Karnataka History ಕರ್ನಾಟಕದ ಇತಿಹಾಸದ ದಾಖಲೆ ೨೦೦೦ ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು . • ಕರ್ನಾಟಕದ ಪೂರ್ವ ಇತಿಹಾಸ. ಕರ್ನಾಟಕದ ಪೂರ್ವ ಇತಿಹಾಸದ ಸಂಸ್ಕೃತಿ ಭಾರತದ ಉತ್ತರ ಭಾಗಕ್ಕಿಂತ ಬಹಳ ಭಿನ್ನವಾಗಿದೆ. ಕರ್ನಾಟಕದ ಪೂರ್ವ ಇತಿಹಾಸದಲ್ಲಿ ಕೊಡಲಿಯನ್ನು ಬಳಸಲಾಗುತ್ತಿತ್ತು. ಕಬ್ಬಿಣದ ಬಳಕೆಯನ್ನು ಕ್ರಿ.ಪೂ.1200ರಿಂದಲೂ ಕರ್ನಾಟಕ ನಿವಾಸಿಗಳು ಬಳಸುತ್ತಿದ್ದಾರೆ. ಉತ್ತರ ಭಾರತದ ನಿವಾಸಿಗಳು ಕಬ್ಬಿಣದ ಬಳಕೆಯ ಬಗ್ಗೆ ತಿಳಿದುಕೊಂಡ ಸಮಯಕ್ಕಿಂತ ಇದು ತುಂಬಾ ಮುಂಚಿನದ್ದು.