ಛಂದಸ್ಸು ತರಗತಿ.pptx

DevarajuBn 2,002 views 154 slides May 15, 2023
Slide 1
Slide 1 of 154
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8
Slide 9
9
Slide 10
10
Slide 11
11
Slide 12
12
Slide 13
13
Slide 14
14
Slide 15
15
Slide 16
16
Slide 17
17
Slide 18
18
Slide 19
19
Slide 20
20
Slide 21
21
Slide 22
22
Slide 23
23
Slide 24
24
Slide 25
25
Slide 26
26
Slide 27
27
Slide 28
28
Slide 29
29
Slide 30
30
Slide 31
31
Slide 32
32
Slide 33
33
Slide 34
34
Slide 35
35
Slide 36
36
Slide 37
37
Slide 38
38
Slide 39
39
Slide 40
40
Slide 41
41
Slide 42
42
Slide 43
43
Slide 44
44
Slide 45
45
Slide 46
46
Slide 47
47
Slide 48
48
Slide 49
49
Slide 50
50
Slide 51
51
Slide 52
52
Slide 53
53
Slide 54
54
Slide 55
55
Slide 56
56
Slide 57
57
Slide 58
58
Slide 59
59
Slide 60
60
Slide 61
61
Slide 62
62
Slide 63
63
Slide 64
64
Slide 65
65
Slide 66
66
Slide 67
67
Slide 68
68
Slide 69
69
Slide 70
70
Slide 71
71
Slide 72
72
Slide 73
73
Slide 74
74
Slide 75
75
Slide 76
76
Slide 77
77
Slide 78
78
Slide 79
79
Slide 80
80
Slide 81
81
Slide 82
82
Slide 83
83
Slide 84
84
Slide 85
85
Slide 86
86
Slide 87
87
Slide 88
88
Slide 89
89
Slide 90
90
Slide 91
91
Slide 92
92
Slide 93
93
Slide 94
94
Slide 95
95
Slide 96
96
Slide 97
97
Slide 98
98
Slide 99
99
Slide 100
100
Slide 101
101
Slide 102
102
Slide 103
103
Slide 104
104
Slide 105
105
Slide 106
106
Slide 107
107
Slide 108
108
Slide 109
109
Slide 110
110
Slide 111
111
Slide 112
112
Slide 113
113
Slide 114
114
Slide 115
115
Slide 116
116
Slide 117
117
Slide 118
118
Slide 119
119
Slide 120
120
Slide 121
121
Slide 122
122
Slide 123
123
Slide 124
124
Slide 125
125
Slide 126
126
Slide 127
127
Slide 128
128
Slide 129
129
Slide 130
130
Slide 131
131
Slide 132
132
Slide 133
133
Slide 134
134
Slide 135
135
Slide 136
136
Slide 137
137
Slide 138
138
Slide 139
139
Slide 140
140
Slide 141
141
Slide 142
142
Slide 143
143
Slide 144
144
Slide 145
145
Slide 146
146
Slide 147
147
Slide 148
148
Slide 149
149
Slide 150
150
Slide 151
151
Slide 152
152
Slide 153
153
Slide 154
154

About This Presentation

Education


Slide Content

ಅಕ್ಷರ ಅಕಾಡೆಮಿ , ಹಾಸನ ಸಾಮಾನ್ಯ ಕನ್ನಡ ವಿಷಯ : ಛಂದಸ್ಸು ಸಿದ್ಧಪಡಿಸಿದವರು : ರವಿ.ಆರ್.ಎನ್ ., ಕನ್ನಡ ಉಪನ್ಯಾಸಕರು .

ತರಗತಿ 2, ಛಂದಸ್ಸು , ಅರ್ಥ , ಹಿನ್ನೆಲೆ , ಕೃತಿಗಳು , ಪ್ರಾಸ , ಯತಿ , ಗಣ , ಲಘು ಮತ್ತು ಗುರು ಅರ್ಥ : ಛಂದಸ್ಸು : ಪದ್ಯದ ರಚನಾ ನಿಯಮಗಳನ್ನು ತಿಳಿಸುವ ಶಾಸ್ತ್ರ . ನಿಷ್ಪತ್ತಿ : ಚದಿಆಹ್ಲಾದೇ , ಛದಿರೂರ್ಜನೆ , ಛದಪವಾರಣೆ , ಯಾಸ್ಕ – ಛಂದಾಂಸಿಛಾದನಾತ್ - ಹೊದಿಕೆ * ಪ್ರಯೋಜನ : ಸ್ಮರಣೆಗೆ ಸುಲಭ , ಸಂಕ್ಷೇಪದ ಕಾರಣ ಶ್ರೇಷ್ಟತೆ .

