This PPT provides you with the basic Computer knowledge. The presentation takes you through all the main parts of a computer system and types of computer systems.
Size: 5.83 MB
Language: none
Added: Jun 06, 2018
Slides: 20 pages
Slide Content
Computer ಗಣಕಯಂತ್ರ
What is a Computer? ಕಂಪ್ಯೂಟರ್ ಎಂದರೇನು? ಕಂಪ್ಯೂಟರ್ ( ಗಣಕಯಂತ್ರ ) ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ. Computer is an electronic device that facilitates processing and storage of data. The feature of the computer is to process data by performing mathematical calculations and logical activities, and enabling it to save information available for later use.
History ಇತಿಹಾಸ ಮೊದಲ ಕಂಪ್ಯೂಟರುಗಳನ್ನು ರೂಪಿಸುವಲ್ಲಿ ಚಾರ್ಲ್ಸ್ ಬ್ಯಾಬೇಜ್, ಅಲನ್ ಟ್ಯೂರಿಂಗ್, ಜಾನ್ ನ್ಯೂಮನ್ ಮೊದಲಾದವರು ಮಹತ್ವದ ಪಾತ್ರ ವಹಿಸಿದ್ದರು . ಡಿಫರೆನ್ಸ್ ಇಂಜಿನ್ ಹಾಗೂ ಅನಲಿಟಿಕಲ್ ಇಂಜಿನ್ ಎಂಬ ಹೆಸರಿನ ಕಂಪ್ಯೂಟರುಗಳನ್ನು ವಿನ್ಯಾಸಗೊಳಿಸಿದ ಬ್ರಿಟನ್ನಿನ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್‌ನನ್ನು ಕಂಪ್ಯೂಟರ್ ಪಿತಾಮಹ ಎಂದು ಗುರುತಿಸಲಾಗುತ್ತದೆ. ಆಧುನಿಕ ಕಂಪ್ಯೂಟರುಗಳ ಬಗ್ಗೆ ಮೊದಲ ಕಲ್ಪನೆ ಈತನದು. Charles Babbage Alan Turing John V on N eumann
Types of Computers ಕಂಪ್ಯೂಟರ್ ವಿಧಗಳು ಕಾರ್ಯಾಚರಣೆಯ ಸಾಮರ್ಥ್ಯ ಹಾಗೂ ಉಪಯೋಗಗಳ ಆಧಾರದ ಮೇಲೆ ಕಂಪ್ಯೂಟರುಗಳಲ್ಲಿ ಹಲವು ವಿಧ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿಮಾಡುವುದು ಸಾಧ್ಯ: ವೈಯಕ್ತಿಕ (ಪರ್ಸನಲ್) ಕಂಪ್ಯೂಟರ್, ಅಥವಾ 'ಪಿಸಿ‘ ಮಧ್ಯಮ ಶ್ರೇಣಿಯ (ಮಿಡ್‌ರೇಂಜ್) ಕಂಪ್ಯೂಟರುಗಳು ಮೈನ್‌ಫ್ರೇಮ್ ಸೂಪರ್‌ಕಂಪ್ಯೂಟರ್
ಸಾಮಾನ್ಯವಾಗಿ ಬಳಕೆಯಲ್ಲಿರುವ ಬಹಳಷ್ಟು ಕಂಪ್ಯೂಟರುಗಳು ಈ ವಿಧದವು. