪತ್ರ ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ 2024 - 25 ನೇ ಶೈಕ್ಷಣಿಕ ಸಾಲಿನಲ್ಲಿ ಹಿಸ್ಟರಿ ಅಂಡ್ ಕಂಪ್ಯೂಟಿಂಗ್ ಪತ್ರಿಕೆಯಲ್ಲಿ, ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿ ಮಮತ .ಆರ್ ಎಂ.ಎ. ಹಿಸ್ಟರಿ, 4ನೇ ಸೆಮಿಸ್ಟರ್ ನೋಂದಣಿ ಸಂಖ್ಯೆ : P18CX23A042003 , ರವರು ಕಿರು ಸಂಶೋಧನಾ ಚಿತ್ರ ಪ್ರಬಂಧವನ್ನು ಸಲ್ಲಿಸಿರುತ್ತಾರೆ. ಇದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ಈ ಮೂಲಕ ದೃಢೀಕರಿಸುತ್ತೇವೆ . ಈ ಕಿರು ಸಂಶೋಧನಾ ಚಿತ್ರಪ್ರಬಂಧದ ಯಾವುದೇ ಭಾಗವನ್ನು ಭಾಗಶಃ ಅಥವಾ ಪೂರ್ಣವಾಗಿಯಾಗಲಿ ಯಾವುದೇ ವಿಶ್ವವಿದ್ಯಾಲಯದ ಡಿಪ್ಲೋಮೋ / ಸರ್ಟಿಫಿಕೇಟ್ ಗಳ ಪದವಿಗಾಗಿ ಸಲ್ಲಿಸಿರುವುದಿಲ್ಲವೆಂದು ದೃಢೀಕರಿಸುತ್ತೇವೆ. ಸಂಯೋಜಕರು ಪ್ರಾಂಶುಪಾಲರು

ಈ ಕಿರು ಸಂಶೋಧನಾ ಚಿತ್ರ ಪ್ರಬಂಧವು ಅತ್ಯಂತ ಜವಾಬ್ದಾರಿಯಿಂದ ಕೂಡಿದ ಕೆಲಸವಾಗಿದೆ . ಈ ಕಾರ್ಯವನ್ನು ಪೂರೈಸುವಲ್ಲಿ ನಿರಂತರ ಮಾರ್ಗದರ್ಶನ ನೀಡಿದ ನನ್ನ ಮಾರ್ಗದರ್ಶಕರಾದ ಡಾ . ಸುಮಾ . ಡಿ ಮೇಡಂ ಅವರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಅರ್ಪಿಸುತ್ತೇನೆ , ಕಿರು ಸಂಶೋಧನಾ ಚಿತ್ರ ಪ್ರಬಂಧವನ್ನು ಪೂರೈಸಲು ಸಹಾಯ ಮತ್ತು ಸಹಕಾರ ನೀಡಿದ ನಮ್ಮ ವಿಭಾಗದ ಸಂಯೋಜಕರಾದ ಡಾ . ಹೆ ಚ್ . ಜಿ . ನಾರಾಯಣ ಸರ್ ಅವರಿಗೆ ‌, ನಮ್ಮ ಕಾಲೇಜಿನ ಗ್ರಂಥಪಾಲಕರಿಗೂ ಹಾಗೂ ಗಣಕಯಂತ್ರ ಪ್ರಯೋಗಾಲಯವನ್ನು ಒದಗಿಸಿಕೊಟ್ಟ ನಮ್ಮ ಕಾಲೇಜಿನ ಪ್ರಾಂಶುಪಾಲ ರಾ ದ ಡಾ.ಬಿ.ಸಿ.ನಾಗೇಂದ್ರಕುಮಾರ್‌ ಸರ್‌ ಅವರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ . ಮಮತ.ಆರ್ ನಾಲ್ಕನೇ ಸೆಮಿಸ್ಟರ್ ಎಂ ಎ ಇತಿಹಾಸ ನೋಂದಣಿ ಸಂಖ್ಯೆ : P18CX23A0420 03 ಕೃತಜ್ಞತೆಗಳು

7

ವಿಕ್ಟೋರಿಯಾ ಆಸ್ಪತ್ರೆ 8

ಪರಿವಿಡಿ ಪೀಠಿಕೆ ವಿಕ್ಟೋರಿಯಾ ಆಸ್ಪತ್ರೆಯ ಇತಿಹಾಸ ಹಿನ್ನಲೆ A. ದೇವಿ ಕೆಂಪನಂಜಮ್ಮಣಿಯವರು B. ವಿಕ್ಟೋರಿಯಾ ರಾಣಿ 3. ವಿಕ್ಟೋರಿಯಾ ಆಸ್ಪತ್ರೆ ಉದ್ದೇಶ 4. ಬೆಂಗಳೂರು ಏಕೆ ? 5. ವಿಕ್ಟೋರಿಯಾ ಆಸ್ಪತ್ರೆಯ ವಾಸ್ತುಶಿಲ್ಪಾ 6. ಬೆಂಗಳೂರು ವಿದ್ಯಾಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ 7. ವಿಕ್ಟೋರಿಯಾ ಆಸ್ಪತ್ರೆಯ ವರ್ಷವಾರು ಬೆಳವಣಿಗೆ 8. ವಿಭಾಗಗಳು 9. ಪ್ರಸ್ತುತ ಆಸ್ಪತ್ರೆಯ ಫೋಟೋಗಳು 10. ಆಸ್ಪತ್ರೆಯ ಸುತ್ತಮುತ್ತಲಿನ ಇತರೆ ಆಸ್ಪತ್ರೆಯ ಪರಿಚಯ 11. ಉಪಸಂಹಾರ 9

ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ 10

ಪೀಠಿಕೆ 1689ರಲ್ಲಿ ಮೊಘಲರು ಬೆಂಗಳೂರನ್ನು ಚಿಕ್ಕ ದೇವರಾಜ ಒಡೆಯರಿಗೆ 3 ಲಕ್ಷಕ್ಕೆ ಮಾರಿದರು . ತದ ನಂತರ ಇದು ಟಿಪ್ಪು ಸುಲ್ತಾನನ ಅಧೀನಕ್ಕೆ ಬಂದಾಗ 1799ರ 4ನೇ ಆಂಗ್ಲೋ – ಮೈಸೂರು ಯುದ್ಧದ ತರುವಾಯ ಮೈಸೂರು ರಾಜ್ಯ ಬ್ರಿಟಿಷರ ವಸಾಹತುಶಾಹಿ ಕೇಂದ್ರವಾಯಿತು . ಇದಾದ ನಂತರ ಬ್ರಿಟಿಷರು ಒಡೆಯರಿಗೆ ಮೈಸೂರು ರಾಜ್ಯವನ್ನು ಮರಳಿಕೊಟ್ಟಾಗ ಮೈಸೂರು ಒಡೆಯರು ಬ್ರಿಟಿಷರ ಅಧೀನದಲ್ಲಿದ್ದುಕೊಂಡೆ ಅವರು ಬೆಂಗಳೂರಿನಲ್ಲಿ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡರು . ಅದರ ಫಲಾನುಭವವೇ ವಾಣಿ ವಿಲಾಸ ಆಸ್ಪತ್ರೆ , ವಿಕ್ಟೋರಿಯಾ ಆಸ್ಪತ್ರೆ , ಮಿಂಟೋ ಕಣ್ಣಿನ ಆಸ್ಪತ್ರೆ . 11

A. ದೇವಿ ಕೆಂಪನಂಜಮ್ಮಣಿಯವರು ಸೌಭಾಗ್ಯವತಿ ಮಹಾರಾಣಿ ಶ್ರೀ ವಾಣಿ ವಿಲಾಸ ಸನ್ನಿಧಾನ ಕೆಂಪನಂಜಮ್ಮಣಿ ಅವರು 1895 ರಿಂದ 1902ರ ವರೆಗೆ ಮೈಸೂರಿನ ರಾಣಿಯಾಗಿದ್ದರು . ಅವರು ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ರವರ ಪತ್ನಿ ಮತ್ತು ಮಹಾರಾಜ ನಾಲ್ಕನೇ ಒಡೆಯರ್ ರವರ ತಾಯಿ . ಮೈಸೂರು ಇತಿಹಾಸದಲ್ಲಿ ಇವರು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ . ನಾಗರೀಕರಿಗೆ ಅವರು ನೀಡಿದ ಕೊಡುಗೆಗಳು ಹಾಗೂ ಯುವ ರಾಜಕುಮಾರ ನಾಲ್ಕನೇ ಕೃಷ್ಣರಾಜ ಒಡೆಯರ್ ರವರ ತಾಯಿಯಾಗಿ , ಭಾರತದ ಅತ್ಯಂತ ಪ್ರಸಿದ್ಧ ಆಡಳಿತಗಾರರಲ್ಲಿ ಒಬ್ಬ ಶ್ಲಾಘನೀಯ ಆಡಳಿತಗರ್ತಿಯಾಗಿ ಉಳಿದಿದ್ದಾರೆ . ಮೈಸೂರು ರಾಣಿಯರ ಇತಿಹಾಸದಲ್ಲಿ ಮೂರು ಅಪರೂಪದ ರತ್ನಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ . ದೇವಿ ಕೆಂಪನಂಜಮ್ಮಣಿಯವರು 12 ವಿಕ್ಟೋರಿಯಾ ಆಸ್ಪತ್ರೆಯ ಇತಿಹಾಸ ಹಿನ್ನಲೆ

