education equality secularism in kannada in

MANJUNATHMP7 156 views 14 slides Mar 25, 2024
Slide 1
Slide 1 of 14
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8
Slide 9
9
Slide 10
10
Slide 11
11
Slide 12
12
Slide 13
13
Slide 14
14

About This Presentation

articles about equality and secularism


Slide Content

Welcome

ಪೀಠಿಕೆ : ಒಂದು ದೇಶದ ಅಭಿವೃದ್ಧಿ ಅಲ್ಲಿನ ಮಾನವ ಸಂಪನ್ಮೂಲಗಳನ್ನು ಅವಲಂಬಿಸಿದೆ . ಮಾನವರನ್ನು ಮಾನವ ಸಂಪನ್ಮೂಲವನ್ನಾಗಿ ಬದಲಾಯಿಸುವ ಹೊಣೆಗಾರಿಕೆ ಶಿಕ್ಷಣದ ಮೇಲಿದೆ . ಹಾಗಾಗಿ ಪ್ರತಿಯೊಂದು ರಾಷ್ಟ್ರವು ತನ್ನ ಮೊದಲ ಆಧ್ಯತೆಯನ್ನು ಶಿಕ್ಷಣಕ್ಕೆ ಮೀಸಲಿಟ್ಟಿದೆ . ಹಾಗೆಯೇ ಭಾರತದಂತಹ ಅಭಿವೃದ್ಧಿ ಹೊಂದಿತ್ತಿರುವ ರಾಷ್ಟ್ರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯುವ ಪ್ರಯತ್ನ ಮಾಡುತ್ತಿದೆ . ಹಾಗಾಗಿ ಶಿಕ್ಷಣವನ್ನು ಧರ್ಮ , ಜಾತಿ , ಜನಾಂಗ , ಲಿಂಗ ಭೇದವಿಲ್ಲದೇ ಪ್ರತಿಯೊಂದು ಮಗುವಿಗೂ ತಲುಪುವಂತೆ ಮಾಡಿದೆ . ಇದಕ್ಕೆ ಕಾರಣವಾದ ಅಂಶಗಳೆಂದರೆ ಸಂವಿಧಾನಾತ್ಮಕ ಮೌಲ್ಯಗಳಾದ ಸಮಾನತೆ , ಸಾಮಾಜಿಕ ನ್ಯಾಯ , ಜಾತ್ಯಾತೀತತೆ .

ಸಮಾನ ತ ೆ ಯ ಅ ರ ್ ಥ ಸ್ಥಾನ & ಅವಕಾಶಗಳನ್ನು ನೀಡುವಾಗ ಯಾವುದೇ ಧರ್ಮ , ಜಾತಿ , ಕುಲ , ಲಿಂಗ , ವಾಸಸ್ಥಳ , ಇತ್ಯಾದಿ ಆಧಾರಗಳ ಮೇಲಿನ ತಾರತಮ್ಯ ಮಾಡದೆ ಇರುವುದನ್ನು ಸಮಾನತೆ . ಪ್ರತಿಯೊಬ್ಬರಿಗೂ ಕಾನೂನಾತ್ಮಕ ಸ್ಥಾನ & ಅವಕಾಶ ನೀಡುವ ಮೂಲಕ ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸುವುದಾಗಿದೆ .

ಸಮಾನತೆಯನ್ನು ಸಾಧಿಸಲು ಸಂವಿಧಾನದಲ್ಲಿ ಹಲವಾರು ಪ್ರಾವಧಾನಗ ಳ ು : 1 ಸಮಾನತೆಯ ಹಕ್ಕು : 14-18 ವಿಧಿ -೧೪ ಕಾನೂನಿನ ಮುಂದೆ ಎಲ್ಲರೂ ಸಮಾನರು ಭಾರತದ ಭೂ ಪ್ರದೇಶದಲ್ಲಿ ವಾಸಿಸುವ ಯಾವುದೇ ವ್ಯಕ್ತಿ ಕಾನೂನಿನ ಮುಂದೆ ಸಮಾನರು ಎಂದು ಈ ವಿಧಿಯು ಮಾಹಿತಿ ನೀಡುತ್ತದೆ . ಇದು ವಿದೇಶಿಯರಿಗೂ ಅನ್ವಯವಾಗುತ್ತದೆ . ವಿನಾಯಿತಿಗಳು ಭಾರತದ ಸಂವಿಧಾನದ 361ನೇ ವಿಧಿಯನ್ವಯ ರಾಷ್ಟ್ರಪತಿಯವರಿಗೆ ಮತ್ತು ರಾಜ್ಯಪಾಲರಿಗೆ ವಿಶೇಷವಾದ ಸವಲತ್ತು ನೀಡಿದೆ . ಇವರು ಅಧಿಕಾರದಲ್ಲಿರುವ ಸಂದರ್ಭದಲ್ಲಿ ಇವರನ್ನು ಬಂಧಿಸುವುದಾಗಲಿ ಅಥವಾ ಕ್ರಿಮಿನಲ್ ಮೊಕದ್ದಮೆಯಾಗಲಿ ಹೂಡುವಂತಿಲ್ಲ .

