ಸ್ವಾಗತ ಡ ಾ . ಎ ಪ ಿ ಜ ೆ ಅಬ್ದುಲ್ ಕಲಾಂ ವ್ಯಕ್ತಿ ಚಿತ್ರಣ ಇವರಿಗೆ ಶ್ರೀಮತಿ . ವಿದ್ಯಾಲಕ್ಷ್ಮಿ ಸಹ ಾ ಯ ಕ ಪ್ರಾಧ್ಯಾಪಕಿ ಅಧ್ಯಾಪಕ ರ ತರಬೇತಿ ಕೇಂದ್ರ ಚಾಲ - ಕಾಸರಗೋಡು ಇವರಿಂದ ರಾಮಕಷ್ಣ ವಿದ್ಯಾರ್ಥಿ ಅಧ್ಯಾಪಕ ರ ತರಬೇತಿ ಕೇಂದ್ರ ಚಾಲ - ಕಾಸರಗೋಡು
ಡ ಾ . ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಜನನ ತಮಿಳುನಾಡಿನ ರಾಮೇಶ್ವರದಲ್ಲಿ 1931ರ ಅಕ್ಟೋಬರ್ 15ರಂದು ಜೈನುಲಬ್ದೀನ್ ಹಾಗೂ ಅಶಿಮ ಾ ದಂಪತಿಗಳ ಪುತ್ರನಾಗಿ ಜನಿಸಿದರು . ಇವ ರ ು ತೀರಾ ಬಡ ಕುಟುಂಬದಲ್ಲಿ ಜನಿಸಿದವರು . ಇವ ರ ತಂದೆ ರಾಮೇಶ್ವರಂ ಹಾಗೂ ಧನುಷ್ಕೋಟಿ ನಡುವೆ ದೋಣಿ ಚಾಲಕರಾಗಿದ್ದರು .
ಶಿಕ್ಷಣ ರಾಮನಾಥಪುರಂ ಎಂಬಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಬಳಿಕ ತಿರುಚಿರಾಪಳ್ಳಿಯ ಸೈಂಟ್ ಜೋಸೆಫ್ ಕಾಲೇಜಿಗೆ ಸೇರಿಕೊಂಡರು. ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ತಮ್ಮ ಬಡತನವನ್ನು ಅರಿತು ದಿನ ಪತ್ರಿಕೆಗಳನ್ನು ಮನೆ ಮನೆಗಳಿಗೆ ಮಾರಿ ಅದರಿಂದ ಬಂದ ಆದಾಯವನ್ನು ವಿದ್ಯಾಭ್ಯಾಸಕ್ಕೆ ಬಳಸುತ್ತಿದ್ದರು.ಬೆಳಗ್ಗೆ ೪ ಗಂಟೆಗೆ ತಮ್ಮ ಪಠ್ಯ ಪುಸ್ತಕಗಳನ್ನು ಓದುತ್ತಿದ್ದರು. ಗಣಿತ ಶಾಸ್ತ್ರದ ಮೇಲೆ ಆಸಕ್ತಿಯನ್ನು ಹೊಂದಿದ್ದರು.೧೯೫೪ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು . ಅವರು ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್ಗೆ ತೆರಳಿದರು . ಮದ್ರ ಾಸ್ ತಾಂತ್ರಿಕ ಮಹಾ ವಿದ್ಯಾ ಲಯದಿಂದ ಏರೋನಾಟಿಕಲ್ ಎಂಜಿನಿಯ ರಿಂಗ್ , ಎಂ . ಟೆಕ್ ಹಾಗೂ ಪಿಹೆಚ್ . ಡಿ ಪದವಿಯ ನ್ ನು ಪಡೆದರು .