B. ವಿಕ್ಟೋರಿಯಾ ಹೆಸರಿನ ಹಿನ್ನಲೆ ಒಡೆಯರ್ ಮನೆತನದ ಪ್ರಸಿದ್ಧ ರಾಣಿಯಾದ ಕೆಂಪನಂಜಮ್ಮಣಿ ಅವರು 1895 ರಲ್ಲಿ ಮೈಸೂರು ರಾಜ್ಯಕ್ಕೆ ಪ್ಲೇಗ್ ಸಾಂಕ್ರಾಮಿಕ ರೋಗ ಹರಡುತ್ತಿದಿದ್ದನ್ನು ಮನಗಂಡು , ರಾಣಿಯಗಿದ್ದ ಕೆಂಪನಂಜಮ್ಮಣಿ ಅವರು 22ನೇ ಜೂನ್ 1897ರಲ್ಲಿ ಬೆಂಗಳೂರಿನಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಲು ಯೋಜಿಸಿದಾಗ ಅದೇ ಸಮಯಕ್ಕೆ ವಿಕ್ಟೋರಿಯಾ ರಾಣಿಯವರ 60nನೇ ವರ್ಷದ ಜನ್ಮದಿನೊತ್ಸವದ ನೆನಪಿಗಾಗಿ ಅವರು ನಿರ್ಮಿಸಲು ಯೋಜಿಸಿದ್ದ ಆಸ್ಪತ್ರೆಗೆ ವಿಕ್ಟೋರಿಯಾ ಆಸ್ಪತ್ರೆ ಎಂದು ನಾಮಕರಣ ಮಾಡಿದರು . ಇದನ್ನು ಮಾರ್ಚ್ 21, 1791ರಂದು ಲಾರ್ಡ್ ಕಾರ್ನ್ ವಾಲೀಸ್ ಟಿಪ್ಪು ಸುಲ್ತಾನನಿಂದ ವಶಪಡಿಸಿಕೊಂಡ . ಬೆಂಗಳೂರಿನಲ್ಲಿ ಅಂದಿನ ಬ್ರಿಟಿಷ್ ವೈಸ್ ರಾಯ್ ಆಗಿದ್ದ ಲಾರ್ಡ್ ಕರ್ಜನ್ ರವರು ಡಿಸೆಂಬರ್ 8, 1900ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಉದ್ಘಾಟಿಸಿದರು . ರಾಣಿ ವಿಕ್ಟೋರಿಯಾ ( ಕ್ರಿ . ಶ 1837 – 1901 ) 13

ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಮುಖ್ಯ ಉದ್ದೇಶವೇನೆಂದರೆ : ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯು ಸಾಮಾನ್ಯ ಜನತೆಗೆ ಉಚಿತ ಮತ್ತು ಮುಕ್ತ ಅರೋಗ್ಯ ಸೇವೆಗಳನ್ನು ಒದಗಿಸುವುದರ ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಸ್ಪತ್ರೆಯ ತರಬೇತಿ ಕೇಂದ್ರವಾಗಿ ಬಳಸಲಾಗಿದೆ ವಿವರವಾಗಿ ನೋಡಿ 1. ಸಾರ್ವಜನಿಕ ಆರೋಗ್ಯ ಬಡವರ್ಗದ ಜನರಿಗೆ ಉಚಿತ ಹಾಗೂ ಕಡಿಮೆ ದರದಲ್ಲಿ ವೈದ್ಯಕೀಯ ನೀಡುವ ಸಲುವಾಗಿ . ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ 24/7 ಚಿಕಿತ್ಸಾ ಸೇವೆ . ಗ್ರಾಮೀಣ ಭಾಗದ ರೋಗಿಗಳಿಗೂ ಲಭ್ಯವಿರುವ ನಂಬಿಕಾಸ್ಪದ ಅರೋಗ್ಯ ಕೇಂದ್ರವಾಗಿದೆ . ಅಪಘಾತ , ಹೃದಯಾಘಾತ , ಜ್ವರ , ಗಾಯಗೊಳ್ಳುವಂತಹ ಮುಂತಾದ ತುರ್ತು ಚಿಕಿತ್ಸೆಗಳಲ್ಲಿ ತಕ್ಷಣ ಚಿಕಿತ್ಸೆ ನೀಡಲಾಗುತ್ತದೆ . ಸಾರ್ವಜನಿಕರ ಜೀವ ರಕ್ಷಣೆಗಾಗಿ ವೇಗದ ವೈದ್ಯಕೀಯ ಸೇವೆ ಒದಗಿಸುತ್ತದೆ . 2. ವೈದ್ಯಕೀಯ ಶಿಕ್ಷಣ ಮತ್ ತು ತರಬೇತಿ ಬೆಂಗಳೂರು ಮೆಡಿಕಲ್ ಕಾಲೇಜು ( BMCRI ) ಗೆ ಸೇರಿದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಿ ಹಾಸ್ಪಿಟಲ್ ತರಬೇತಿ ನೀಡುವುದು . ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿ ಚಿಕಿತ್ಸಾ ಅನುಭವ ಕಲಿಸಲು . ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಸ್ಪಿಟಲ್ನಲ್ಲಿ ನೇರ ಚಿಕಿತ್ಸಾ ಅನುಭವ ದೊರೆಯುತ್ತದೆ . ಇಂಟರ್ನ್ಶಿಪ್ ಮತ್ತು ಕ್ಲಿನಿಕಲ್ ಪ್ರಾಕ್ಟೀಸ್ ನಿಗದಿತವಾಗಿ ನಡೆಯುತ್ತದೆ . ವಿವಿಧ ತಜ್ಞ ವಿಭಾಗಗಳು : - ಶಸ್ತ್ರಚಿಕಿತ್ಸೆ , ಹೃದಯ ವರೋಗ , ನ್ಯೂರೋಲಾಜಿ , ಮಹಿಳಾ ಹಾಗೂ ಮಕ್ಕಳ ವಿಭಾಗಗಳು ಇನ್ನಿತರ ವಿಭಾಗಗಳಾಗಿ ಕಾರ್ಯನಿರ್ವಹಿಸುತ್ತಿದೆ . 14

3. ಆರೋಗ್ಯ ಸಂಶೋಧನೆ ವೈದ್ಯಕೀಯ ಕ್ಷೇತ್ರದಲ್ಲಿ ನವೀನ ಸಂಶೋಧನೆ ನಡೆಸಲು . ವೈದ್ಯರು , ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿಗಳ ಹೊಸ ಚಿಕಿತ್ಸಾ ವಿಧಾನಗಳನ್ನು ಅದ್ಯಾಯನ ಮಾಡಬಹುದು . ಪಬ್ಲಿಕ್ ಹೆಲ್ತ್ ಸಮಸ್ಯೆಗಳನ್ನು ಆಧಾರಿತ ಸಂಶೋಧನೆಯಾಗಿ ಕಾರ್ಯನಿರ್ವಹಿಸುತ್ತಿದೆ . ವೈದ್ಯಕೀಯ ಸಾಧನ , ಔಷದಿ , ಚಿಕಿತ್ಸಾ ವಿಭಾಗಗಳಲ್ಲಿ ಸುಧಾರಣೆಗೊಂಡಿದೆ . ಸರ್ಕಾರಿ ಆರೋಗ್ಯ ನೀತಿಗಳ ಅನುಷ್ಠಾನಕ್ಕಾಗಿ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ . 4. ಧರ್ಮದರ್ಶಿ ಮತ್ತು ಸಮಾಜ ಸೇವೆ ದೃಷ್ಟಿಯಿಂದ . ಅಂದಿನ ಕಾಲಕ್ಕೆ ಇತ್ತೀಚಿನ ವೈದ್ಯಕೀಯ ತಂತ್ರಸೇವೆ ಮತ್ತು ಸಂಶೋಧನೆ ಮಾಡಬಹುದಾದ ವ್ಯವಸ್ಥೆಗಳು ಇಂದಿಗೆ ಇವೆ . ಈ ಆಸ್ಪತ್ರೆಯು ತನ್ನ ಆರಂಭದ ದಿನಗಳಿಂದ ಧರ್ಮದರ್ಶಿ ಮನೋಭಾವದಿಂದ ಬಡವರಿಗೆ ತೊಂದರೆ ಇಲ್ಲದಂತೆ ಚಿಕಿತ್ಸೆ ನೀಡುತ್ತಿದೆ . ಧರ್ಮಶಾಲೆ ಮತ್ತು ಉಚಿತ ವಾಸಸ್ಥಳ ವ್ಯವಸ್ಥೆ ಇಲ್ಲದ ಕುಟುಂಬಗಳಿಗೆ ಸಹಾಯ . ಮಾಡುವ ನಿರ್ದಿಷ್ಟ ವ್ಯವಸ್ಥೆಯಾಗಿದೆ . ಸಾರ್ವಜನಿಕ ಜವಾಬ್ದಾರಿ ನಿಭಾಯಿಸಲು ಹಾಗೂ ಆರೋಗ್ಯ ಜಾಗೃತಿ ಮೂಡಿಸಲು ವಿಕ್ಟೋರಿಯಾ ಹಾಸ್ಪಿಟಲ್ ವಿವಿಧ ಆರೋಗ್ಯ ಶಿಬಿರಗಳು , ಲಸಿಕೆ ಕಾರ್ಯಕ್ರಮಗಳು , ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ . ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಸಹಭಾಗಿಯಾಗಿ ಕಾರ್ಯಕ್ರಮ ನಿರ್ವಸುತ್ತಿದೆ . : ಟಿಬಿ , ಎ ಐ ಡಿ ಎಸ್ , ಸಿ ಒ ವಿ ಐ ಡಿ , ಮಲೇರಿಯಾ , ಡೆಂಗ್ಯೂ . ಮಹಿಳಾ ಅರೋಗ್ಯ , ಮಹಿಳಾ ಪೋಷಣಾ ಕಾರ್ಯಕ್ರಮಗಳಲ್ಲಿ ಸಹಭಾಜಿಯಾಗಿದೆ . 15