ವಿಧಿ-15 ರಾಜ್ಯ ತಾರತಮ್ಯ ಮಾಡುವಂತಿಲ್ಲ . ಕುಲ , ಜಾತಿ , ಲಿಂಗ , ಜನ್ಮಸ್ಥಳದ ಆಧಾರದ ಮೇಲೆ ವ್ಯಕ್ತಿಗೆ ರಾಜ್ಯ ತಾರತಮ್ಯ ಮಾಡುವಂತಿಲ್ಲ . ವಿನಾಯಿತಿಗಳು ಮಹಿಳೆಯರಿಗೆ , ಮಕ್ಕಳಿಗೆ , ವಿಶೇಷ ಅವಕಾಶ ಕಲ್ಪಿಸಬಹುದು . ಹಾಗೂ ಸಾಮಾಜಿಕವಾಗಿ , ಶೈಕ್ಷಣಿಕವಾಗಿ , ಹಿಂದುಳಿದವರಿಗೆ , ವಿಶೇಷ ಸವಲತ್ತು ನೀಡಬಹುದಾಗಿದೆ . ವಿಧಿ-16 ನೌಕರಿಯಲ್ಲಿ ಸಮಾನತೆ ಸಾರ್ವಜನಿಕ ಸೇವೆಗೆ ಸೇರಲು ಸಮಾನ ಅವಕಾಶ . ಲಿಂಗ , ಜಾತಿ , ಧರ್ಮ , ಕುಲ ಇವುಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ .

ವಿಧಿ 17 ಅಸ್ಪೃಶ್ಯತೆ ನಿಷೇಧ ಸಾರ್ವಜನಿಕ ಸ್ಥಳದಲ್ಲಿ ಮತ್ತು ಸಾರ್ವಜನಿಕ ಆರಾಧನಾ ಸ್ಥಳಗಳಲ್ಲಿ ಜಾತಿಯ ಆಧಾರದ ಮೇಲೆ ಪ್ರವೇಶ ನಿಷೇಧ ಮಾಡುವಂತಿಲ್ಲ 1955 ರಲ್ಲಿ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು ಜಾರಿ ಮಾಡಲಾಯಿತು . ನಂತರ 1976 ರಲ್ಲಿ ಈ ಕಾಯ್ದೆ ತಿದ್ದುಪಡಿ ಮಾಡಿ 1955ರ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಎಂದು ಮರು ನಾಮಕರಣ ಮಾಡಲಾಯಿತು . ವಿಧಿ-18 ಬಿರುದು ಬಾವಲಿಗಳ ರದ್ದತಿ ರಾಜ್ಯವು ಸೈನಿಕರಿಗೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹೊರತುಪಡಿಸಿ ಬೇರೆಯವರಿಗೆ ಬಿರುದುಗಳನ್ನು ನೀಡುವಂತಿಲ್ಲ . ಭಾರತದ ಪ್ರಜೆಯ ವಿದೇಶದಿಂದ ಯಾವುದೇ ಬಿರುದುಗಳನ್ನು ಪಡೆಯುವಂತಿಲ್ಲ . ಪಡೆಯುವುದಾದರೆ ರಾಷ್ಟ್ರಪತಿಯವರ ಒಪ್ಪಿಗೆ ಕಡ್ಡಾಯ ವಿದೇಶಿಯ ನಾಗರಿಕರು ಭಾರತದಲ್ಲಿ ಲಾಭದಾಯಕ ಹುದ್ದೆಯಲ್ಲಿದ್ದಾಗ ಇವರು ಸಹ ವಿದೇಶದಿಂದ ಬಿರುದುಗಳನ್ನಾಗಲಿ ಕಾಣಿಕೆಯನ್ನಾಗಲೀ ಪಡೆಯಬೇಕಾದರೆ ರಾಷ್ಟ್ರಪತಿಯವರ ಒಪ್ಪಿಗೆ ಕಡ್ಡಾಯ .

