Kannada Writers And Poets

anushreekmurthy 14,163 views 24 slides Dec 06, 2013
Slide 1
Slide 1 of 24
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8
Slide 9
9
Slide 10
10
Slide 11
11
Slide 12
12
Slide 13
13
Slide 14
14
Slide 15
15
Slide 16
16
Slide 17
17
Slide 18
18
Slide 19
19
Slide 20
20
Slide 21
21
Slide 22
22
Slide 23
23
Slide 24
24

About This Presentation

This PPT talks about the famous Kannada writers- Shivram Karanth, Masti Venkatesh Iyengar and Poornachandra Tejaswi and also includes some books written by them. It also talks about the famed Kannada poets- Kuvempu, Kayyara Kinnarai and D.R Bendre. It includes an extract of their famous poems too.


Slide Content

ಕನ್ನದ ಕವಿಗಳು ಮತ್ತು ಲೇಖಕರು - ರಿತು ಹಾಗು ಅನುಶ್ರೀ

ಪರಿವಿಡಿ 1. ಲೇಖಕರು : ಶಿವರಾಮ ಕಾರಂತ ………………………… ಮಾಸ್ತಿ ವೆಂಕಟೇಶ ಅಯ್ಯಂಗಾರ್ ……………… ಪೂರ್ಣಚಂದ್ರ ತೇಜಸ್ವಿ ……………………….. 2. ಕವಿಗಳು : ಕುವೆಂಪು …………………………………… ಕಯ್ಯಾರ ಕಿಞ್ಞಣ್ಣ ರೈ …………………………. ದ.ರಾ.ಬೇಂದ್ರೆ ………………………………. 3. ಪುಸ್ತಕಗಳು 4. ಕವನಗಳು

ಲೇಖಕರು ಒಂದಾನೊಂದು ಕಾಲದಲ್ಲಿ, ಒಂದು ರಾಜ ಇದ್ದ ……

ಶಿವರಾಮ ಕಾರಂತ

ಶಿವರಾಮ ಕಾರಂತ ಶಿವರಾಮ ಕಾರಂತ "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ  ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ. ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ  1902 , ಅಕ್ಟೋಬರ್ 10 ರಂದು. ತಮ್ಮ ಜೀವಿತಾವಧಿಯಲ್ಲಿ ಸುಮಾರು 427 ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು 47 . ತಮ್ಮ 96 ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರು  1997 , ಡಿಸೆಂಬರ್ ೦೯ ರಂದು ನಿಧನ ಹೊಂದಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು. ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ 6   1891  ರಲ್ಲಿ ಜನಿಸಿದರು. ಮೆಟ್ರಿಕ್ಯುಲೇಷನ, ಎಫ್ ಎ , ಬಿ ಎ, ಮೈಸೂರು ಸಿವಿಲ್ ಸರ್ವಿಸ್ , ಎಂ.ಎ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ,  1914  ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.   1914  ರಿಂದ  1943  ರವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು.  1920  ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣ ಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ - ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. 1983  ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ 6   1986  ರಂದು ನಿಧನ ಹೊಂದಿದರು.

ಪೂರ್ಣಚಂದ್ರ ತೇಜಸ್ವಿ

ಪೂರ್ಣಚಂದ್ರ ತೇಜಸ್ವಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು .  ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ಕೃತಿಗಳನ್ನು ಬಿಟ್ಟು ಅವರು ಬರಹಗಾರ, ಕಾದಂಬರಿಕಾರ ಹಾಗು ಹಕ್ಕಿಯರಿಗೆ ಛಾಯಚಿತ್ರಗಾರರಾಗಿಯು ಇವರು ಪ್ರಸಿಧ್ದಿಯಾಗಿದ್ದರು . ಇವರ ನಿಧನ ಏಪ್ರಿಲ್ ೫ ೨೦೦೭ರಂದು ಮೂಡಿಗೆರೆಯಲ್ಲಿ ಆಯಿತು .