ಬೆಂಗಳೂರು ಏಕೆ ? ವಿಕ್ಟೋರಿಯಾ ಆಸ್ಪತ್ರೆ ಕಟ್ಟಿಸಲು ಬೆಂಗಳೂರನ್ನು ಆಯ್ಕೆ ಮಾಡಲು ಹಲವಾರು ಪ್ರಮುಖ ಕಾರಣಗಳಿವೆ . ಈ ಕಾರಣಗಳನ್ನು ಐತಿಹಾಸಿಕ ಹಾಗೂ ಬೌಗೋಳಿಕ ಹಿನ್ನಲೆಯಲ್ಲಿ ಈ ಕೆಳಗಿನಂತೆ ವಿವರಿಸಲಾಗಿದೆ . 1. ಭೌಗೋಳಿಕಹವಾಮಾನ ಸೂಕ್ತತೆ ಬೆಂಗಳೂರು ಸಮುದ್ರಮಟ್ಟದಿಂದ ಸುಮಾರು 920 ಎತ್ತರದಲ್ಲಿದೆ . ಇಲ್ಲಿನ ತಂಪಾದ , ಒರಟಲ್ಲದ ಹವಾಮಾನ , ವಿಶೇಷವಾಗಿ ಬ್ರಿಟಿಷ್ ಅಧಿಕಾರಗಳಿಗೆ ಅರೋಗ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿದೆ . ಉಷ್ಣ ಮತ್ತು ತೇವವಾತಾವರಣದಿಂದ ಉಂಟಾಗುವ ರೋಗಗಳು ( ಮಲೇರಿಯಾ , ಕಾಫ್ಪೋಕ್ಸ್ , ಡೆಂಗ್ಯೂ ) ಇತರ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಕಡಿಮೆ ಇರುತ್ತದೆ . ತಂಪಾದ ಮತ್ತು ಆರೋಗ್ಯಕರವಾದ ಹವಾಮಾನ ದೊರೆಯುತ್ತದೆ . 2. ಆದೇಶಾತ್ಮಕ ಶಕ್ತಿ ಕೇಂದ್ರ – ಬ್ರಿಟಿಷ್ ಕಾಂಟೋನ್ಮೆಂಟ್ . 1809ರಲ್ಲಿ ಬ್ರಿಟಿಷರು ಬೆಂಗಳೂರಿನಲ್ಲಿ ತಮ್ಮ ಸೈನಿಕ ಶಿಬಿರವನ್ನು ಸ್ಥಾಪಿಸಿದರು . ( Contonment Area ). ಇದರಿಂದ ನಗರದಲ್ಲಿ ಆಧುನಿಕ ರೋಗ ಚಿಕಿತ್ಸಾ ಸೌಲಭ್ಯಗಳ ಅಗತ್ಯ ಉಂಟಾಯಿತು . ಅನೇಕ ಯುರೋಪಿಯನ್ ( ಬ್ರಿಟಿಷ್ ) ಸೈನಿಕರು ಇಲ್ಲಿಗೆ ಬಂದು ನೆಲೆಸಿದ ಕಾರಣ , ಆರೋಗ್ಯ ಸೇವೆಗೆ ಉತ್ತಮ ಆಸ್ಪತ್ರೆ ಅಗತ್ಯವಾಯಿತು . ಬ್ರಿಟಿಷ್ ಸೈನಿಕ ಶಿಬಿರ ಮತ್ತು ಆಡಳಿತಾತ್ಮಕ ಕೇಂದ್ರವಾಗಿ ಕಾರ್ಯನಿರ್ವಹಿಸಲು ಸಹಾಯಕವಾಗಿದೆ . 16

3. ಮೈಸೂರು ಸಂಸ್ಥಾನದ ರಾಜಕೀಯ ಬೆಂಬಲ ಮೈಸೂರು ಸಂಸ್ಥಾನದ ರಾಜಕುಮಾರರು ( ಉದಾ : ನರಸಿಂಹರಾಜ ಒಡೆಯರ್, ಕಂಠಿರವ ಒಡೆಯರ್ ) ಬ್ರಿಟಿಷರೊಂದಿಗೆ ಸ್ನೇಹಪೂರ್ಣ ಸಂಬಂಧ ಹೊಂದ್ದಿದರು . ಮೈಸೂರು ಸಂಸ್ಥಾನವು ಸಾರ್ವಜನಿಕ ಆರೋಗ್ಯ , ಶಿಕ್ಷಣ , ನೀರಾವರಿ , ಕಾನೂನು ವ್ಯವಸ್ಥೆಗಳಿಗೆ ಆದ್ಯತೆ ನೀಡುತ್ತಿತ್ತು . ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣದ ವೇಳೆ ಮೈಸೂರು ಸಂಸ್ಥಾನದಿಂದ ಭೂಮಿ ಮತ್ತು ಆರ್ಥಿಕ ಸಹಾಯ ದೊರೆಯಿತು . ಮೈಸೂರು ಸಂಸ್ಥಾನದ ರಾಜಕೀಯ ಹಾಗೂ ಆರ್ಧಿಕ ಸಹಾಯ ನೀಡಿ ಸಹಕರಿಸಿತು . ವಿಕ್ಟೋರಿಯಾ ರಾಣಿ ಸ್ಮಾರಕವಾಗಿ ನಿರ್ಮಾಣ ಬ್ರಿಟಿಷ್ ಇಂಗ್ಲೆಂಡ್ನ ರಾಣಿ ವಿಕ್ಟೋರಿಯಾ ಅವರು 1901ರಲ್ಲಿ ನಿಧನರಾದರೂ . ಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಆಕೆಯ ಹೆಸರಿನಲ್ಲಿ ಸ್ಮಾರಕ ಕಟ್ಟಡಗಳು ನಿರ್ಮಿಸಲ್ಪಟ್ಟವು . ಈ ಹಾಸ್ಪಿಟಲ್ ಕೂಡ “ Victoria Jubilee Institute “ ಎಂಬ ಹೆಸರಿನಲ್ಲಿ ಆರಂಭಗೊಂಡಿತು , ನಂತರ “ Victoria Hospitl “ ಎಂಬಾಗಿ ಪರೀತಿರ್ತ ವಾಯಿತು . ರಾಜಕೀಯವಾಗಿ ಸ್ಮಾರಕ ವಿಕ್ಟೋರಿಯಾ ರೂಪದಲ್ಲಿ ರಾಣಿ ವಿಕ್ಟೋರಿಯಾ ಆಸ್ಪತ್ರೆ ನಿರ್ಮಿಸಲಾಗಿವೆ . 17

5. ಸಾರ್ವಜನಿಕ ಆರೋಗ್ಯ ಸೇವೆಯ ಅಗತ್ಯತೆ 19ನೇ ಶತಮಾನದ ಕೊನೆಯಲ್ಲಿಯೇ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದ ಕಾರಣ , ಸಾರ್ವಜನಿಕ ಆರೋಗ್ಯದ ಜವಾಬ್ದಾರಿ ತೆಗೆದುಕೊಳ್ಳುವ ಆಸ್ಪತ್ರೆ ಅಗತ್ಯವಾಯಿತು . ವಿಕ್ಟೋರಿಯಾ ಆಸ್ಪತ್ರೆ ಸಾರ್ವಜನಿಕರೊಗು ಉಚಿತ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ನಿರ್ಮಿಸಲಾಯಿತು . ಈ ರೀತಿ ದಕ್ಷಿಣ ಭಾರತದ ಪ್ರಮುಖ ಸಾರ್ವಜನಿಕ ವೈದ್ಯಕೀಯ ಕೇಂದ್ರವಾಯಿತು . ವೈದ್ಯಕೀಯ ಶಿಕ್ಷಣ ಬೆಳವಣಿಗೆ ಕಾರಣವಾಗಿದೆ . ವೈದ್ಯಕೀಯ ಶಿಕ್ಷಣ ಕೇಂದ್ರವಾಗಿ ಬೆಳವಣಿಗೆ ಮುಂದೆ , ಬೆಂಗಳೂರು ಮೆಡಿಕಲ್ ಕಾಲೇಜು ( BMC ) 1955 ರಲ್ಲಿ ಸ್ಥಾಪನೆಯಾದಾಗ , ವಿಕ್ಟೋರಿಯಾ ಆಸ್ಪತ್ರೆ ತರಬೇತಿ ಆಸ್ಪತ್ರೆಯಾಗಿ ಪರಿಗಣಿಸಲಾಯಿತು . ಇಲ್ಲಿಯ ವೈದ್ಯರು ಭಾರತೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾರಂಭಿಸಿದರು . ಇಂದು ಇದು BMC ಗೆ ಸಂಪರ್ಕ ಹೊಂದಿರುವ ಪ್ರಮುಖ ತರಬೇತಿ ಆಸ್ಪತ್ರೆಯಾಗಿದೆಎಂಬುದು ಖಚಿತ . ಸಾರ್ವಜನಿಕ ಅರೋಗ್ಯ ಸೇವೆಗೆ ಅಗತ್ಯ ಚಿಕಿತ್ಸೆ ನೀಡುತ್ತದೆ . 18

7. ಸುತ್ತಮುತ್ತಲ ಜಿಲ್ಲೆಯವರಿಗೂ ಕೇಂದ್ರ ಬೆಂಗಳೂರಿಗೆ ಸಮೀಪದ ತುಮಕೂರು , ರಾಮನಗರ , ಚಿಕ್ಕಬಳ್ಳಾಪುರ , ಕೋಲಾರ , ಮೈಸೂರು ಮುಂತಾದ ಜಿಲ್ಲೆಗಳ ಜನರು ಚಿಕಿತ್ಸೆಗಾಗಿ ಇಲ್ಲಿ ಬರುತ್ತಿದ್ದರು . ಈ ಕಾರಣದಿಂದ ವಿಕ್ಟೋರಿಯಾ ಆಸ್ಪತ್ರೆ ಮಾತ್ರ ನಗರ ಕೇಂದ್ರವಾಗಲಿಲ್ಲ , ಅದು ಪ್ರಾದೇಶಿಕ ವೈದ್ಯಕೀಯ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿತ್ತು . ಸುತ್ತಮುತ್ತಲಿನ ಜಿಲ್ಲೆಗಳಿಗೂ ಚಿಕಿತ್ಸೆ ಉಪಯುಕ್ತವಾಗುವಂತೆ ಕಾರ್ಯ ನಿರ್ವಹಿಸುತ್ತಿದೆ . ಬೆಂಗಳೂರು ಬ್ರಿಟಿಷ್ ಕಾಲದಲ್ಲಿ ಗಾರ್ಡನ್ ಸಿಟಿ ಆಗಿಯೂ , ರಾಜಕೀಯ ಹಾಗೂ ಸೈನಿಕ ಕೇಂದ್ರವಾಗಿಯೂ ಪರಿಗಣಿಸಲಾಗಿತ್ತು ಜನಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದ್ದ ಕಾರಣದಿಂದಾಗಿಯೂ ಅರೋಗ್ಯ ಸೌಲಭ್ಯಗಳ ಅಗತ್ಯಕ್ಕಾಗಿ ಒಂದು ಕೇಂದ್ರಿಯ ವೈದ್ಯಕೀಯ ಘಟಕವಾಗಿ ರಾಜ್ಯದ ಎಲ್ಲಾ ಮೂಲಗಳಿಂದ ಬರುವಂತಹ ಬಡ ಜನರಿಗಾಗಿ ಲಭ್ಯವಿರುವ ರೀತಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ನಿರ್ಮಿಸಲು ನಿರ್ಧರಿಸಿದರು . 19