೨ . ಸಾಮಾಜಿಕ ನ್ಯಾಯ : ಸಾಮಾಜಿಕ ನ್ಯಾಯ ಎಂಬುದಕ್ಕೆ ಸುಲಭ ಸಾಧ್ಯದಲ್ಲಿ ಅರ್ಥೈಸುವುದು ಕಷ್ಟಸಾಧ್ಯ . ಆದಾಗ್ಯೂ ಸಾಮಾನ್ಯ ಅರ್ಥದಲ್ಲಿ ಸಾಮಾಜಿಕ ನ್ಯಾಯವೆಂದರೆ ಸಮಾಜದಲ್ಲಿರುವಂತಹ ಪ್ರತಿಯೊಬ್ಬರೂ ಸಮಾನ ಅಂಶಗಳನ್ನು ಹೊಂದಿ ಸಮಾನತೆಯ ಹಕ್ಕನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಪಡೆದಿರುವುದು ಅಂದರೆ ಯಾವುದೇ ವ್ಯಕ್ತಿಗೂ ತಾರತಮ್ಯವಿಲ್ಲದೆ ಮುಕ್ತವಾಗಿ ಸಮಾಜದಲ್ಲಿ ಬದುಕಲು ಬಿಡುವುದು ಎಂಬುದಾಗಿ ತಿಳಿಸಬಹುದು . ಈ ಪದವನ್ನು ರಷ್ಯಾ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ . ಎಲ್ಲಾ ಪ್ರಜೆಗಳಿಗೆ ತಾರತಮ್ಯವಿಲ್ಲದೇ ಆರ್ಥಿಕ , ಸಾಮಾಜಿಕ , ರಾಜಕೀಯದಲ್ಲಿ ನ್ಯಾಯ ಒದಗಿಸುವುದಾಗಿದೆ

ಸಾಮಾಜಿಕ ನ್ಯಾಯದ ಕುರಿತು ಅಂಬೇಡ್ಕರ್ ಹಲವು ಪುಸ್ತಕಗಳಲ್ಲಿ ಉಲ್ಲೇಖಿಸಿ ರುವುದನ್ನು ಕಾಣಬಹುದು . ಇಲ್ಲಿ ಮಾನವೀಯ ಮೌಲ್ಯಗಳನ್ನು ಪ್ರತಿ ವ್ಯಕ್ತಿಯಲ್ಲೂ ಪ್ರತಿನಿಧಿಸಲು ಸಾಮಾಜಿಕ ನ್ಯಾಯ ಅವಶ್ಯ ಎಂದು ಪ್ರತಿಪಾದಿ ಸಿದ್ದಾರೆ . ಸಮಾನತೆ , ಸಹೋದರತೆಯ ಆಧಾರದ ಮೇಲೆ ಸಾಮಾಜಿಕ ನ್ಯಾಯವನ್ನು ಸಾಧಿಸಬಹುದು , ಆ ಮೂಲಕ ಮಾನವರಲ್ಲಿ ಪ್ರೀತಿ , ಸಹಕಾರ ಬೆಳೆಸಬಹುದು ಎಂದಿದ್ದಾರೆ . ಈ ಭೂಮಿಯ ಮೇಲಿನ ಎಲ್ಲಾ ಸ್ವತ್ತುಗಳು ಎಲ್ಲಾ ಮಾನವರಿಗೆ ಸಮಾನವಾಗಿ ಹಂಚಿಕೆಯಾಗಬೇಕು . ಸಾಮಾಜಿಕ , ಆರ್ಥಿಕ , ರಾಜಕೀಯ , ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಅವಕಾಶ ಕಲ್ಪಿಸಬೇಕು , ಆ ಮೂಲಕ ಸಮಾಜದ ಜೀವನ ಮಟ್ಟದ ಉನ್ನತೀಕರಣಕ್ಕೆ ಪ್ರಯತ್ನಿಸಬಹುದು ಎಂದಿದ್ದಾರೆ .