ವೃತ್ತಿಜೀವನ 1 9 6 ರಲ್ಲಿ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಿಂದ ಪದವಿ ಪಡೆದ ನಂತರ ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ನ ವಾಯುಯಾನವಿಜ್ಞಾನ ಅಭಿವೃದ್ಧಿ ವಿಭಾಗಕ್ಕೆ ಒಬ್ಬ ವಿಜ್ಞಾನಿಯಾಗಿ ಸೇರಿಕೊಂಡರು. ಅಲ್ಲಿ ಅವರು ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಭಾರತದ ಭೂ ಸೇನೆಗೆ ಸಣ್ಣ ಹೆಲಿಕಾಪ್ಟರ್ ಗಳನ್ನು ವಿನ್ಯಾಸ ಮಾಡುತ್ತಿದ್ದರು . ಈ ರೀತಿಯಲ್ಲಿ ತ ಮ್ ಮ ವೃತ್ತಿ ಜೀವನವನ್ನು ಆರಂಭಿಸಿದರು . 1 9 6 9 ರ ಲ್ ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಗೆ ವರ್ಗಾವಣೆಗೊಂಡ ರ ು . ಇವರು ತ ಮ್ ಮ ಸಾಧನೆಗಳ ಮೂಲ ಕ ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಂತ್ರಜ್ಞಾನವನ್ನು ತಯಾರಿಸಿರುವ ಕ ಾ ರ ಣ ' ಕ್ಷಿಪಣಿ ಜನಕ ' ಎಂದು ಕರೆಯಲ್ಪ ಡ ು ತ ್ ತ ಾ ರ ೆ . ಅಣ್ಣಾಮಲೈ ವಿಶ್ವವಿದ್ಯಾಲಯ , ಜೆ . ಎಸ್ . ಎಸ್ . ವಿ . ವಿ ( ಮೈಸೂರು ) , ಐ ಐ ಎಂ ಅಹಮದಾಬಾದ್ , ಐ ಐ ಎಂ ಇಂದೋರ್ ಮುಂತ ಾ ದ ವಿಶ್ವವಿದ್ಯಾನಿಲಯ ಗಳ ಲ್ ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ .
ರಾಷ್ಟ್ರಪತಿಗ ಳ ಾ ಗ ಿ ಕಲಾಂ ಕಲಾಂರವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. 2002ರ ರಾಷ್ತ್ರಪತಿ ಚುನಾವಣೆಯಲ್ಲಿ ಲಕ್ಷ್ಮೀ ಸೆಹೆಗಲ್ ವಿರುದ್ಧ ೧೦೭,೩೬೬ ಮತಗಳ ಮುನ್ನಡೆಯಲ್ಲಿ ಗೆದ್ದರು. 25 ಜುಲೈ 2002ರಿಂದ 25 ಜುಲೈ 2007ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಸರಳತೆ, ಪ್ರಾಮಾಣಿಕತೆ, ಮತ್ತು ಮೇಧಾವಿತನದ ಸಾಕಾರದಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು. ಸ್ವತಃ ಬ್ರಹ್ಮಚಾರಿ ಆದ ಇವರಿಗೆ ಮಕ್ಕಳೆಂದರೆ ಬಹು ಪ್ರೀತಿ. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ಸೂಚನೆ ನೀಡುವುದು ಇವರ ಪ್ರಿಯ ಹವ್ಯಾ ಸ .
ಲೇಖಕರಾಗಿ ಕಲಾಂ ರಾಷ್ಟ್ರಪತಿ ಹುದ್ದೆಯಿಂದ ವಿರಮಿಸಿದ ಅನಂತರವೂ ಇವರು ಜನಪ್ರಿಯ ಧುರೀಣರು ಮತ್ತು ವಿಜ್ಞಾನಿಯಾಗಿ ಕಂಗೊಳಿಸುತ್ತಿದ್ದಾರೆ. ಇವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ‘ವಿಂಗ್ಸ್ ಆಫ್ ಫೈರ್’ ಎಂಬುದು ಇವರ ಆತ್ಮಕಥೆ. ಇವರು ತಮ್ಮ ‘ಇಂಡಿಯಾ ಮೈ ಡ್ರೀಮ್’, ‘ಇಂಡಿಯಾ ೨೦೨೦’ ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ. ‘ಮೈ ಜರ್ನಿ’, ‘ಟಾರ್ಗೆಟ್ ತ್ರಿ ಬಿಲಿಯನ್’- ಇವು ಇವರ ಇತ್ತೀಚಿನ ಕೃತಿಗಳು. ಅಪ್ರತಿಮ ದೇಶಭಕ್ತರೂ ಉತ್ತಮ ವಾಗ್ಮಿಯೂ ಆಗಿರುವ ಕಲಾಂ ಅವರು ಈಗಲೂ ದೇಶ ವಿದೇಶಗಳಲ್ಲಿ ಸಂಚರಿಸುತ್ತ ಜ್ಞಾನ-ವಿಜ್ಞಾನ ಪ್ರಸಾರದಲ್ಲಿ ತಮ್ಮ ಸಹಾಯಹಸ್ತ ನೀಡುತ್ತಿದ್ದಾರೆ .