ವಿಕ್ಟೋರಿಯಾ ಆಸ್ಪತ್ರೆಯ ವಾಸ್ತುಶಿಲ್ಪದ ರಚನೆ 20

ವಾಸ್ತುಶಿಲ್ಪ ರಚನೆ ಕಟ್ಟಡದ ಮುಖ್ಯ ಬ್ಲಾಕ್ ( symmetrical ) ಸಮತೋಲಿತ ವಿನ್ಯಾಸ ಹೊಂದಿದ್ದು , ಒಳಾoಗಣದ ಕಮಾನುಗಳು ಮತ್ತು ಹಾರದ ಮಂಚಗಳು ( Corridors ) ಅತ್ಯಂತ ಆಕರ್ಷಕವಾಗಿದೆ . ಬಹುಪಾಲು ಕಟ್ಟಡವು ನೆಲಮಂಡಿಯಲ್ಲಿಯೇ ವಿನ್ಯಾಸಗೊಂಡಿದ್ದು ಉಚಿತವಾಗಿ ಗಾಳಿಯನ್ನು ಹೊಂದಿದೆ . ಹಳೆಯ ಮೈಸೂರು ಕಾಲದ ಬಂಗಾಳ ಕೋಟೆಯ ಕೆಲವೊಂದು ಕಲ್ಲುಗಳನ್ನು ಮರುಬಳಕೆ ಮಾಡಿ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಮಾಡಲಾಗಿದೆ . ಇದರಿಂದ ಇದು ಇತಿಹಾಸಪೂರ್ಣ ಕಟ್ಟಡವಾಗಿಯೂ ಪರಿಣಮಿಸಿದೆ . ಪ್ರಾಕೃತಿಕ ಬೆಳಕಿಗೆ ಅವಕಾಶ ನೀಡುವಂತಹ ದೊಡ್ಡ ಕಿಟಕಿಗಳು ಇವೆ . ವಾತಾವರಣಗಳನ್ನು ಗಮನದಲ್ಲಿಟ್ಟುಕೊಂಡು ನೀರಿನ ನಿರ್ವಹಣಾ ವ್ಯವಸ್ಥೆ ವಾತಾಯನ ವ್ಯವಸ್ಥೆ ( Ventilation ) ಒದಗಿಸಲಾಗಿದೆ . ಪಾವಿಲಿಯನ್ ಶೈಲಿಯನ್ನು ಸಹ ಒಳಗೊಂಡಿದೆ . ಅಂದರೆ , ವಿಭಿನ್ನ ವಿಭಾಗಗಳನ್ನು ವಿಭಜನೆ ಮಾಡಿದ್ದು , ಪ್ರತಿಯೊಂದು ವಿಭಾಗವು ತನ್ನದೇ ಆದ ಪ್ರತ್ಯೇಕ ಕಟ್ಟಡವಾಗಿದ್ದು ಮಧ್ಯಮ ವರ್ತಿಗಳಿಂದ ಸಂಪರ್ಕ ಹೊಂದಿರತ್ತದೆ . 21

ಮಾರುಕಟ್ಟೆಯ ಹತ್ತಿರ ಇರುವ ಹಳೆಯ ಕ್ಯಾಂಪಾಸ್ನಲ್ಲಿ ಶುಭಕರ ಕೋಣೆಗಳು , ಹಸಿರು ಗಿಡಮರಗಳು , ವಿಶಾಲ ವರಾಂಡಗಳು ಈ ವಾಸ್ತುಶಿಲ್ಪಕ್ಕೆ ವಿಶಿಷ್ಟತೆ ನೀಡಿದೆ . ಇದು ಕಬ್ಬನ್ ಪಾರ್ಕ್ ಶೈಲಿಯ ಶಿಲ್ಪಿಗಳು ಜೊತೆಗೆ ಹೋಲಿಕೆ ಮಾಡಬಹುದಾಗಿದೆ . ವಿಕ್ಟೋರಿಯಾ ಆಸ್ಪತ್ರೆಯು “ ಗೋಥಿಕ್ ಶೈಲಿ “ ಯಲ್ಲಿ ನಿರ್ಮಾಣವಾಗಿದ್ದು , ಈ ಶೈಲಿಯು ಯುರೋಪ್ ಖಂಡದ 12nನೇ ಶತಮಾನದಿಂದ 16ನೇ ಶತಮಾನದವರೆಗೂ ರಾಜಶೈಲಿಯಾಗಿ ಕಾಣಿಸಿಕೊಂಡಿದೆ . ಹಳೆಯ ಭಾಗಗಳು ಇಟ್ಟಿಗೆ ಹಾಗೂ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದ್ದು ಉನ್ನತಿ ಬೃಹತ್ ಬಾಗಿಲುಗಳು , ಆರ್ಚ್ ಗಳು , ಹಳೆಯ ಶೈಲಿಯ ನವೀನ ವಿನ್ಯಾಸ ರೀತಿಯಲ್ಲಿದೆ . ಇದನ್ನು ಸ್ಥಳೀಯ ಮೈಸೂರು ಸಂವಿಧಾನದಿಂದ ಹಾಗೂ ಇಂಜಿನಿಯರ್ಗಳು ಮತ್ತು ಶಿಲ್ಪಿಗಳು ಸೇರಿ ನಿರೂಪಿಸಿರುವ ಮಾದರಿಯಲ್ಲಿದೆ . 22

ವಿಕ್ಟೋರಿಯಾ ಆಸ್ಪತ್ರೆಯ ಪ್ರಾರಂಭದ ಸೌಲಭ್ಯಗಳು ವಿಕ್ಟೋರಿಯಾ ಆಸ್ಪತ್ರೆಯು 08ನೇ ಡಿಸೆಂಬರ್ 1900 ರಂದು ಪ್ರಾರಂಭವಾದಾಗ ಆಸ್ಪತ್ರೆಯಲ್ಲಿ ಕೇವಲ 100 ಹಾಸಿಗೆಗಳಿದ್ದವು . ನಂತರ ಏಳೂವರೆ ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡ , ಸಿಬ್ಬಂದಿಗಳಿಗೆ ವಸತಿಗೃಹಗಳು ಮತ್ತು ಹೊರ ಮನೆಗಳು ನಿರ್ಮಿಸಲಾಯಿತು . 1898ರಲ್ಲಿ ಪ್ಲೇಗ್ ಕಾಯಿಲೆ ಹರಡಿದಾಗ ಬೆಂಗಳೂರಿನ ಪೇಟೆಗಳಲ್ಲಿ ಮರಣದ ಹೆಚ್ಚುತ್ತಿರುವುದನ್ನು ಕಂಡು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಪ್ರಾರಂಭಿಸಿದರು . ಹಾಗೂ ನೀಡುತ್ತಿದ್ದ ಬಗ್ಗೆ ಗಣತಿಯನ್ನು ಅಂದಿನ ಮೈಸೂರು ಪ್ರಾಂತ್ಯದ ಬ್ರಿಟಿಷ್ ಸರ್ಕಾರ ತನ್ನ on The Administration of Mysore ವಾರ್ಷಿಕ ವರದಿಯಲ್ಲಿ ನಮೂದಿಸಲಾಗಿದೆ . 23

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಕರ್ನಾಟಕ ಸರ್ಕಾರ ನಡೆಸುತ್ತಿರುವ ವಿಕ್ಟೋರಿಯಾ ಆಸ್ಪತ್ರೆ 1981ರಲ್ಲಿ ಸ್ಥಾಪನೆಯಾಗಿದ್ದು ಈಗ ಇದನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಎಂದು ಮರುನಾಮಕರಣ ಮಾಡಲಾಗಿದೆ . ಇದು ಬೆಂಗಳೂರಿನ ಅತಿದೊಡ್ಡ ಆಸ್ಪತ್ರೆಯಾಗಿದ್ದು , ಈ ಕಾಲೇಜನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೈಸೂರು ಮಹಾರಾಜ ಶ್ರೀ ಕೃಷ್ಣ ರಾಜ ಒಡೆಯರ್ ಅವರಿಗೆ ಈ ಕೀರ್ತಿ ಸಲ್ಲುತ್ತದೆ . ದಕ್ಷಿಣ ಭಾರತದ ಕೆಲವೇ ಕಾಲಾಂತರದಲ್ಲಿ 1955ರ ವೇಳೆಗೆ ವಿಕ್ಟೋರಿಯಾ ಆಸ್ಪತ್ರೆಯು ಖಾಸಗಿಯಾಗಿ ಬೆಳೆಯುತ್ತಾ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ 1957ರಲ್ಲಿ ಮೈಸೂರು ಸರ್ಕಾರ ವಹಿಸಿಕೊಂಡಿತು . 1957 ರಿಂದ ವಾಣಿವಿಲಾಸ ಆಸ್ಪತ್ರೆ , ಮಿಂಟೋ ಕಣ್ಣಿನ ಆಸ್ಪತ್ರೆ , ವಿಕ್ಟೋರಿಯಾ ಆಸ್ಪತ್ರೆ ಈ ಸಂಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ . 24