ಕವಿಗಳು ಕಾದಿರುವಳು ಶಬರಿ, ರಾಮ ಬರುವನೆಂದು...

ಕುವೆಂಪು

ಕುವೆಂಪು ಕುವೆಂಪು ಕನ್ನಡವು ಪಡೆದ ಅತ್ಯುತ್ತಮ ಕವಿ, 'ರಾಷ್ಟ್ರಕವಿ'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಥಮ ವ್ಯಕ್ತಿ. 'ವಿಶ್ವ ಮಾನವ'. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ಮೊದಲ ಕಾವ್ಯನಾಮ-"ಕಿಶೋರಚಂದ್ರವಾಣಿ" -ನಂತರ ಅವರು ಕಾವ್ಯನಾಮ ಕುವೆಂಪು ಬಳಸಿದರು. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಡಿಸೆಂಬರ್ ೨೯, ೧೯೦೪ರಂದು ಜನಿಸಿದರು . ಇವರು ತಮ್ಮ ಜೀವನದಲ್ಲಿ ಲೇಖಕರ, ಪ್ರಾಧ್ಯಾಪಕರ ಹಾಗು ಕುಲಪತಿಯ ಭೂಮಿಕೆಯಲ್ಲಿ ಸಮಾಜಕ್ಕೆ ಮಹತ್ತರವಾದ ಕೊಡುಗೆ ನೀಡಿದ್ದಾರೆ . ಇವರು ೧೯೯೪ರಲ್ಲಿ ಮೈಸೂರಿನಲ್ಲಿ ಅಮರರಾದರು.

ಕಯ್ಯಾರ ಕಿಞ್ಞಣ್ಣ ರೈ

ಕಯ್ಯಾರ ಕಿಞ್ಞಣ್ಣ ರೈ ಕಯ್ಯಾರ ಕಿಞ್ಞಣ್ಣ ರೈ  ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ ಜೂನ ೮ ರಂದು ಜನಿಸಿದರು. ಕಯ್ಯಾರ ಕಿಞ್ಞಣ್ಣ ರೈ ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ,ಬಹುಭಾಷಾ ವಿದ್ವಾಂಸರಾಗಿ,ಸ್ವಾತಂತ್ರ್ಯ ಹೋರಾಟಗಾರರಾಗಿ,ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮಂಚೂಣಿಯ ನಾಯಕರಾಗಿ,ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ,ನಿರಂತರವಾಗಿ ದುಡಿದವರು. ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು,ಅಖಿಲಭಾರತ ಮಟ್ಟದಲ್ಲಿ ಜರುಗಿದ ೬೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ದ.ರಾ.ಬೇಂದ್ರೆ

ದ.ರಾ.ಬೇಂದ್ರೆ ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ,, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ . ಇವರು ವರಕವಿ ಹಾಗು ಶಿಕ್ಶಕರಾಗಿ ವಿಶ್ವವಿಖ್ಯಾತರಾಗಿದ್ದರು. ಇವರು ಕಥೆ, ಕವನ, ವಿಮರ್ಷೆ ಹಾಗು ಅನುವಾದಗಳು ಬರೆಯುತ್ತಿದ್ದರು. ಇವರು ಮುಂಬಯಿನಲ್ಲಿ ಅಕ್ಟೋಬರ್ ೨೬ ೧೯೮೧ರಂದು ದೈವಧೀನರಾದರು.