ಕಲಾ ಂ ಅವ ರ ಕೃತಿಗಳ ು 1 ) ಡೆವೆಲಪ್ಮೆಂಟ್ಸ್ ಇನ್ ಫ್ಲುಯಿಡ್ ಮೆಖಾನಿಕ್ಸ್ ಅಂಡ್ ಸ್ಪೇಸ್ ಟೆಕ್ನಾಲಜಿ-ರೊಡ್ಡಂ ನರಸಿಂಹರವರ ಜತೆ ಬರೆದಿರುವ ವೈಜ್ಞಾನಿಕ ಪುಸ್ತಕ. 2 ) ವಿಂಗ್ಸ್ ಆಫ್ ಫೈಯರ್ (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು)-ಅರುಣ್ ತಿವಾರಿಯವರ ಜತೆ ಬರೆದ ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ. 3 ) ಇಂಡಿಯಾ 2020- ಈ ಪುಸ್ತಕದಲ್ಲಿ ಕಲಾಮ್ ರವರು 2020 ನೇ ಇಸವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲಂತಹ ಕೃತಿ. 4 ) ಇಗ್ನೈಟೆಡ್ ಮೈಂಡ್ಸ್- ಮಕ್ಕಳಿಗಾಗಿ ಬರೆದಿರುವ ಈ ಪುಸ್ತಕವು ಅವರು ಮುಂದಿನ ನಾಗರೀಕರಾಗಿದ್ದು ದೇಶವನ್ನು ಹೇಗೆ ಬೆಳಸಬಹುದು ಎಂದು ಹೇಳುತ್ತದೆ.
5 ) ಎನ್ವಿಶನಿಂಗ್ ಅನ್ ಎಂಪವರ್ಡ್ ನೇಷನ್-ಸಾಮಾಜಿಕ ಬದಲಾವಣೆಗಾಗಿ ತಂತ್ರಜ್ಞಾನದ ಬಗ್ಗೆ ಎ.ಶಿವತನು ಪಿಳ್ಳೈರವರ ಜತೆ ಬರೆದಿರುವ ಪುಸ್ತಕ. 6 ) ಮೈ ಜರ್ನೀ- ಇದು ಅವರ ಎರಡನೇ ಆತ್ಮಕಥೆ. ಇಲ್ಲಿ ಅವರ ಜೀವನದ ಇಷ್ಟ-ಕಷ್ಟಗಳ ಬಗ್ಗೆ ಹೇಳಿದ್ದಾರೆ. ಇದನ್ನು ವಿ.ಸತ್ಯನಾರಾಯಣ ಮೂರ್ತಿ ಪ್ರಕಟಿಸಿದ್ದಾರೆ. 7 ) ದಿ ಲೈಫ್ ಟ್ರೀ - ಕಲಾಂ ಅವರು ಬರೀ ವಿಜ್ಞಾನಿಯಲ್ಲದೆ ಒಳ್ಳೆಯ ಕವಿಯೂ ಆಗಿದ್ದಾರೆ. 8 ) ದಿ ಲೈಫ್ ಟ್ರೀ ಅವರ ಕವನ ಸಂಕಲನವಾಗಿದ್ದು ವಿಜ್ಞಾನ ಮತ್ತು ಸಾಹಿತ್ಯವನ್ನು ಒಂದು ಮಾಡುವ ಪುಸ್ತಕ ಇದು. ಇವರ ಕವನಗಳು ಇವರ ದೇಶಭಕ್ತಿ ಹಾಗು ಮಾತೃಭಕ್ತಿಯನ್ನು ತೋರಿಸುತ್ತದೆ ಮತ್ತು ದೇವರ ಮೇಲೆ ಇವರಿಗಿರುವ ಶ್ರದ್ಧಾ ಭಕ್ತಿಯನ್ನು ತೋರಿಸುತ್ತದೆ. 