೩. ಜಾತ್ಯಾತೀತತೆ : ಜ್ಯಾತ್ಯಾತೀತ ಎಂಬ ಪದವನ್ನು ಬ್ರೆಜೆ . ಹಾಲಿಡೇಕ್ ಎಂಬುವರು ಬಳಸಿದವರು . ಇಂಗ್ಲೀಷ್ನಲ್ಲಿನ Secularisim ಪದದ ಅನುವಾದವೇ ಜ್ಯಾತ್ಯಾತೀತತೆ . ಇದರಲ್ಲಿ ಮಾನವನ ಭೌತಿಕ ಮತ್ತು ಸಾಸ್ಕೃತಿಕ ಪ್ರಗತಿ ( ಪ್ರಪಂಚದ ಪಗತಿಯನ್ನು ಪ್ರಸ್ತುತ ಪ್ರಗತಿಯನ್ನು ಪರಿಗಣಿಸಲಾಗುವುದು ) ಜಾತ್ಯಾತೀತತೆಗೆ ಸಂಬಂಧಿಸಿದ ವ್ಯಾಖ್ಯಾನಗಳು : ಗಾಂಧೀಜಿಯವರ ಪ್ರಕಾರ : " ಸರ್ವಧರ್ಮ ಸಮಾನತ್ವ ಭಾವ , ನನ್ನ ನಂಬಿಕೆಗೆ ಇರುವ ಪೂಜ್ಯ ಭಾವನೆಯು ಇತರರ ನಂಬಿಕೆಗೂ ಇದೆ ಎಂಬ ಭಾವನೆಯೇ ಜಾತ್ಯಾತೀತತೆ " ಎಂದಿದ್ದಾರೆ . ಡಾ.ಬಿ.ಆರ್.ಅಂಬೇಡ್ಕರ್ ಪ್ರಕಾರ : " ಜಾತ್ಯಾತೀತ ರಾಷ್ಟ್ರವೆಂದರೆ ಸಂಸತ್ತಿಗೆ , ಇತರ ಜನರ ಮೇಲೆ ಯಾವುದೇ ಧರ್ಮವನ್ನು ಒತ್ತಾಯದಿಂದ ಹೇರುವ ಅಧಿಕಾರವಿಲ್ಲ ಎನ್ನುವುದೇ ಆಗಿದೆ ."

ನಮ್ಮದು ಜಾತ್ಯಾತೀತ ರಾಷ್ಟ್ರ . ಅಂದರೆ ನಮ್ಮ ರಾಷ್ಟ್ರವು ಧರ್ಮ ವಿರೋಧಿ ಅಥವಾ ಧರ್ಮ ರಹಿತ ರಾಷ್ಟ್ರ ಎನ್ನುವ ವರ್ಗವಲ್ಲ . ದೇಶದ ಜನರೆಲ್ಲರಿಗೂ ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸಿ ಆರಾಧಿಸಲು ಅವಕಾಶವಿದೆ . ವಿಭಿನ್ನ ಧರ್ಮದವರು ಅವರ ಇಪ್ಪದಂತೆ ಯಾವ ಅಡೆತಡೆಯೂ ಇಲ್ಲದೆ ಬೆಳೆಯುವಂತಾಗಬೇಕು ಎನ್ನುವುದೇ ಜಾತ್ಯಾತೀತತೆಯ ಆಶಯವಾಗಿದೆ ಮೇಲಿನ ವ್ಯಾಖ್ಯೆಗಳಿಂದ ಸ್ಪಷ್ಟವಾಗುವ ಅಂಶವೆಂದರೆ ಜಾತ್ಯಾತೀತತೆಯ ಎರಡು ಮುಖ್ಯ ಅಂಗಗಳು , ಸಮಾನತೆ ಮತ್ತು ಸಹಿಷ್ಣತೆ , ಜಾತ್ಯಾತೀತತೆಯ ರಾಷ್ಟ್ರ ವ್ಯವಸ್ಥೆಯಲ್ಲಿ ಯಾವ ಧರ್ಮಕ್ಕೂ ಹೆಚ್ಚಿನ ಸೌಲಭ್ಯ ನೀಡುವುದಾಗಲೀ , ಯಾವುದೇ ಧರ್ಮವನ್ನು ಸೌಲಭ್ಯದಿಂದ ವಂಚಿಸುವುದಾಗಲೀ ಮಾಡಲು ಸಾಧ್ಯವಿಲ್ಲ . ಧಾರ್ಮಿಕ ಸ್ವಾತತ್ರ್ಯ ಜಾತ್ಯಾತೀತ ರಾಷ್ಟ್ರದಲ್ಲಿ ಕೊಟ್ಟ ಮೊದಲನೆಯ ಅಂಶ . ಸಕಲ ಧರ್ಮಗಳ ಬಗ್ಗೆ ಪೂಜ್ಯ ಭಾವನೆಯನ್ನು ಸರಕಾರ ಹೊಂದಿರುತ್ತದೆ . ಅದಕ್ಕಾಗಿ ಭಾರತದ ಸಂವಿಧಾನದ 25ನೇ ವಿಧಿ ಅವಕಾಶ ಮಾಡಿಕೊಡುತ್ತವೆ .