ವಿಕ್ಟೋರಿಯಾ ಆಸ್ಪತ್ರೆಯ ವರ್ಷವಾರು ಅಭಿವೃದ್ಧಿಯ ಇತಿಹಾಸ ಮೂಲ ಉದ್ದೇಶ : ಸಾರ್ವಜನಿಕ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶೈಕ್ಷಣಿಕ್ಕಾಗಿ , ಈ ಆಸ್ಪತ್ರೆ ಸ್ಥಾಪನೆಯಾಯಿತು . 1. 1901 – ಸ್ಥಾಪನೆ : ವಿಕ್ಟೋರಿಯಾ ರಾಣಿ ನಿಧನದ ಸ್ಮರಣಾರ್ಥಕವಾಗಿ ಆಸ್ಪತ್ರೆ ಸ್ಥಾಪನೆ . ಆರಂಭದಲ್ಲಿ ಮೊತ್ತೆ 140 ಹಾಸಿನ ಸಾಮರ್ಥ್ಯದ ಸಾಮಾನ್ಯ ಆಸ್ಪತ್ರೆ . ಮೈಸೂರು ಸಂಸ್ಥಾನ ಮತ್ತು ಬ್ರಿಟಿಷ್ ಆಡಳಿತ ಸಹಕಾರದಿಂದ ನಿರ್ಮಾಣ . 2. 1933 - ವೈದ್ಯಕೀಯ ಕಾಲೇಜಿನ ಸಂಯೋಜನೆ : ಬೆಂಗಳೂರು ಮೆಡಿಕಲ್ ಕಾಲೇಜು ( BMCRI ) ಸ್ಥಾಪನೆಯೊಂದಿಗೆ , ವಿಕ್ಟೋರಿಯಾ ಆಸ್ಪತ್ರೆಯಾ Teaching Hospital ಆಗಿ ಪರಿವರ್ತಿತವಾಯಿತು . ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರ . 25

3. 1950 – 1970 - ಹೆಚ್ಚುವರಿ ವಿಭಾಗಗಳ ಸ್ಥಾಪನೆ : ಶಸ್ತ್ರಚಿಕಿತ್ಸಾ ವಿಭಾಗ , ಔಟ್ ಪೇಶೆಂಟ್ ವಿಭಾಗ ( OPD ), ರೋಗ ನಿರ್ಣಯ ಲ್ಯಾಬ್ ಅಭಿವೃದ್ಧಿ . ಮಕ್ಕಳ ವಾರ್ಡ್ , ಮಹಿಳಾ ವಾರ್ಡ್ ಮತ್ತು ತುರ್ತು ವಿಭಾಗ ಪ್ರಾರಂಭ . 4. 1980 – 1990 – ತಾಂತ್ರಿಕ ನವೀಕರಣ : ರೇಡಿಯೋಲಾಜಿ ವಿಭಾಗದಲ್ಲಿ X – Ray, Ultrasound ಜೋಡನೆ . ICU ಘಟಕ ಸ್ಥಾಪನೆ . ಹಾಸಿಗೆ ಸಾಮರ್ಥ್ಯ ಹೆಚ್ಚಳ . 5. 1995 – 2005 – ಸಂಶೋಧನೆ ಮತ್ತು ಪಿ . ಜಿ . ಶಿಕ್ಷಣ : Postgraduate ( MD / MS ) ಕೋರ್ಸ್ಗಳು ಆರಂಭ . ಸಂಶೋಧನಾ ಇಲಾಖೆಗಳ ಉದ್ಘಾಟನೆ . ಲ್ಯಾಪರೋಸ್ಕೊಪಿ , ನ್ಯೂರೋಸರ್ಜರಿ ವಿಭಾಗಗಳ ಆರಂಭ . 26

6. 2010 – 2020 – ಡಿಜಿಟಲೀಕರಣ ಮತ್ತು ಹೊಸ ಘಟಕಗಳು : Electronic Medical Records ( EMR ) CT Scan, MRI, ಡಯಾಲಿಸಿಸ್ ಘಟಕಗಳ ಸ್ಥಾಪನೆ . ಮಲ್ಟಿಸ್ಪೆಷಾಲಿಟಿ ICU ಗಳ ಜೋಡಣೆ . ಫ್ರೀ ಮೆಡಿಕಲ್ ಕ್ಯಾಂಪ್ಗಳು ಮತ್ತು ಸಾರ್ವಜನಿಕ ಶಿಕ್ಷಣ ಕಾರ್ಯಕ್ರಮಗಳು . 7. 2020 – 2021 – ಕೋವಿಡ್ -19 ಕಾಲದಲ್ಲಿ ಸೇವೆ : ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ . ಆಕ್ಸಿಜೆನ್ ಬೆಡ್ , ವೆಂಟಿಲೇಟರ್ , ರೋಗಿಯ ಪ್ರತ್ಯಕ್ಷ ಜಾಗೃತಿ ಕೇಂದ್ರ ( Triage ) ವ್ಯವಸ್ಥೆ . ಲಕ್ಷಾಂತರ ಜನರಿಗೆ ಚಿಕಿತ್ಸೆ - ಲಸಿಕೆ ವಿತರಣಾ ಕೇಂದ್ರವಾಗಿ ಕಾರ್ಯನಿರ್ವಾಹಣೆ . 8. 2022 – 2025 – ಆಧುನಿಕೀಕರಣ ಹಂತ : ಹೊಸ ಕಟ್ಟಡಗಳು , ಆಧುನಿಕ ಆಪರೇಷನ್ ಥಿಯೇಟರಗಳು ನಿರ್ಮಾಣ . ಡಿಜಿಟಲ್ ರಿಜಿಸ್ಟ್ರೆಷನ್ ಸಿಸ್ಟಮ್ . Public – Private partnership ( PPP ) ಮಾದರಿಯಲ್ಲಿ ಕೆಲವೊಂದು ಸೇವೆಗಳು . ನವೀನ ತಂತ್ರಜ್ಞಾನ ಹಾಗೂ ಸಂಶೋಧನೆಗೆ ಹೆಚ್ಚು ಪ್ರಾಮುಖ್ಯತೆ . 27

ಸಾರಾಂಶ ವರ್ಷವಾರು ಹಂತ ಬೆಳವಣಿಗೆ 1901 ಸ್ಥಾಪನೆ – ಸಾಮಾನ್ಯ ಆಸ್ಪತ್ರೆ 1933 ವೈದ್ಯಕೀಯ ಕಾಲೇಜು Teaching Hospital 1950-70 ವಿವಿಧ ವಿಭಾಗಗಳ ಸ್ಥಾಪನೆ 1980-90 ICU, ರೇಡಿಯೋಲಾಜಿ ಪ್ರಾರಂಭ 1995-2005 P. G ಕೋರ್ಸ್ , ಸಂಶೋಧನೆ 2010-2020 ಡಿಜಿಟಲೀಕರಣ , ಹೊಸ ಘಟಕಗಳು 2020-2021 ಕೋವಿಡ್ ಸೇವೆ 2022-2025 ಆಧುನಿಕೀಕರಣ , ಸುಧಾರಿತ ವೈದ್ಯಕೀಯ ತಂತ್ರಜ್ಞಾನ . 28

ವಿಭಾಗಗಳು ಉದಾಹರಣೆ : ವೈದ್ಯಕೀಯ ವಿಭಾಗ : ವಿಕ್ಟೋರಿಯಾ ಆಸ್ಪತ್ರೆ ಚರ್ಮರೋಗ ವಿಭಾಗ ಪ್ಲಾಸ್ಟಿಕ್ ಸರ್ಜರಿ ವಿಭಾಗ ರೋಗಶಾಸ್ತ್ರ ವಿಭಾಗ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗ ಶಸ್ತ್ರಚಿಕಿತ್ಸಾ ವಿಭಾಗ ಮನೋವೈದ್ಯಶಾಸ್ತ್ರ ವಿಭಾಗ ಆರ್ ಎನ್ ಟಿ ಸಿ ಪಿ ಇಲಾಖೆ ವಿಧಿವಿಜ್ಞಾನ ವೈದ್ಯಕೀಯ ವಿಭಾಗ ವೈದ್ಯಕೀಯ ವಿಭಾಗ ಚರ್ಮ ಮತ್ತು ಲೈಂಗಿಕ ರೋಗಗಳ ವಿಭಾಗ ಇ ಎನ್ ಟಿ ವಿಭಾಗ ಚರ್ಮ ಇಲಾಖೆ ಐ ಸಿ ಟಿ ಸಿ ವಿಭಾಗ ಅನಸ್ತಾಸಿಯಾ ಇಲಾಖೆ ಟೆಲಿಮೆಡಿಸಿನ್ ವಿಭಾಗ . 29 ಚಿಕಿತ್ಸೆ ನೀಡುವ ವೈದ್ಯರು ನೀಡಿದ ನಿರ್ದೇಶನದ ಮೇರೆಗೆ ವಿವಿಧ ವಿಭಾಗಗಳು ಅಗತ್ಯವಿರುವ ವಿಶೇಷ ಪರೀಕ್ಷೆಗಳನ್ನು ಮಾಡುತ್ತದೆ .