ಪ್ರಮುಖ ಛಂದೋಗ್ರಂಥಗಳು : ಛಂದಸ್ ಶಾಸ್ತ್ರದ ಪ್ರವರ್ತಕ ಪಿಂಗಲ - ಛಂದಸ್ಸೂತ್ರ ( ಸಂಸ್ಕೃತ ) ಛಂದಸ್ಸಿನ ಮಹತ್ವ : ಜಯಕೀರ್ತಿ ತನ್ನ ʼಛಂದೋನುಶಾಸನʼ ಕೃತಿಯಲ್ಲಿ “ ಕಾವ್ಯ ಸಾಗರವನ್ನು ದಾಟುವ ಬಯಕೆಯುಳ್ಳವನಿಗೆ ಛಂದಶ್ಶಾಸ್ತ್ರವೇ ನೌಕೆ ” ಎಂದಿದ್ದಾನೆ

ಕ್ರ ಸಂ ಕೃತಿ ( ಸಂಸ್ಕೃತ ಕೃತಿಗಳು ) ಕರ್ತೃ ಕಾಲ 1 ಛಂದಶ್ಶಾಸ್ತ್ರ ಪಿಂಗಲ 2 ನಾಟ್ಯಶಾಸ್ತ್ರ ಭರತ ಕ್ರಿ.ಶ.ಸು 3-4 ನೇ ಶತಮಾನ 3 ಛಂದೋವಿಚಿತಿ ಜಾನಾಶ್ರಯಿ ಕ್ರಿ.ಶ.ಸು.600 4 ಜಯದೇವಛಂದಸ್ ‌ ಜಯದೇವ ಕ್ರಿ.ಶ . ಸು.900 5 ಛಂದೋನುಶಾಸನ ಜಯಕೀರ್ತಿ 11 ನೇ ಶತಮಾನ 6 ವೃತ್ತರತ್ನಾಕರ ಕೇದಾರಭಟ್ಟ ಸು.1100

ಕ್ರ ಸಂ ಕೃತಿ ಕರ್ತೃ ಕಾಲ 7 ಛಂದೋನುಶಾಸನ ಹೇಮಚಂದ್ರ 12 ನೇ ಶತಮಾನ

ಕ್ರ ಸಂ ಕೃತಿ ( ಪ್ರಾಕೃತ ಕೃತಿಗಳು ) ಕರ್ತೃ ಕಾಲ 1 ವೃತ್ತಜಾತಿಸಮುಚ್ಚಯ ವಿರಹಾಂಕ ಕ್ರಿ.ಶ.6-8 ನೇ ಶತಮಾನ 2 ಸ್ವಯಂಭೂ ಛಂದಸ್ಸು ಸ್ವಯಂಭು ಕ್ರಿ.ಶ.7-8 ನೇ ಶತಮಾನ 3 ಛಂದಃಕೋಶ ರತ್ನಶೇಖರ ಸು.14 ನೇ ಶತಮಾನ

ಕನ್ನಡದ ಪ್ರಮುಖ ಛಂದೋಗ್ರಂಥಗಳು : ಕವಿರಾಜಮಾರ್ಗ : ಕರ್ತೃ : ಶ್ರೀವಿಜಯ / ಅಮೋಘವರ್ಷ ನೃಪತುಂಗ . 3 ಪರಿಚ್ಛೇದಗಳನ್ನೊಳಗೊಂಡ ಕನ್ನಡದ ಮೊದಲ ಉಪಲಬ್ದ ಗ್ರಂಥ , ಕನ್ನಡ ಛಂದಸ್ಸಿನ ಯತಿ , ಪ್ರಾಸ , ಗುರು , ಲಘುಗಳ ಬಗ್ಗೆ ಮೊದಲು ಪ್ರಸ್ತಾಪಿಸಿರುವ ಕನ್ನಡ ಕೃತಿ