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್ ಕಂಪ್ಯೂಟರುಗಳೆಲ್ಲ ಇದಕ್ಕೆ ಉದಾಹರಣೆಗಳು. ಇಂದಿನ ಸ್ಮಾರ್ಟ್ ಫೋನುಗಳನ್ನೂ ಇದೇ ಗುಂಪಿಗೆ ಸೇರಿಸಬಹುದು. ಪರ್ಸನಲ್ ಕಂಪ್ಯೂಟರುಗಳನ್ನು ಮೈಕ್ರೋಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸವೂ ಇತ್ತು . ಹೆಚ್ಚು ಸಾಮರ್ಥ್ಯದ, ವಿಶೇಷ ಯಂತ್ರಾಂಶಗಳನ್ನು ಹೊಂದಿದ್ದ ಶಕ್ತಿಶಾಲಿ ಕಂಪ್ಯೂಟರುಗಳನ್ನು 'ವರ್ಕ್‍ಸ್ಟೇಶನ್'ಗಳೆಂದು ಗುರುತಿಸಲಾಗುತ್ತಿತ್ತು. ತಂತ್ರಜ್ಞಾನ ಬೆಳೆದಂತೆ ಪರ್ಸನಲ್ ಕಂಪ್ಯೂಟರು ಗಳಲ್ಲೇ ಹೆಚ್ಚಿನ ಸೌಲಭ್ಯಗಳು ದೊರಕುವಂತಾಗಿ ಪಿಸಿಗಳಿಗೂ ವರ್ಕ್‌ಸ್ಟೇಶನ್‌ಗಳಿಗೂ ನಡುವಿನ ವ್ಯತ್ಯಾಸ ಮಸುಕಾಗಿದೆ. ವೈಯಕ್ತಿಕ (ಪರ್ಸನಲ್) ಕಂಪ್ಯೂಟರ್
ಮಧ್ಯಮ ಶ್ರೇಣಿಯ (ಮಿಡ್‌ರೇಂಜ್) ಕಂಪ್ಯೂಟರುಗಳು ಕಂಪ್ಯೂಟರ್ ಕುಟುಂಬದಲ್ಲಿ ಪರ್ಸನಲ್ ಕಂಪ್ಯೂಟರುಗಳ ನಂತರದ ಸ್ಥಾನ ಮಧ್ಯಮ ಗಾತ್ರದ ('ಮಿಡ್‌ರೇಂಜ್') ಕಂಪ್ಯೂಟರುಗಳದು. ಇಂತಹ ಕಂಪ್ಯೂಟರುಗಳನ್ನು ಹೆಚ್ಚಿನ ಸಂಖ್ಯೆಯ ಬಳಕೆದಾರರು ಏಕಕಾಲದಲ್ಲೇ ಬಳಸುವುದು ಸಾಧ್ಯ. ಮಿಡ್‌ರೇಂಜ್ ಕಂಪ್ಯೂಟರುಗಳನ್ನು 'ಮಿನಿಕಂಪ್ಯೂಟರ್' ಎಂದೂ ಗುರುತಿಸಲಾಗುತ್ತಿತ್ತು.
ಮೈನ್‌ಫ್ರೇಮ್ ಇವು ಅಪಾರ ಪ್ರಮಾಣದ ದತ್ತಾಂಶವನ್ನು ನಿಭಾಯಿಸಲು ಬೇಕಾದ ಸಂಸ್ಕರಣಾ ಸಾಮರ್ಥ್ಯ ಹಾಗೂ ವಿಶ್ವಾಸಾರ್ಹತೆಯನ್ನು ಹೊಂದಿರುವ ಕಂಪ್ಯೂಟರುಗಳು. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು ಮೊದಲಾದೆಡೆಗಳಲ್ಲಿ ಈ ಬಗೆಯ ಕಂಪ್ಯೂಟರುಗಳನ್ನು ಬಳಸಲಾಗುತ್ತದೆ.
ಸೂಪರ್‌ಕಂಪ್ಯೂಟರ್ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಹೆಗ್ಗಳಿಕೆ ಈ ಬಗೆಯ ಕಂಪ್ಯೂಟರುಗಳದು. ಇವು ಅತ್ಯಂತ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲವು. ಅತ್ಯಂತ ಕ್ಲಿಷ್ಟ ಲೆಕ್ಕಾಚಾರಗಳನ್ನು ಬಳಸುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇವನ್ನು ಬಳಸಲಾಗುತ್ತದೆ.
ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಕಂಪ್ಯೂಟರ್ನಲ್ಲಿನ ನಿಮ್ಮ ಎಲ್ಲಾ ಕಾರ್ಯಗಳು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ಗೆ ಒಳಪಟ್ಟಿವೆ . ಸಾಫ್ಟ್ವೇರ್ : ಸಾಫ್ಟ್‌ವೇರ್ ಭೌತಿಕವಾಗಿ ಸ್ಪರ್ಶಿಸಲು ಬರುವುದಿಲ್ಲ. ಸಾಫ್ಟ್‌ವೇರ್‌ಗಳನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ . ಸಿಸ್ಟಂ ಸಾಫ್ಟ್‌ವೇರ್ ಪ್ರೊಗ್ರಾಮಿಂಗ್ ಸಾಫ್ಟ್‌ವೇರ್ ಅಪ್ಲಿಕೇಶನ್ ಸಾಫ್ಟ್‌ವೇರ್ ಹಾರ್ಡ್ವೇರ್ : ಕಂಪ್ಯೂಟರಿಗೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳನ್ನೂ ಹಾರ್ಡ್‌ವೇರ್ (ಯಂತ್ರಾಂಶ) ಎಂದು ಕರೆಯುತ್ತಾರೆ . ಕಂಪ್ಯೂಟರಿನ ಮಾನಿಟರ್, ಕೀಬೋರ್ಡ್, ಮೌಸ್ ಇವೆಲ್ಲ ಯಂತ್ರಾಂಶಕ್ಕೆ ಉದಾಹರಣೆಗಳು.