ವಿಭಾಗಗಳು Department of Nutrition and Dietetics ( ಪೋಷಣೆ ಮತ್ತು ಆಹಾರ ಪದ್ಧತಿ ಇಲಾಖೆ ) 30 1. ನಾವು ತೆಗೆದುಕೊಳ್ಳುವ ಅಥವಾ ತಪ್ಪಿಸುವ ಎಲ್ಲಾ ಆಹಾರಗಳು ಮತ್ತು ಪೋಷಕಾಂಶಗಳ ನಡುವಿನ ಸಮತೋಲನವು ಆರೋಗ್ಯದಲ್ಲಿ ಏರುಪೇರು ಉಂಟಾಗಿ ವಿಟಮಿನ್ ಕೊರತೆಗೆ ಕಾರಣವಾಗಿ ಅನಾರೋಗ್ಯ ಉಂಟಾಗುತ್ತದೆ . 2. ಪ್ರತಿ ರೋಗಿಗೆ ಸಮತೋಲನ ಪೌಷ್ಟಿಕಾಂಶದ ಸಾಕಷ್ಟು ಆಹಾರವನ್ನು ಒದಗಿಸುವುದು ಆಹಾರ ವಿಭಾಗದ ಪ್ರಾರ್ಥಮಿಕ ಉದ್ದೇಶವಾಗಿದೆ . 3. ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಆಹಾರ ವಿಭಾಗವು ರೋಗಿಗಳಿಗೆ ಅವರ ವೈದ್ಯಕೀಯ ಪರಿಸ್ಥಿತಿಗಳ ಆಧಾರದ ಮೇಲೆ ವೈದ್ಯರು ಸೂಚಿಸುವ ಚಿಕಿತ್ಸೆ ಆಹಾರದ ಅಗತ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ . 4. ವಿಕ್ಟೋರಿಯಾ ಆಸ್ಪತ್ರೆಯು ರೋಗಿಗಳಿಗೆ ಆಹಾರದ ಶಿಕ್ಷಣ ನೀಡುವ ಮೂಲಕ ಈ ಪ್ರಾಂತ್ಯದ ಜನತೆಗೆ ವಿಶಿಷ್ಟವಾದ ಮತ್ತು ಆರೋಗ್ಯದ ಚೇತರಿಕೆಗೆ ಕೊಡುಗೆ ನೀಡುವ ಉದ್ದೇಶ ಹೊಂದಿದೆ .

ಮೂಳೆ ಚಿಕಿತ್ಸೆ ವಿಭಾಗ ( Department of Orthopaedic ) 31 ಇತಿಹಾಸ - ಜೀನ್ ಆಂಡ್ರೆ ವೆನೆಲ್ 1780ರಲ್ಲಿ ಮೊದಲ ಮೂಳೆ ಶಸ್ತ್ರ ಚಿಕಿತ್ಸಾ ಸಂಸ್ಥೆಯನ್ನು ಸ್ಥಾಪಿಸಿದರು . ಆದ್ದರಿಂದ ಇವರನ್ನು ಅಸ್ಥಿ ಚಿಕಿತ್ಸೆಯ ಪಿತಾಮಹ ಎಂದು ಕರೆಯಲಾಗುತ್ತದೆ . 1. ಮೂಳೆ ಶಸ್ತ್ರ ಚಿಕಿತ್ಸೆ ಅಥವಾ ಅಸ್ಥಿ ಚಿಕಿತ್ಸೆ ಎಂಬುದು ಸ್ನಾಯು , ತಲೆಬುರುಡೆ , ಮೂಳೆ ವ್ಯವಸ್ಥೆಗೆ ಸಂಭಂದಿಸಿದ ಶಸ್ತ್ರ ಚಿಕಿತ್ಸೆಯ ವಿಭಾಗವಾಗಿದೆ . 2. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭುಜ ಮತ್ತು ಮೊಣಕೈ ಶಸ್ತ್ರ ಚಿಕಿತ್ಸೆ , ಕೀಲುಗಳ ಸಂಪೂರ್ಣ ಪುನಃನಿರ್ಮಾಣ , ಪಾದ ಮತ್ತು ಕಣಕಾಲಿನ ಶಸ್ತ್ರ ಚಿಕಿತ್ಸೆ , ಬೆನ್ನೆಲುಬು ಶಸ್ತ್ರ ಚಿಕಿತ್ಸೆ ಮುಂತಾದ ಶಸ್ತ್ರ ಚಿಕಿತ್ಸೆಗಳನ್ನು ಕಡಿಮೆ ಬೆಲೆಯಲ್ಲಿ ಮಾಡಲಾಗುತ್ತದೆ .

ರೋಗಶಾಸ್ತ್ರ ವಿಭಾಗ ( Department of pathology ) ಕೋವಿಡ್ – 19 ಕೋವಿಡ್ – 19ರ ಸಮಯದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕಡಿಮೆ ದರದಲ್ಲಿ ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದೆ . ಬೆಂಗಳೂರಿನಂತ ಮಹಾನಗರದ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇದ್ದರೂ ಈ ಆಸ್ಪತ್ರೆಯಲ್ಲಿ ಸುಮಾರು 1000 ಬೆಡ್ಗಳನ್ನು ಕೋವಿಡ್ – 19 ಕೇಂದ್ರವಾಗಿ ಪರಿವರ್ತಸಿ ಜನರಿಗೆ ಚಿಕಿತ್ಸೆ ಒದಗಿಸಿದೆ . ರೋಗಶಾಸ್ತ್ರವನ್ನು ಅಭ್ಯಾಸ ಮಾಡುವ ವೈದ್ಯರನ್ನು ರೋಗಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ . ರೋಗಶಾಸ್ತ್ರವು ರೋಗ ಅಥವಾ ಗಾಯದ ಕಾರಣಗಳು ಮತ್ತು ಪರಿಣಾಮಗಳ ಅಧ್ಯಯನವಾಗಿದ್ದು , ಇದು ವ್ಯಾಪಕ ಶ್ರೇಣಿಯ ಜೀವಶಾಸ್ತ್ರ ಸಂಶೋಧನಾ ಕ್ಷೇತ್ರಗಳು ಮತ್ತು ವೈದ್ಯಕೀಯ ಕಾರ್ಯಗಳನ್ನು ಒಳಗೊಂಡಿದೆ . ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ವಿಭಾಗದಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಜನರು ಚಿಕಿತ್ಸೆಯನ್ನು ಪಡೆಯುತ್ತಾರೆ . 32

ಮನೋವೈದ್ಯಶಾಸ್ತ್ರ ವಿಭಾಗ ( Department of psychiatry ) ಮನೋವೈದ್ಯಶಾಸ್ತ್ರ ವಿಭಾಗವನ್ನು 1972ರಲ್ಲಿ ಸ್ಥಾಪಿಸಲಾಯಿತು . ಮನೋವೈದ್ಯಶಾಸ್ತ್ರ ಒಂದು ವೈದ್ಯಕೀಯ ತಜ್ಞತೆಯಾಗಿದ್ದು , ಮಾನಸಿಕ ಅಸ್ವಸ್ಥೆಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದೆ . ಇದು ವಿವಿಧ ರೀತಿಯ ಭಾವಾತ್ಮಕ ವರ್ತನೆ , ಜ್ಞಾನಗ್ರಹಣ ಮತ್ತು ಇಂದ್ರಯಾತ್ಮಕ ಅಸ್ವಸ್ಥತೆಗಳನ್ನೂ ಒಳಗೊಂಡಿರುತ್ತದೆ . ಮಾನಸಿಕ ಅಸ್ವಸ್ಥತೆಯು ಮಿದುಳಿನ ನರವ್ಯೂಹದಲ್ಲಿ ಆಗಿರುವ ಕೆಲವು ನ್ಯೂನತೆಗಳು ಎಂದು ಕಲ್ಪಿಸಲಾಗಿದೆ . 33

ಪ್ಲಾಸ್ಟಿಕ್ ಸರ್ಜರಿ ವಿಭಾಗ ( department of plastic surgery ) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ವಿಭಾಗವು ಅತಂತ್ಯ ಹೆಸರುವಾಸಿಯಾಗಿದ್ದು , ಬೆಂಗಳೂರಿನಲ್ಲಿ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಬಡವರಿಗೆ ಉಪಕಾರಿಯಾಗಿದೆ . ಭಾರತಾದ್ಯಂತ ಹೆಸರುವಾಸಿಯಾದ ಏಕಮೇವ ಸುಟ್ಟಗಾಯಗಳ ಚಿಕಿತ್ಸಾ ವಿಭಾಗವಾಗಿ ಇದು ಕಾರ್ಯನಿರ್ವಹಿಸುತ್ತಿದೆ . ಪ್ರತಿದಿನ 60 ರಿಂದ 70 ಜನ ಒಳರೋಗಿಗಳಾಗಿ ದಾಖಲಾತಿ ಹೊಂದುತ್ತಾರೆ . ಈ ರೋಗಿಗಳಿಗೆ ಬೇಕಾದಂತಹ ತಕ್ಕ ಆಹಾರವನ್ನು ಆಸ್ಪತ್ರೆಯಲ್ಲಿಯೇ ತಯಾರಿಸಲು ಆಹಾರತಜ್ಞರು ನರವಾಗುತ್ತಾರೆ . ಇನ್ಫೋಸಿಸ್ ಟೆಕ್ನಾಲಜಿ ಫೌಂಡೇಶನ್ರವರು 40 ಲಕ್ಷ ರೂ . ಗಳ ವೆಚ್ಚದಲ್ಲಿ ಕೇಂದ್ರೀಕೃತ ಹವಾನಿಯಂತತ್ರಿಕ ಸೌಲಭ್ಯವನ್ನು ಈ ವಿಭಾಗಕ್ಕೆ ಒದಗಿಸಿದ್ದಾರೆ . 34

ಹೃದಯ ಹಾಗೂ ಶ್ವಾಸಕೋಶ ಚಿಕಿತ್ಸಾ ವಿಭಾಗ ( Department of Cardiothoracic Surgery ) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೃದಯ ಹಾಗೂ ಶ್ವಾಸಕೋಶ ಚಿಕಿತ್ಸಾ ವಿಭಾಗವು ಇದುವರೆಗೂ ಲಕ್ಷಾಂತರ ಬಡ ಜನರಿಗೆ ಚಿಕಿತ್ಸೆ ನೀಡಿದೆ . ಈ ವಿಭಾಗವು ಹೃದಯ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳನ್ನು ಪರಿಶೀಲಿಸುತ್ತಾ ಪರಿಹಾರಗಳನ್ನು ಹುಡುಕುತ್ತಿದೆ . 35