ಪುಸ್ತಕಗಳು ಮತ್ತು ಕವನಗಳು

ಬೆಟ್ಟದ ಜೀವ ಒಂದು ವೃದ್ಧ ದಂಪತಿಗಳು- ಗೋಪಾಲೈಯ್ಯ ಮತ್ತು ಅವನ ಹೆಂಡತಿ ಶಂಕರಿ ಗುಡ್ಡದ ಹತ್ತಿರವಿರುವ ಕಾಡಿನಲ್ಲಿರುವ ಒಂದು ಊರಿನಲ್ಲಿ ವಾಸಮಾಡುತ್ತಿರುತ್ತಾರೆ. ಅವರಿಗೆ ಅವರ ಮಗ ಕಾಣೆಯಗಿದ್ದರ ಆತಂಕವಿದ್ದರು, ಅವರು ತಮ್ಮ ಬದುಕಿನ ರುಚಿಕಾರಕವನ್ನು ಆ ಆಧುನಿಕ ನಾಗರಿಕತೆಯಿಲ್ಲದ ಉರಿನಲ್ಲಿಯು ಕಳೆದು ಕೊಂಡಿಲ್ಲ. ಆಗ, ಸ್ವಾತಂತ್ರ್ಯ ಹೋರಾತಗಾರನಗಿದ್ದ ಒಬ್ಬ ಮನುಷ್ಯ ಅವರ ಮನೆಗೆ ಒಂದು ದಿನ ಇರಕ್ಕೆ ಬರುತ್ತಾನೆ. ಅವನ ಹೆಸರು ಶಿವರಾಮಯ್ಯ. ಮುಂದಿನ ಕಥೆ ಶಿವರಾಮಯ್ಯನ ಮತ್ತು ದಂಪತಿಗಲ ಮಧ್ಯೆ ಮಾತುಕತೆ ನಡೆಯುವುದು. ಈ ಪುಸ್ತಕ, ಶಿವರಾಮ್ ಕಾರನ್ತರಿಗೆ ಜ್ಞಾನ್ಪೀಠ ಪ್ರಶಸ್ತಿ ಕೊಡಿಸಿತು ಹಾಗು ಮುಂದೆ, ಚಲನಚಿತ್ರ ಕೂಡ ಆಯಿತು. ಶಿವರಾಮ ಕಾರಂತ

ಚಿಕವೀರ ರಾಜೇಂದ್ರ ಚಿಕ್ಕವೀರ ರಾಜೇಂದ್ರ ಕೊಡಗಿನ ಕೊನೆಯ ರಾಜರಾಗಿದ್ದರು. ಅಯ್ಯಂಗಾರರು ಇವರನ್ನೇ ತಮ್ಮ ಕಥೆಯ ಪ್ರಮುಖ ಪಾತ್ರರಾಗಿ ಮಾಡಿದರು. ವೀರರಾಜೇಂದ್ರರನ್ನು ತನ್ನ ಸ್ವಂತ ತಂಗಿಯ ಮಗುವನ್ನು ಸಿಟ್ಟಲ್ಲಿ ಕೊಲೆ ಮಾಡಿದರೆಂದು ತೋರಿಸಲಾಗುತ್ತದೆ. ಅದಲ್ಲದೆ ಬ್ರಿಟಿಶರು, ಅವರನ್ನು ಪದೇ-ಪದೇ ತಮ್ಮ ಸಿಂಹಾಸನದಿಂದ ತೆಗಿಸುವ ಪ್ರಯತ್ನ ಮಾಡುತ್ತಿದ್ದರು. ಮುಂದಿನ ಕಥೆ, ಅವರು ಕೊಲೆ ಆರೋಪವನ್ನು,ಹೇಗೆ ಎದರಿಸುತ್ತರೆ, ಹಾಗು ಬ್ರಿಟಿಶರನ್ನು, ಹೇಗೆ ತಡೆಯುತ್ತಾರೆ ಅಂತ. ಇದೇ ಕಥೆ ಮಾಸ್ತಿರನ್ನು ಜ್ಞಾನಪಿಠ ಪ್ರಶಸ್ತಿಯನ್ನು ಪಡೆಯುವಂತೆ ಮಾಡಿತು. ಮಾಸ್ತಿ ವೆಂಕಟೇಶ ಅಯ್ಯಂಗಾರ್