ಕಂಪ್ಯೂಟರ್ ಏನು ಒಳಗೊಂಡಿದೆ? ಅಂಕಗಣಿತದ ತಾರ್ಕಿಕ ಸಾಧನ ( ALU ) : ಅಂಕಗಣಿತದ ಮತ್ತು ತಾರ್ಕಿಕ ಕಾರ್ಯಾಚರಣೆಗಳನ್ನು ನಿರ್ವಹಿಸುವುದು . ನಿಯಂತ್ರಣ ಸಾಧನ ( C U): ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯನ್ನು ಆಯೋಜಿಸುತ್ತದೆ . ಮೆಮೊರಿ (ಶೇಖರಣಾ ) : ಪ್ರೋಗ್ರಾಂಗಳು ಮತ್ತು ಡೇಟಾವನ್ನು ಸಂಗ್ರಹಿಸುವ ಮೆಮೊರಿಯನ್ನು . ಬಾಹ್ಯ I / O ಸಾಧನಗಳು
Personal Computer ವೈಯಕ್ತಿಕ ಕಂಪ್ಯೂಟರ್ ಡೆಸ್ಕ್ಟಾಪ್ ಸಿಸ್ಟಮ್ ಯುನಿಟ್
Motherboard ಮದರ್ಬೋರ್ಡ್
ಕಂಪ್ಯೂಟರ್ನ ಪೆರಿಫೆರಲ್ಸ್ ಬಗ್ಗೆ ಕೀಬೋರ್ಡ್ಗ ( Keyboard) ಕಂಪ್ಯೂಟರ್ನ ಸಾಮಾನ್ಯ ಕಾರ್ಯಾಚರಣೆಯು ಪ್ರಾಯೋಗಿಕವಾಗಿ ಅಸಾಧ್ಯವಾದುದೆಂದರೆ, ಪ್ರಮುಖವಾದ ಪೆರಿಫೆರಲ್ಗಳಲ್ಲಿ ಒಂದಾದ ಮಾಹಿತಿಯ ಪ್ರವೇಶಕ್ಕಾಗಿ ಕೀಬೋರ್ಡ್ಗ ಅಗತ್ಯವಾಗಿರುತ್ತದೆ.
ಕೀಬೋರ್ಡ್ನಲ್ಲಿ ಕೀಗಳ ವಿಧಗಳು ಸಂಖ್ಯೆಗಳು ಮತ್ತು ಅಕ್ಷರಗಳನ್ನು (Numerical and Character Keys) ನಿಯಂತ್ರಣ ಕೀಗಳು (Control Keys) ಕಾರ್ಯ ಕೀಗಳು (Function Keys) ಪ್ರತ್ಯೇಕ ಸಂಖ್ಯಾ ಕೀಗಳು (Special Numerical Keys) ಕರ್ಸರ್ ಚಲನೆಯನ್ನು ನಿಯಂತ್ರಿಸುವ ಕೀಗಳು (Directional Keys)
ಕಂಪ್ಯೂಟರ್ ಮೌಸ್ (Mouse) ಆಧುನಿಕ ಮೌಸ್ಗಳಲ್ಲಿ ಮೂರು ಕೀಗಳಿವೆ , ಮಧ್ಯದ ಚಕ್ರಗಳು. ಎಡ ಕೀ ಇನ್ಪುಟ್ ಕಾರ್ಯವನ್ನು ನಿರ್ವಹಿಸುತ್ತದೆ . ಪುಟಗಳನ್ನು ಕೆಳಗೆ ಅಥವಾ ಕೆಳಗೆ ಸ್ಕ್ರಾಲ್ ಮಾಡಲು ಸ್ಕ್ರಾಲ್ ಬಟನ್ ನಿಮಗೆ ಅನುಮತಿಸುತ್ತದೆ.
ಮಾನಿಟರ್ ಕಂಪ್ಯೂಟರ್ ಮಾನಿಟರ್ ಎನ್ನುವುದು ಒಂದು ಔಟ್ಪುಟ್ ಸಾಧನವಾಗಿದ್ದು, ಇದು ಮಾಹಿತಿಯನ್ನು ಚಿತ್ರಣ ರೂಪದಲ್ಲಿ ಪ್ರದರ್ಶಿಸುತ್ತದೆ . ಕಂಪ್ಯೂಟರ್ ಮಾನಿಟರ್ಗಳಿಗಾಗಿ ಬಹು ತಂತ್ರಜ್ಞಾನಗಳನ್ನು ಬಳಸಲಾಗಿದೆ . ಕ್ಯಾಥೋಡ್ ರೇ ಟ್ಯೂಬ್ (Cathode Ray Tube) ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ (LCD) Light-emitting diode (OLED)
INPUT DEVICES
OUTPUT DEVICES
CD/DVD-RW DRIVE Hard Disk Drive Random Access Memory (RAM) Storage and Memory