ಸೂಕ್ಷ್ಮ ಜೀವಶಾಸ್ತ್ರ ವಿಭಾಗ ( Department of Micro – Biology ) ಸೂಕ್ಷ್ಮ ಜೀವಶಾಸ್ತ್ರ ವಿಭಾಗವು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿಶೇಷ ವಿಭಾಗಗಳಿವೆ . ಕೋವಿಡ್ – 19 ಸಮಯದಲ್ಲಿ ಈ ವಿಭಾಗವು ಹೆಚ್ಚು ಕಾರ್ಯ ಪ್ರವೃತ್ತಿಯಾಗಿ ಜನರ ಪ್ರಾಣವನ್ನು ಉಳಿಸುವಲ್ಲಿ ಮಹತ್ತರ ಪಾತ್ರವಹಿಸಿದೆ . ಸೂಕ್ಷ್ಮ ಜೀವ ವಿಜ್ಞಾನ ವಿಭಾಗವು ಸೂಕ್ಷ್ಮ ಜೀವಿಗಳ ಅಧ್ಯಯನವಾಗಿದ್ದು , ಸೂಕ್ಷ್ಮ ರೋಗಾಣುಶಾಸ್ತ್ರ , ಶೀಲಿಂಧ್ರಶಾಸ್ತ್ರ , ಪರಜೀವಶಾಸ್ತ್ರ , ಬ್ಯಾಕ್ಟೀರಿಯಾ ವಿಜ್ಞಾನ ಮುಂತಾದ ಶಾಖೆಗಳನ್ನು ಒಳಗೊಂಡಿದ್ದು , ಇದರ ಬಗ್ಗೆ ಅಧ್ಯಯನ ಮಾಡುತ್ತಾ ಜನರಿಗೆ ಮಾರ್ಗದರ್ಶನವನ್ನು ನೀಡುತ್ತಿದೆ . 36

ವಿಕಿರಣಾ ಚಿಕಿತ್ಸಾ ವಿಭಾಗ ( Department of Radiotherapy ) ವಿಕಿರಣ ಚಿಕಿತ್ಸೆ ಅಥವಾ ರೇಡಿಯೋಥೆರಪಿಯನ್ನು ಸಾಮಾನ್ಯವಾಗಿ ಮಾರಣಾನಂತಿಕವಾಗಿ ಕೋಶಗಳ ಬೆಳವಣಿಗೆಯನ್ನು ಕೊಲ್ಲಲು ಅಥವಾ ಕ್ಯಾನ್ಸರ್ ನಿಯಂತ್ರಿಸಲು ಚಿಕಿತ್ಸೆಯ ಭಾಗವಾಗಿ ನೀಡಲಾಗಿದೆ . ಪ್ರಾರ್ಥಮಿಕ ಮಾರಣಾನoತಿಕ ಗೆಡ್ಡೆಯನ್ನು ತೆಗೆದುಹಾಕಲು ( ಉದಾ : ಸ್ತನ ಕ್ಯಾನ್ಸರ್ ನ ಆರಂಭಿಕ ಹಂತ ) ಶಸ್ತ್ರ ಚಿಕಿತ್ಸೆಯ ನಂತರ ಗೆಡ್ಡೆಯ ಮರುಕಳಿಕೆಯನ್ನು ತಡೆಗಟ್ಟಲು ಸಹಾಯಕ ಚಿಕಿತ್ಸೆಯ ಭಾಗವಾಗಿ ಇದನ್ನು ಬಳಸಬಹುದು . 37

ಜೀವರಸಾಯನಶಾಸ್ತ್ರ ವಿಭಾಗ ( Department of Biochemistry ) ಜೀವರಸಾಯನಶಾಸ್ತ್ರ ಅಥವಾ ಜೈವಿಕ ರಾಸಾಯನಶಾಸ್ತ್ರ ಜೀವಿಗಳ ಒಳಗೆ ಮತ್ತು ಅವುಗಳಿಗೆ ಸಂಬಂಧಿಸಿದ ರಾಸಾಯನಿಕ ಪ್ರಕ್ರಿಯೆಗಳ ಅಧ್ಯಯನವಾಗಿದೆ . ಪೌಷ್ಟಿಕಾಂಶವು ಅರೋಗ್ಯ ಮತ್ತು ಕ್ಷೇಮವನ್ನು ಹೇಗೆ ಕಾಪಾಡಿಕೊಳ್ಳುವುದು ಮತ್ತು ಪೌಷ್ಟಿಕಾಂಶದ ಕೊರತೆಯ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುತ್ತದೆ . ಜೀವರಸಾಯನಶಾಸ್ತ್ರಜ್ಞರು ಮಣ್ಣು ಮತ್ತು ರಸಗೊಬ್ಬರಗಳನ್ನು ತನಿಖೆ ಮಾಡುತ್ತಾರೆ . ಬೆಳೆ ಕೃಷಿ , ಬೆಳೆ ಸಂಗ್ರಹಣೆ ಮತ್ತು ಕೀಟ ನಿಯಂತ್ರಣವನ್ನು ಸುಧಾರಿಸುವ ಗುರಿಯೊಂದಿಗೆ ಇತ್ತೀಚಿನ ದಶಕಗಳಲ್ಲಿ ಜೀವರಸಾಯನಶಾಸ್ತ್ರಜ್ಞರು ಹಲವಾರು ಸಂಶೋಧನೆಗಳನ್ನು ಕೈಗೊಂಡಿದ್ದಾರೆ . 38

ಪ್ರಸ್ತುತ ಆಸ್ಪತ್ರೆಯ ಫೋಟೋಗಳು 39

ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕರ್ನಾಟಕದ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಯಾಗಿದೆ . ಇದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋದನಾ ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ . ಈ ಆಸ್ಪತ್ರೆಯನ್ನು ಮಾರ್ಚ್ , 8,1935 ರಂದು ಪ್ರಾರಂಭ ಮಾಡಲಾಯಿತು . ಇದನ್ನು ಶ್ರೀ ಕೃಷ್ಣ ರಾಜ ಒಡೆಯರ್ ಉದ್ಘಾಟಿಸಿದರು . ಅವರ ತಾಯಿಯ ಹೆಸರನ್ನು ಈ ಆಸ್ಪತ್ರೆಗೆ ಇಡಲಾಗಿದೆ . 40 ವಾಣಿ ವಿಲಾಸ ಆಸ್ಪತ್ರೆ ಆಸ್ಪತ್ರೆಯ ಸುತ್ತಮುತ್ತಲಿನ ಇತರೆ ಆಸ್ಪತ್ರೆಗಳ ಪರಿಚಯ ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ

ವಾಣಿವಿಲಾಸ ಆಸ್ಪತ್ರೆ ಮುಖ್ಯವಾಗಿ ಮಹಿಳೆಯರ ಮತ್ತುಮಕ್ಕಳ ಆರೋಗ್ಯ ಸೇವೆಗಳಿಗಾಗಿ ಸಮರ್ಪಿತವಾಗಿದೆ . ಗರ್ಭಧಾರಣೆ , ಪ್ರಸವ , ಸಿಸೇರಿಯನ್ ಹೆರಿಗೆ ನಂತರದ ಆರೈಕೆ ಮೊದಲಾದ ಸೇವೆಗಳಲ್ಲಿ ಈ ಆಸ್ಪತ್ರೆಯು ಮೊದಲ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ . ಪ್ರಸೂತಿ ಮತ್ತು ಸ್ತ್ರೀರೋಗ ( Obstetrics and gynecology ) ವಿಭಾಗಗಳಲ್ಲಿ ತಜ್ಞ ವೈದ್ಯರು ಮತ್ತು ಸಿಬ್ಬಂದಿಯವರು ಕಾರ್ಯ ನಿರ್ವಹಿಸುತ್ತಾರೆ . ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ( BMC ) ಮತ್ತು ವಿಕ್ಟೋರಿಯಾ ಆಸ್ಪತ್ರೆ ಸಮೀಪದಲ್ಲಿದೆ . 41

ನವಜಾತ ಶಿಶುಗಳ ಆರೈಕೆ ( Neonatal care ) ಮತ್ತು ಪಿಡಿಯಾಟ್ರಿಕ್ ಸೇವೆಗಳು ಕೂಡ ಈ ಆಸ್ಪತ್ರೆಯಲ್ಲಿ ಅತ್ಯುತ್ತಮವಾಗಿ ಲಭ್ಯವಿದೆ . ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳು ಇಲ್ಲಿ ಅನುಷ್ಠಾನಗೊಳ್ಳುತ್ತದೆ . ಉದಾ : ಜನನ ಸುರಕ್ಷಾ ಯೋಜನೆ . ತಾಯಿ ಭಾಗ್ಯ ಯೋಜನೆ . ವೈದ್ಯಕೀಯ ವಿದ್ಯಾರ್ಥಿಗಳು ಪ್ರಸೂತಿ , ಸ್ತ್ರೀರೋಗ ಹಾಗೂ ಮಕ್ಕಳ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ಪಡೆಯಲು ಸಹಾಯಕವಾಗಿದೆ . 42

ಮಿಂಟೋ ನೇತ್ರಾ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆ 43

ಮಿಂಟೋ ಆಸ್ಪತ್ರೆ ಮಿಂಟೋ - ಬೆಂಗಳೂರಿನಲ್ಲಿರುವ ಹಲವಾರು ಸರ್ಕಾರಿ ಆಸ್ಪತ್ರಗಳಲ್ಲಿ ಒಂದಾದ ಈ ಮಿಂಟೋ ಆಸ್ಪತ್ರೆಯು ಕಣ್ಣಿನ ಆಸ್ಪತ್ರಯಾಗಿದೆ . ಇದನ್ನು 1913ರಲ್ಲಿ ಸ್ಥಾಪಿಸಲಾಯಿತು . ಇದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಭಾಗವಾಗಿದೆ . ಕಣ್ಣಿನ ರೋಗಗಳಲ್ಲಿ ಚಿಕಿತ್ಸಿಸುತ್ತದೆ . ಇದು ವಿಶ್ವದ ಅತ್ಯಂತ ಹಳೆಯ ವಿಶೇಷ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾಗಿದೆ . 44