ಛಂದೋಂಬುಧಿ : ಕರ್ತೃ : ಒಂದನೆಯ ನಾಗವರ್ಮ : ಕಾಲ ಕ್ರಿ.ಶ . 990, 6 ಅಧಿಕಾರಗಳನ್ನು ಹೊಂದಿದೆ , ಕರ್ನಾಟಕ ವಿಷಯ ಜಾತಿಗಳ ಪ್ರಸ್ತಾಪವು 5 ನೇಅಧಿಕಾರದಲ್ಲಿದೆ . ಕರ್ನಾಟಕ ವಿಷಯ ಜಾತಿಗಳು ಅಂದರೆ ಅಚ್ಚಗನ್ನಡ ಛಂದಸ್ಸುಗಳು : ಅಕ್ಕರ , ತ್ರಿಪದಿ , ಏಳೆ , ಷಟ್ಪದಿ , ಚೌಪದಿ , ಅಕ್ಕರಿಕೆ , ಛಂದೋವತಂಸ , ಮದನವತಿ , ಗೀತಿಕೆ , ಉತ್ಸಾಹ – 10 ಕರ್ನಾಟಕ ವಿಷಯ ಜಾತಿಗಳ ಬಗ್ಗೆ ವಿವರಣೆ ಪದ್ಯಗಳು ಹಳಗನ್ನಡದಲ್ಲಿವೆ .

ಛಂದಸ್ಸಿನ ಮಹತ್ವವನ್ನು ಕುರಿತು ಒಂದನೇ ನಾಗವರ್ಮ ಹೀಗೆ ಹೇಳಿದ್ದಾನೆ : “ ಛಂದಮನರಿಯದೆ ಕವಿತೆಯ ದಂದುಗದೊಳ್ ‌ ತೊಡರ್ದು ಸುಳಿವ ಕುಕವಿಯೆ ಕುರುಡಂ ” ಒಂದನೆಯ ನಾಗವರ್ಮನ ಇನ್ನೊಂದು ಕೃತಿ : ಕರ್ನಾಟಕ ಕಾದಂಬರಿ . ಇದು ಸಂಸ್ಕೃತ ಕೃತಿಯಾದ ಬಾಣಭಟ್ಟನ ʼಕಾದಂಬರಿʼ ಕೃತಿಯ ಅನುವಾದ ಕೃತಿ

ಕವಿಜಿಹ್ವಾಬಂಧನ : ಕರ್ತೃ : ಈಶ್ವರಕವಿ . ಕಾಲ ಸು:1500, 4 ಅಧ್ಯಾಯಗಳ ಗ್ರಂಥ , ʼಅಭಿನವಕೇಶಿರಾಜʼ ಎಂಬ ಬಿರುದು ಹೊಂದಿದ್ದನು . ಛಂದಸ್ಸಾರ : ಕರ್ತೃ : ಗುಣಚಂದ್ರ , ಕಾಲ : ಸು 1650, 5 ಅಧ್ಯಾಯಗಳನ್ನೊಳಗೊಂಡಿದೆ

ಕ್ರ ಸಂ ಕೃತಿ ( ಕನ್ನಡ ಕೃತಿಗಳು ) ಕರ್ತೃ ಕಾಲ 1 ಛಂದೋವಿಚಿತಿ 2ನೇ ನಾಗವರ್ಮ ಸು.11 ನೇ ಶತಮಾನ 2 ಷಟ್ಪತ್ರ್ಯಯ ಶಾಲ್ಯದ ಕೃಷ್ಣರಾಜ 18 ನೇ ಶತಮಾನ

ಪದ್ಯ : ಪಾದಗಳನ್ನು ಒಳಗೊಂಡಿದ್ದು ಪದ್ಯ . ಪದ್ಯವು ಗಣ , ಯತಿ , ಪ್ರಾಸ , ಲಯಗಳನ್ನು ಹೊಂದಿರುತ್ತದೆ .   ಎರಡು ಸಾಲಿನ ಪದ್ಯ ದ್ವಿಪದಿ ಮೂರು ಸಾಲಿನ ಪದ್ಯ ತ್ರಿಪದಿ ನಾಲ್ಕು ಸಾಲಿನ ಪದ್ಯ ಚೌಪದಿ ಆರು ಸಾಲಿನ ಪದ್ಯ ಷಟ್ಪದಿ ಹದಿನಾಲ್ಕು ಸಾಲಿನ ಪದ್ಯ ಚತುರ್ದಶಪದಿ ( ಅಷ್ಟಷಟ್ಪದಿ , ಸುನೀತ , ಸಾನೆಟ್ ‌ )