8 ) ಚಿಲ್ರೆನ್ ಆಸ್ಕ್ ಕಲಾಂ-ಮಕ್ಕಳು ಕಲಾಂರವರಿಗೆ ಬರೆದ ಪತ್ರಗಳ ಪ್ರಶ್ನೆಗಳಿಗೆ ಪ್ರತ್ಯುತ್ತರ ಪತ್ರಗಳ ಸಂಕಲನ ಈ ಪುಸ್ತಕ. ಇದರಲ್ಲಿ ಮಕ್ಕಳ ವಿಷಯಗಳು, ಭಾರತೀಯತೆ, ವಿದ್ಯಾಭ್ಯಾಸ, ಸಾಮಾನ್ಯ ವಿಷಯಗಳು, ವಿಜ್ಞಾನ ಮತ್ತು ಆಧ್ಯಾತ್ಮದ ಬಗ್ಗೆ ಮಕ್ಕಳಿಗೆ ತಿಳಿಸುತ್ತದೆ.
ಪ್ರಶಸ್ತಿಗಳು ಮತ್ತು ಗೌರವಗಳು ವಿದೇಶಗಳ ಒಟ್ಟು 45 ವಿಶ್ವವಿದ್ಯಾಲಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಅವರಿಗೆ ಪದ್ಮಭೂಷಣ ( 1 9 8 1 ) , ಪದ್ಮವಿಭೂಷಣ ( 1 9 9 ) ಹಾಗೂ ಭಾರತದ ಅತ್ಯುನ್ನತ
ನಾಗರಿಕ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿಗಳು ( 1 9 9 7 ) ಲಭಿಸಿವೆ. ಅವರಿಗೆ ಕಿಂಗ್ ಸ್ ಚಾರ್ಲ್ಸ್ ಪದಕ, ವುಡ್ರೋ ವಿಲ್ಸನ್ ಪ್ರಶಸ್ತಿ, ಹೂಮ್ ಪ್ರಶಸ್ತಿ, ಇಂಟರ್ ನ್ಯಾಶನಲ್ ವಾನ್‌ಕರ್ಮನ್ ವಿಂಗ್ಸ್ ಪ್ರಶಸ್ತಿ ಮುಂತಾದ ಅಂತಾರಾಷ್ಟೀಯ ಪುರಸ್ಕಾರಗಳೂ ಸಂದಿವೆ .
ಮರಣ ಡಾ.ಅಬ್ದುಲ್ ಕಲಾಂರವರು,ಜುಲೈ 27, 2015 ರಂದು ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.ಕೊನೆಯ ಉಸಿರು ಇರುವವರೆಗೂ ಅವರು ಸೇವೆಯಲ್ಲಿ ನಿರತರಾಗಿದ್ದು, ಇಡೀ ದೇಶದ ಜನತೆಗೆ ಮಾದರಿಯ ವ್ಯಕ್ತಿತ್ವ.
೩೦,ಜುಲೈ, ೨೦೧೫ ರಂದು, ಡಾ.ಕಲಾಂ ಹುಟ್ಟಿಬೆಳೆದ ತಮಿಳುನಾಡಿನ ರಾಮೇಶ್ವರಂ ಊರಿನಲ್ಲಿ ಅವರ ಅಂತಿಮಕ್ರಿಯೆ, ಸಕಲ ರಾಷ್ಟ್ರೀಯ ಸನ್ಮಾನಗಳೊಂದಿಗೆ ನಡೆಯಿತು .