ಮಿಂಟೋ ಕಣ್ಣಿನ ಆಸ್ಪತ್ರೆಯು ಬೆಂಗಳೂರು ನಗರಕ್ಕೆ ನೀಡಿರುವ ಕೊಡುಗೆಗಳು ಬಹುಮಟ್ಟಿಗೆ ವೈದ್ಯಕೀಯ , ಸಾಮಾಜಿಕ , ಶೈಕ್ಷಣಿಕ ಮತ್ತು ಇತಿಹಾಸಿಕ ಮಹತ್ವವನ್ನು ಹೊಂದಿವೆ . ಕೆಳಗಿಂನಂತಿವೆ : ವೈದ್ಯಕೀಯ ಸೇವೆಯಲ್ಲಿ ಮಹತ್ವಪೂರ್ಣ ಕೊಡುಗೆ : ಕಣ್ಣಿಗೆ ಸಂಭಂದಿಸಿದ ತ್ವರಿತ ಮತ್ತು ನಿಖರ ಚಿಕಿತ್ಸೆ : ಬೆಂಗಳೂರು ನಗರದಲ್ಲಿ ಲಕ್ಷಾಂತರ ಜನರಿಗೆ ಮಿಂಟೋ ಆಸ್ಪತ್ರೆ ಹಲವು ದಶಕಗಳಿಂದ ಕೈಗೆಟಕುವ ದರದಲ್ಲಿ ಉತ್ತಮ ಕಣ್ಣು ಚಿಕಿತ್ಸೆಯನ್ನು ನೀಡುತ್ತಿದೆ . ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗಳನ್ನು ಮುಂಚೂಣಿಯ ಆಸ್ಪತ್ರೆ : ಈ ಆಸ್ಪತ್ರೆಯಲ್ಲಿ ಪ್ರತಿ ವರ್ಷ ಸಾವಿರಾರು ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿಯೂ , ಸಬ್ಸಿಡಿ ದರದಲ್ಲಿಯೂ ಮಾಡಲಾಗುತ್ತಿದೆ . ದುರ್ಲಭ ಶಸ್ತ್ರಚಿಕಿತ್ಸೆ ಸೇವೆಗಳು : ಗ್ಲೋಕೋಮಾ , ರೆಟಿನಾ , ಕ್ಲೋರ್ನಿಯಾ , ಮಕ್ಕಳ ಕಣ್ಣು ಚಿಕಿತ್ಸೆಯಲ್ಲಿ ವಿಶಿಷ್ಟತೆಯನ್ನು ಬೆಳೆಸಿದೆ . 45

ಬೆಂಗಳೂರು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ : ಬಿ ಎಂ ಸಿ ಐ ಆರ್ ಐ ( ಬಿಎಂಸಿರಿ ) ವೈದ್ಯಕೀಯ ಕಾಲೇಜಿನ ತರಬೇತಿ ಕೇಂದ್ರ : ಮಿಂಟೋ ಆಸ್ಪತ್ರೆ ಡಾಕ್ಟರ್ಗಳಿಗೆ ಕಣ್ಣಿನ ಚಿಕಿತ್ಸೆ , ಶಸ್ತ್ರಚಿಕಿತ್ಸೆ ತರಬೇತಿ ನೀಡುವ ಪ್ರಮುಖ ಕೇಂದ್ರವಾಗಿದೆ . ಪಜಿ ವಿದ್ಯಾರ್ಥಿಗಳಿಗೆ ಪಾಠ್ಯಪದ್ಧತಿ ಭಾಗ : ಎಂ . ಎಸ್ . ಆಪ್ತಲ್ಮಾಲಜಿಯಲ್ಲಿ ಪಿಜಿ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಪ್ರಾಯೋಗಿಕ ತರಬೇತಿಯ ದೊಡ್ಡ ಅವಕಾಶ . ಸಾಮಾಜಿಕ ಸೇವೆಗಳಿಗೆ ಕೊಡುಗೆ : ಉಚಿತ ಕಣ್ಣು ತಪಾಸಣಾ ಕ್ಯಾಂಪ್ ಗಳು : ಬೆಂಗಳೂರು ಬೇರೆ ಬೇರೆ ಬಡವಸತಿ ಪ್ರದೇಶಗಳಲ್ಲಿ ಉಚಿತ ಕಣ್ಣು ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತದೆ . ಬಡವರಿಗೆ ಕಣ್ಣು ಶಸ್ತ್ರಚಿಕಿತ್ಸೆ ಉಚಿತ / ಕಡಿಮೆ ದರದಲ್ಲಿ : KIDWAI ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳ ಪಾರ್ಶ್ಶ್ವದಲ್ಲಿರುವುದರಿಂದ ಸಮಗ್ರ ಅರೋಗ್ಯ ಸೇವೆಗೆ ಸಹಕಾರ . 46

ಐತಿಹಾಸಿಕ ಮತ್ತು ಸಾಂಸ್ಕೃತಿಕ ಪಾಲು : ಬ್ರಿಟಿಷ್ ಕಾಲದ ಐತಿಹಾಸಿಕ ಕಟ್ಟಡವಾಗಿ ಗಮನಾರ್ಹ : ಬೆಂಗಳೂರಿನ ಐತಿಹಾಸಿಕ ಆರೋಗ್ಯ ಸಂಸ್ಥೆಗಳ ಪೈಕಿ ಮಿಂಟೋ ಆಸ್ಪತ್ರyಯು ಪ್ರಮುಖವಾಗಿದೆ . 100+ ವರ್ಷಗಳ ಇತಿಹಾಸವನ್ನು ಹೊತ್ತುಕೊಂಡಿದೆ : ಇದು ಬೆಂಗಳರಿನ ವೈದ್ಯಕೀಯ ಸಂಸ್ಥೆಗಳ ಅಭಿವೃದ್ಧಿಯ ಪ್ರಾರಂಭಿಕ ಸಂಕೇತವಾಗಿದೆ . ಅಭಿವೃದ್ಧಿ ಯೋಜನೆಗಳಿಗೆ ಪ್ರೇರಣೆ : ಮಿಂಟೋ ಆಸ್ಪತ್ರೆ ಮಾದರಿಯಾಗಿ ಇತರ ಕಣ್ಣುಆಸ್ಪತ್ರೆಗಳು ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಹೊಂದಿದವು . ( ಉದಾ : ನಾರಾಯಣ ನೇತ್ರಾಲಯ , ನೇತ್ರಾಧಾಮ .) ಸಾರ್ವಜನಿಕ ಆಸ್ಪತ್ರೆಗಳಲ್ಲಿಯೂ ಉತ್ತಮ ಸೇವೆ ಸಾಧ್ಯವಿದೆ ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ . ಸಾರಾಂಶ : ಮಿಂಟೋ ಕಣ್ಣಿನ ಆಸ್ಪತ್ರೆ ಬೆಂಗಳೂರಿಗೆ ಆರೋಗ್ಯ , ಶಿಕ್ಷಣ , ಸಾಮಾಜಿಕ ಸಮರ್ಪಣೆ , ಹಾಗೂ ಐತಿಹಾಸಿಕವಾಗಿ ಮಹತ್ವಪೂರ್ಣ ಕೊಡುಗೆ ನೀಡಿರುವ ವಿಶಿಷ್ಟ ಸಂಸ್ಥೆಯಾಗಿದೆ . ಇದು ನಾಗರಿಕ ದೃಷ್ಟಿ ಆರೋಗ್ಯವನ್ನು ರಕ್ಷಿಸಲು “ ದುಂಡು ಕಣ್ಣು “ ಯಂತಿದೆ . 47

ಉಪಸಂಹಾರ ಮೈಸೂರು ಒಡೆಯರ್ ಜನಪರ ಆಡಳಿತಕ್ಕೆ ಹೆಸರುವಾಸಿಯಾಗಿದ್ದು . ಜನಸಾಮಾನ್ಯರ ನೋವಿನ ತೋಳಲಾಟದ ಅರಿವಿತ್ತು . ಬಡವರ್ಗದ ಎಲ್ಲಾ ಜನರಿಗೂ ಅನುಕೂಲವಾಗಲೆಂದು ಬೆಂಗಳೂರಿನ ಹೃದಯ ಭಾಗದಲ್ಲಿ ಈ ಆಸ್ಪತ್ರೆ ಕಟ್ಟಿಸಿದರು . ಇದಕ್ಕೆ ಬ್ರಿಟಿಷ್ ವಸಾಹತು ಶಾಹಿಯ ಛಾಯೆಯಿದೆ . ದಕ್ಷಿಣ ಭಾರತದ ಕೆಲವೇ ಕೆಲವು ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಈ ಆಸ್ಪತ್ರೆಯು ಸುಮಾರು 125 ವರ್ಷಗಳಿಗೂ ಹೆಚ್ಚು ಕಾಲ ಬೆಂಗಳೂರು ಮತ್ತು ಇತರ ಸ್ಥಳಗಳಲ್ಲಿ ಜನರಿಗೆ ಸೇವೆ ಸಲ್ಲಿಸಿರುವುದರ ಜೊತೆಗೆ ಈ ಶತಮಾನದ ಅತಿದೊಡ್ಡ ಸಾಂಕ್ರಮಿಕ ರೋಗವಾದ ಕೋವಿಡ್ – 19ರ ಸಂದರ್ಭದಲ್ಲಿ ಇದರ ಸೇವೆ ಅಪರಿಮಿತವಾದದ್ದು ಮತ್ತು ಮರೆಯಲಾಗದ್ದು . 48

ಗ್ರಂಥ ಋಣ ಬೆಂಗಳೂರು ದರ್ಶನ (ಉದಯ ಬಾನು ಕಲಾಸಂಘ)ಸಂಪುಟ-2 Wikipedia 49

ವಂದನೆಗಳು 50
Tags