ಪ್ರಾಸ : ಆದಿಪ್ರಾಸ : ಪಾದದ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನವಾಗಲೀ , ವ್ಯಂಜನಗಳಾಗಲೀ ಬರುವುದಕ್ಕೆ ಪ್ರಾಸವೆನ್ನುತ್ತಾರೆ . ಪ್ರಾಸಾಕ್ಷರದ ಹಿಂದೆ ಹ್ರಸ್ವಸ್ವರವಿದ್ದರೆ ಎಲ್ಲಾಕಡೆ ಹ್ರಸ್ವಸ್ವರವೂ , ದೀರ್ಘಸ್ವರವಿದ್ದರೆ ಎಲ್ಲಾ ಕಡೆ ದೀರ್ಘಸ್ವರವೂ , ಅನುಸ್ವಾರ ವಿಸರ್ಗಗಳಿದ್ದರೆ ಎಲ್ಲ ಕಡೆಗೆ ಅನುಸ್ವಾರ ವಿಸರ್ಗಗಳೂ ಬಂದಿರಬೇಕು

ಆದಿಪ್ರಾಸ : ಪದ್ಯದ ಪ್ರತಿಪಾದದಲ್ಲಿಯೂ ಆದಿಯಲ್ಲಿ ಎರಡನೆಯಕ್ಷರ ಒಂದೇ ವಿಧವಾಗಿರುವುದು ಪ್ರಾಸ ಎನಿಸುವುದು . ಉ ಡಿ ದಿರ್ದ ಕಯ್ದು ನೆತ್ತರ ಕ ಡ ಲೊಳಗಡಿಗಡಿಗೆ ತಳಮನುರ್ಚುತ್ತಿರೆ ಕಾ ಲಿ ಡ ಲೆಡೆವಡೆಯದೆ ಕುರುಪತಿ ದ ಡಿ ಗವೆಣಂಗಳನೆ ಮೆಟ್ಟಿ ಮೆಲ್ಲನೆ ನಡೆದಂ ( ರನ್ನನ ʼಗದಾಯುದ್ಧʼ )

ಒಂದಕ್ಕಿಂತ ಹೆಚ್ಚಿನ ವ್ಯಂಜನಗಳು ಪ್ರಾಸಾಕ್ಷರವಾಗಿರುವುದಕ್ಕೆ : ಬ ಲ್ಗ ಯ್ಯನೃಪರಂಜಿ ತಡೆಯದೆ ರಘೂದ್ವಹನ ಸೊ ಲ್ಗೇ ಳಿನಮಿಸೆಲಿಳೆಯೊಳ್ ‌ ಚರಿಸುತಧ್ವರದ ನ ಲ್ಗು ದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು //

ಪ್ರಾಸದ ಬಗ್ಗೆ ಮೊದಲು ಹೇಳಿದ ಕನ್ನಡ ಕೃತಿ ಕವಿರಾಜಮಾರ್ಗ . ಅದರಲ್ಲಿ “ ಖಂಡಪ್ರಾಸಮನತಿಶಯಮೆಂದು ಯತಿಯಂ ಮಿಕ್ಕರ್ ” ಎಂಬ ಮಾತು ಬಂದಿದೆ ಅಂದರೆ ಖಂಡಪ್ರಾಸ ( ಆದಿಪ್ರಾಸ ) ವನ್ನು ‍ ಶ್ರೇಷ್ಠವೆಂದು ಭಾವಿಸಿ ಯತಿಯನ್ನು ತಿರಸ್ಕರಿಸಿದರು .

ಆದಿಪ್ರಾಸದ ವಿಧಗಳು : 6 1) ಸಿಂಹ 2) ಗಜ 3) ವೃಷಭ 4) ಅಜ 5) ಶರಭ 6) ಹಯ   ನಿಜದಿಂ ಬಂದೊಡೆ ಸಿಂಹಂ ಗಜ ದೀರ್ಘಂ ಬಿಂದು ವೃಷಭ ವ್ಯಂಜನ ಶರಭಂ | ಅಜನು ವಿಸರ್ಗಂ ಹಯಸಂ ಬುಜಮುಖಿ ದಡ್ಡಕ್ಕರಂಗಳಿವು ಷಟ್ ಪ್ರಾಸಂ ||