ಕೊಠಾರಿ ಆಯೋಗವು ಅನೇಕ ಧರ್ಮವಿರುವ ಪ್ರಜಾಪ್ರಭುತ್ವದಲ್ಲಿ ಎಲ್ಲಾ ಧರ್ಮಗಳನ್ನು ಸಹಿಷ್ಣುತಾ ಮನೋಭಾವದಿಂದ ಅಭ್ಯಸಿಸಿ ಪೋಷಿಸಿ ವಿವಿಧ ಧರ್ಮದವರು ಒಬ್ಬರನೊಬ್ಬರು ಅರಿತು ಅನ್ನೋನ್ನತೆಯಿಂದ ಇರುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದರು .

ಜಾತ್ಯಾತೀತತೆ ಮತ್ತು ಶಿಕ್ಷಣದ ನಡುವಿನ ಅಂತ‌ರ್ ಸಂಬಂಧ ಸರ್ವಧರ್ಮಗಳ ತತ್ವಗಳು ಒಂದೇ ವಿಧದ ರೀತಿಯಾಗಿ ಹೊಳೆ ಹಳ್ಳ ಹಳ್ಳ ಗಳು ಹರಿದು ಸಮುದ್ರ ಸೇರುವಂತೆ , ಧರ್ಮಗಳು ಬೇರೆ ಬೇರೆಯಾಗಿದ್ದರೂ ಅವುಗಳ ಉದ್ದೇಶ ಜೀವನದ ಮಾರ್ಗದರ್ಶಕ ಸೂತ್ರಗಳನ್ನು ತಿಳಿಹೇಳುವುದಾಗಿದೆ ಎಂದು ಮಕ್ಕಳಿಗೆ ಮನದಟ್ಟು ಮಾಡಿ ಭಿನ್ನಾಭಿಪ್ರಾಯವನ್ನು ತೊಡೆದು ಹಾಕಬೇಕು . ಸತ್ಯ , ನ್ಯಾಯ , ನೀತಿ , ಅಹಿಂಸೆ , ತ್ಯಾಗ ಮುಂತಾದ ಸದ್ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು . ಮಕ್ಕಳಿಗೆ ಧಾರ್ಮಿಕ ಶಿಕ್ಷಣ , ನೀತಿ ಧರ್ಮ , ಜಾತಿ , ಪಂಗಡಗಳೆಂಬ ಕಟ್ಟುಕತೆಗಳಲ್ಲಿಯ ಅನಗತ್ಯ ಹಾಗೂ ಅನಾರೋಗ್ಯಕರವಾದ ವಾತಾವರಣವನ್ನು ತೊಡೆದು ಹಾಕಬೇಕು . ಧರ್ಮದ ಮೂಲ ತತ್ವಗಳಾದ ನೀತಿ , ನಿಷ್ಠೆ , ಸೋದರತ್ವ ಕರ್ತವ್ಯನಿಷ್ಠೆ , ಆತ್ಮಸ್ಟೈರ್ಯ , ಅನುಕಂಪ , ಪ್ರೇಮ ಪ್ರೀತಿ ಮುಂತಾದ ಸೌಜನ್ಯ ವಿಚಾರಗಳನ್ನು ಬೆಳೆಸುವುದರ ಮೂಲಕ ಮಕ್ಕಳಲ್ಲಿ ಜಾತ್ಯಾತೀತತೆ ಭಾವನೆ ಬೆಳೆಸಬೇಕು .

