ಭಕ್ತಾಪರಾಧ ಸಹಿಷ್ಣೋ, ನಿನ್ನ ಅಧೀನರಾದ ಈ ಜೀವರು ದುಃಖಿತಾಂತಃಕರುಣಿಗಳಾಗಿದ್ದಾರೆ, ಬಳಲಿ ಬೆಂಡಾಗಿದ್ದಾರೆ, ದಾರಿಕಾಣದೆ ನಿನ್ನನ್ನೇ ಶರಣು ಹೋಗಿದ್ದಾರೆ, ಇವರನ್ನು ಉದ್ಧರಿಸಿ ಕಾಪಾಡು ಪ್ರಭು" ಎಂದು ವಿಜ್ಞಾಪಿಸಿಕೊಳ್ಳುವ ಅನಿಮಿತ್ತ ಬಂಧುಗಳು. ಸರ್ವಸ್ತಳಗಳಲ್ಲಿ, ಸರ್ವಕಾಲದಲ್ಲಿ, ಸರ್ವಾಕಾರನಾದ, ಸರ್ವಾಧಾರನಾದ, ಸರ್ವಾಶ್ರಯನಾದ, ಸರ್ವಸೃಷ್ಟಿ-ಸ್ಥಿತಿ-ಲಯಕಾರನಾದ, ಸರ್ವನಿಯಾಮಕನಾದ, ಸರ್ವಪ್ರವರ್ತಕನಾದ, ಸರ್ವರ ಯೋಗ್ಯತಾನುಸಾರ ಜ್ಞಾನಜ್ಞಾನಬಂಧ ಮೊಕ್ಷಪ್ರದನಾದ, ಸರ್ವಸತ್ತಾಪ್ರದನಾದ, ಸರ್ವಶಬ್ದವಾಚ್ಯನಾದ, ಸರ್ವಶಬ್ದ ಪ್ರವೃತ್ತಿ ನಿಮಿತ್ತನಾದ, ಸರ್ವಗುಣಗಳಿಂದ ಪರಿಪೂರ್ಣತಮನಾದ, ಸರ್ವದೋಷಗಳಿಂದ ದೂರನಾದ, ಸರ್ವಾಚಿಂತ್ಯನಾದ, ಸರ್ವೋತ್ತಮನಾದ, ಸರ್ವೆಶ್ವರನಾದ, ಸರ್ವಾಂತ್ಯಂತ ವಿಲಕ್ಷಣನಾದ, ಸ್ವಗತಭೇದ ವಿವರ್ಜಿತನಾದ, ಶ್ರೇಯಃಪತಿಯ ರಮಾಯುಕ್ತ ಅಶೇಷ ಭಗವದ್ರೂಪಂಗಳನ್ನು ನಿತ್ಯವೂ ಕಂಡು ಆನಂದಿಸುವ ಆನಂದಮಯರು. ಶ್ರೀಮುಖ್ಯಪ್ರಾಣರು ಅಭಿಮಾನಾದಿ ಸರ್ವದೋಶದೂರರು. ಅಸೂಯೆರ್ಷ್ಯಾದಿ ಸಕಲ ಮನೋದೋಷ ನಿವಳಕರು, ಸರ್ವತಾತ್ವಿಕ ದೇವಪ್ರೇರಕರು, ಸರ್ವತಾತ್ವಿಕ ಅಸುರಭಂಜಕರು, ದುರ್ಮತಭಂಜಕರಾದ ಪ್ರಯುಕ್ತ 'ಪ್ರಭಂಜನ' ರೆಂದು ಇವರಿಗೆ ಹೆಸರು. ಪ್ರತಿದಿನ, ಪ್ರತಿಕ್ಷಣ, ಬುದ್ಧಿಶೋಧಕರು, ಸರ್ವ ಕಾರ್ಯಗಳನ್ನು ಮಾಡುವವರೂ, ಮಾಡಿಸುವವೂ, ಆದ ಅವರು ಸರ್ವ ಕರ್ಮಕ್ಕೆ ಪ್ರಭುಗಳು, ಮಾಡಿದ ಸರ್ವ ಕರ್ಮಗಳನ್ನು ಭಗವಂತನಲ್ಲಿ ಸಮರ್ಪಿಸುವವರೂ, ಸರ್ವಕರ್ಮಗಳ ಫಲಭೋಕ್ತ್ರಗಳೂ, ಸರ್ವಜೀವರಲ್ಲಿದ್ದು ಸರ್ವಕರ್ಮಗಳ ಫಲಗಳನ್ನು ಜೀವರಿಗೆ ಉಣಿಸತಕ್ಕವರೂ ಇವರೇ. ಸಕಲಕಾರ್ಯಗಳಿಗೆ ಪ್ರೇರಕರೂ, ಸಕಲ ಕಾರ್ಯಗಳ ಉದ್ಭೋದಕರೂ, ಸಕಲ ಕಾರ್ಯಗಳನ್ನು ಪವಿತ್ರಗೊಳಿಸುವವರೂ, ಸಕಲ ಕಾರ್ಯಗಳ ಸಿದ್ದಿಪ್ರದರೂ, ಸಕಲ ಕಾರ್ಯನಿಷ್ಟರೂ, ಸಕಲ ಕಾರ್ಯಗಳಿಗೆ ಸಾಕ್ಷೀಭೂತರೂ ಆದ ಇವರು ಅಶೇಷ ಜೀವರ ಅನಂತ ಜನ್ಮಗಳ ಧರ್ಮಾಧರ್ಮಗಳನ್ನು ಬಲ್ಲ ರಮಾನಾರಾಯಣರ ಅನ್ಯತ್ರ ಸರ್ವಜ್ಞರು. ಹೇಗೆ ಲಕ್ಷ್ಮೀಶನಾದ ನಾರಾಯಣನು ವೈಕುಂಟವನ್ನು ಬಿಟ್ಟು ಕಲಿಯುಗದ ಜನರನ್ನು ಉದ್ಧರಿಸಲು ಸ್ವಯಂ ತಾನೇ ಬಂದು ವೆಂಕಟಾಚಲದಲ್ಲಿ ವಿರಾಜಮಾನನಾಗಿ