1) ಪ್ರಾಸಾಕ್ಷರದ ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಸಿಂಹ ಪ್ರಾಸ 2) ಪ್ರಾಸಾಕ್ಷರದ ಹಿಂದಿನ ಸ್ವರವು ದೀರ್ಘವಾಗಿದ್ದರೆ ಗಜ ಪ್ರಾಸ 3) ಪ್ರಾಸಾಕ್ಷರದ ಹಿಂದೆ ಅನುಸ್ವಾರವಿದ್ದರೆ ವೃಷಭಪ್ರಾಸ 4) ಪ್ರಾಸಾಕ್ಷರದ ಹಿಂದೆ ವಿಸರ್ಗವಿದ್ದರೆ ಅಜಪ್ರಾಸ 5) ಪ್ರಾಸಾಕ್ಷರವು ವಿಜಾತೀಯ ಸಂಯುಕ್ತಾಕ್ಷರದಿಂದ ಕೂಡಿದ್ದರೆ ಶರಭಪ್ರಾಸ 6) ಪ್ರಾಸಾಕ್ಷರವು ಸಜಾತೀಯ ಸಂಯುಕ್ತಾಕ್ಷರದಿಂದ ಕೂಡಿದ್ದರೆ ಹಯಪ್ರಾಸ

ನ ನಗೆ - ಸಿಂಹ ನೀ ನು - ಗಜ ಸಂ ಗಾತಿ - ವೃಷಭ ಅಃ ಬಹಳ - ಅಜ ಗಿ ಫ್ಟ್ ‌ ಕೊಟ್ಟು - ಶರಭ ದ ಕ್ಕಿ ಸಿಕೊಂಡೆ – ಹಯ

ಅಂತ್ಯಪ್ರಾಸ : ಪಾದದ ಕೊನೆಯ ವ್ಯಂಜನ / ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಅದು ಅಂತ್ಯಪ್ರಾಸ . ಆದಿಪ್ರಾಸ ಮತ್ತು ಅಂತ್ಯಪ್ರಾಸಗಳೆರಡೂ ಇರುವುದಕ್ಕೆ : ಆ ಡು ವ ಗುಂಡಯ್ಯನ ಹೊಸ ನೃ ತ್ಯಂ ನೋ ಡು ವ ಶಿವನಂ ಮುಟ್ಟಿತು ಸ ತ್ಯಂ ರಗಳೆಯಲ್ಲಿ ಅಂತ್ಯಪ್ರಾಸ ಕಡ್ಡಾಯವಾಗಿರುತ್ತದೆ . ಅ ಳಿ ಯೆರಗದನಿಲನಲುಗದ ರವಿಕರಂ ಪುಗ ದ ಸು ಳಿ ಗೊಂಡು ದಳವೇರೆ ಹಸುರಳಿದು ಬೆಳುಪುಳಿ ದ

ವಿನುತ ಪ್ರಾಸ ( ಸಮೀಪಾಕ್ಷರ ಪ್ರಾಸ ) : ಸಮೀಪಾಕ್ಷರಗಳು ( ಶ, ಷ, ಸ ) ಪ್ರಾಸಾಕ್ಷರದ ಸ್ಥಾನದಲ್ಲಿ ಬಂದರೆ ಅದು ವಿನುತ ಪ್ರಾಸ . ಉದಾಹರಣೆ : ಈ ಶ ನ ಕರುಣೆಯ ನಾ ಶಿ ಸು ವಿನಯದಿ ದಾ ಸ ನ ಹಾಗೆಯೇ ನೀ ಮನವೇ ಕ್ಲೇ ಷ ದ ವಿಧವಿಧ ಪಾ ಶ ವ ತಿಳಿದುವಿ ಲಾ ಸ ದಿ ಸತ್ಯವ ತಿಳಿಮನವೇ

ವರ್ಗ ಪ್ರಾಸ : ವರ್ಗಾಕ್ಷರಗಳು ಪ್ರಾಸ ಸ್ಥಾನದಲ್ಲಿ ಬಂದರೆ ಅದು ವರ್ಗ ಪ್ರಾಸ . ಉದಾ : ಏ ಕ ಲೋಕ . .. ಅ ಘ ಪಾಪ .. ತ ಗು ಣ .. . ಮು ಖ ಪ್ರ .. . ಪ್ರಾಸವನ್ನು ತ್ಯಜಿಸಿ ಬರೆದ ಕನ್ನಡದ ಮೊದಲ ಕವಿ : ಎಂ . ಗೋವಿಂದ ಪೈ .