ಉಪಸಂಹಾರ : ಈ ಮೇಲಿನ ಎಲ್ಲಾ ಅಂಶಗಳನ್ನು ಅವಲೋಕಿಸಿದಾಗ ನಮಗೆ ತಿಳಿದು ಬರುವುದೆನೆಂದರೆ ಸಂವಿಧಾನದ ಮೌಲ್ಯಗಳು ಶಿಕ್ಷಣವನ್ನು ವ್ಯವಸ್ಥಿತವಾಗಿ . ಸುಗಮವಾಗಿ ಸಾಗುವಂತೆ ಮಾಡಿದರೇ ಶಿಕ್ಷಣವು ಸಂವಿಧಾನದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಿ , ರಾಷ್ಟ್ರಾಭಿವೃದ್ಧಿಗೆ ಮತ್ತು ರಾಷ್ಟ್ರ ಐಕ್ಯತೆಗೆ ಎಲೆಮರೆಕಾಯಿಯಂತೆ ಸತತ ಪ್ರಯತ್ನ ಮಾಡುತ್ತಿದೆ . ಆದ್ದರಿಂದ ಶಿಕ್ಷಣ ಮತ್ತು ಸಂವಿಧಾನದ ಮೌಲ್ಯಗಳು ಒಂದಕ್ಕೊಂದು ಪರಸ್ಪರ ಪೂರಕ ಸಂಬಂಧ ಹೊಂದಿವೆ . ಸರ್ವಧರ್ಮಗಳ ತತ್ವಗಳು ಒಂದೇ ವಿಧದ ರೀತಿಯಾಗಿ ಹೊಳೆ ಹಳ್ಳಗಳು ಹರಿದು ಸಮುದ್ರ ಸೇರುವಂತೆ , ಧರ್ಮಗಳು ಬೇರೆ ಬೇರೆ ಯಾಗಿದ್ದರೂ ಅವುಗಳ ಉದ್ದೇಶ ಜೀವನದ ಮಾರ್ಗದರ್ಶಕ ಸೂತ್ರಗಳನ್ನು ತಿಳಿಹೇಳುವುದಾಗಿದೆ ಎಂದು ಮಕ್ಕಳಿಗೆ ಮನದಟ್ಟು ಮಾಡಿ ಭಿನ್ನಾಭಿಪ್ರಾಯವನ್ನು ತೊಡೆದು ಹಾಕುವಲ್ಲಿ ಶಿಕ್ಷಣದ ಪ್ರಮುಖ ಪಾತ್ರ ವಹಿಸುತ್ತದೆ . ಅಷ್ಟೇ ಅಲ್ಲದೆ ಸತ್ಯ , ನ್ಯಾಯ , ನೀತಿ , ಅಹಿಂಸೆ , ತ್ಯಾಗ ಮುಂತಾದ ಸದ್ಗುಣಗಳನ್ನು ಮಕ್ಕಳಲ್ಲಿ ಬೆಳೆಸಲು ಈ ಪ್ರಮುಖ ಅಂಶಗಳು ಸಹಕಾರಿಯಾಗಿವೆ ಎಂದು ಹೇಳಬಹುದು .  

ಗ್ರಂಥಋಣ : ಶಿವಕುಮಾರ್ ‌ ಎಸ್.ಕೆ _ ಜ್ಞಾನ ಮತ್ತು ಪಠ್ಯಕ್ರಮ , ವಿಸ್ಮಯ ಪ್ರಕಾಶನ ಮೈಸೂರು (೨೦೧೬) ಪುಟಸಂಖ್ಯೆ (೮೮-೧೧೨) https://www.google.com
Tags