ಪರಿಸರದ ಕಥೆ ಈ ಪುಸ್ತಕ ಒಟ್ಟು ೮ ಆವೃತ್ತಿಗಳಿನ್ದ ಕೂಡಿದೆ. ಇದು ಪರಿಸರವಿಜ್ಞಾನ ಮತ್ತು ಪರಿಸದ ಬಗ್ಗೆ ಒಳ್ಳೆ ಮಾಹಿತಿ ಕೊಡುತ್ತದೆ. ಇದರಲ್ಲಿ ತೇಜಸ್ವಿ ತಮ್ಮ ತಂದೆಯ ಜೊತೆಗೆ ವಾಕ್ ಹೋಗಿದ್ದಾಗ ನೋಡಿದ ಗಿಡಗಳು, ಪ್ರಾಣಿಗಳು ಹಾಗು ಅವರ ವರ್ತನೆಯನ್ನು ತುಂಬ ಚೆನ್ನಾಗೆ ವಿವರಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ

ದೋಣಿ ಸಾಗಲಿ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ , ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ . ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ , ಮೇಘಮಾಲೆಗೆ ಬಣ್ಣವೀಯುತ ಯಕ್ಶಲೋಕವ ವಿರಚಿಸೆ . ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ , ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ . - ಕುವೆಂಪು ದೋಣಿ ಸಾಗಲಿ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ , ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ . ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ , ಮೇಘಮಾಲೆಗೆ ಬಣ್ಣವೀಯುತ ಯಕ್ಶಲೋಕವ ವಿರಚಿಸೆ . ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ , ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ . - ಕುವೆಂಪು

ಕಯ್ಯಾರ ಕಿಞ್ಞಣ್ಣ ರೈ ಹಣ್ಣು ಮಾರುವವನ ಹಾಡು ನಂಜನಗೂಡಿನ ರಸಬಾಳೆ ತಂದಿಹೆ ಕೊಡಗಿನ ಕಿತ್ತೀಳೆ ಬೀದರ ಜಿಲ್ಲೆಯ ಸೀಬೆಯ ಹಣ್ಣು ಬೆಂಗಳೂರಿನ ಸೇಬಿನ ಹಣ್ಣು ಕೊಳ್ಳಿರಿ ಹಿಗ್ಗನು ಹರಿಸುವವು ಕಲ್ಲುಸಕ್ಕರೆಯ ಮರೆಸುವವು ಕೊಳ್ಳಿರಿ ಮಧುಗಿರಿ ದಾಳಿಂಬೆ ಬೆಳವಲ ಬಯಲಿನ ಸಿಹಿಲಿಂಬೆ ಬೆಳಗಾವಿಯ ಸವಿ ಸಪೋಟ ದೇವನಹಳ್ಳಿಯ ಚಕ್ಕೋತ

ಹಕ್ಕಿ ಹಾರುತಿದೆ ನೋಡಿದಿರಾ?   ಹಕ್ಕಿ ಹಾರುತಿದೆ ನೋಡಿದಿರಾ?  ಇರುಳಿರುಳಳಿದು ದಿನ ದಿನ ಬೆಳಗೆ ಸುತ್ತುಮುತ್ತಲೂ ಮೇಲಕೆ ಕೆಳಗೆ ಗಾವುದ ಗಾವುದ ಗಾವುದ ಮುಂದೆ ಎವೆತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ? ಕರಿನರೆ ಬಣ್ಣದ ಪುಚ್ಚಗಳುಂಟು ಬಿಳಿ-ಹೊಳೆ ಬಣ್ಣದ ಗರಿ -ಗರಿಯುಂಟು ಕೆನ್ನನ ಹೊನ್ನನ ಬಣ್ಣ-ಬಣ್ಣಗಳ ರೆಕ್ಕೆಗಳೆರಡೂ ಪಕ್ಕದೊಲುಂಟು ಹಕ್ಕಿ ಹಾರುತಿದೆ ನೋಡಿದಿರಾ? - ದ.ರಾ.ಬೇಂದ್ರೆ

ಧನ್ಯವಾದಗಳು