ಯತಿ : ಪದ್ಯವನ್ನು ವಾಚಿಸುವಾಗ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ಸ್ಥಳ . ಕವಿರಾಜಮಾರ್ಗ ದಲ್ಲಿ “ ಯತಿಯೆಂಬುದುಸಿರ್ವ ತಾಣಂ ” ಎಂದು ಹೇಳಿದೆ “ ಪೂರ್ವಾಚಾರ್ಯರ್ ದೇಸಿಯನೆ ನಿಱಿಸಿ ಖಂಡ ಪ್ರಾಸಮನತಿಶಯಮೆಂದುಯತಿಯಂ ಮಿಕ್ಕರ್ ” ಎಂಬ ಮಾತಿದೆ .

ಛಂದೋಂಬುಧಿ : “ ಯತಿಯೆಂಬುದು ಗಣನಿಯಮ ಪ್ರತತಿಗುಸಿರ್ದಾಣಮಪ್ಪುದು …….” ಕಾವ್ಯಾವಲೋಕನ ( ಎರಡನೇ ನಾಗವರ್ಮ ) : “ ನಿಯತಸ್ಥಾನಂ ಪದವಿಸೃತಿ ಯೊಳಾದ ವಿರಾಮಮಱಿಗೆ ಯತಿಯಕ್ಕುಂ ”

ಸಂಸ್ಕೃತ ಛಂದಶ್ಶಾಸ್ತ್ರಕಾರರ ಹೇಳಿಕೆಗಳು : ಪಿಂಗಲ : “ ಯತಿರ್ವಿಚ್ಛೇದಃ ” ಜಯಕೀರ್ತಿ : “ ವಾಗ್ವಿರಾಮೋ ಯತಿಃ ” ಹೇಮಚಂದ್ರ : ಶ್ರವ್ಯೋ ವಿರಾಮೋಯತಿ ಜಯದೇವ : “ ವಿರಾಮೋ ಯತಿರಿತಿ ”

ಮಾತ್ರೆ : ಮಾತ್ರೆ ಎಂದರೆ ಕಾಲ , ಅಕ್ಷರ ಉಚ್ಚಾರಣೆಯ ಕಾಲ ಲಘು : ಸಂಕೇತ ‘U’( ಅರ್ಧಚಂದ್ರಾಕೃತಿ ). ಲಘು ಬರುವ ಸಂದರ್ಭಗಳು 3 1) ಎಲ್ಲಾ ಹ್ರಸ್ವಸ್ವರಗಳು ಲಘುಗಳಾಗುತ್ತವೆ : U U U U U U ಅ, ಇ , ಉ, ಋ, ಎ, ಒ 2) ಹ್ರಸ್ವಸ್ವರ ಸಹಿತವಾದ ವ್ಯಂಜನಗಳು ಲಘುಗಳಾಗುತ್ತವೆ . U U U U U U ಪ, ಪಿ , ಪು , ಪೃ , ಪೆ , ಪೊ

3) ಶಿಥಿಲದ್ವಿತ್ವದ ಹಿಂದಿನ ಅಕ್ಷರ ಹ್ರಸ್ವಸ್ವರದಿಂದ ಕೂಡಿದ್ದರೆ ಲಘುಗಳಾಗುತ್ತವೆ . ಶಿಥಿಲದ್ವಿತ್ವ : ಒತ್ತಕ್ಷರಗಳನ್ನು ತೇಲಿಸಿ ಉಚ್ಚರಿಸುವುದು . UU-U UU UUU UUU UU- UUU ಕುಳಿರ್ಗಾಳಿ , ಎರ್ದೆ , ಬರ್ದಿಲ , ಅಮರ್ದು , ಎರ್ದೆವಾಯ್ , ನುಸುೞ್ಗೆ ಇತ್ಯಾದಿ

ಗುರು : ಸಂಕೇತ ʼ_ʼ ( ಸಮತಲ ಋಜುರೇಖೆ ) ಗುರು ಬರುವ ಸಂದರ್ಭಗಳು : 1) ಎಲ್ಲಾ ದೀರ್ಘಸ್ವರಗಳು : ಆ, ಈ, ಊ, ಏ, ಐ, ಓ, ಔ 2) ಎಲ್ಲಾ ದೀರ್ಘಸ್ವರ ಸಹಿತ ವ್ಯಂಜನಗಳು ಚಾ , ಚೀ , ಚೂ , ಚೇ , ಚೈ , ಚೋ , ಚೌ ಇತ್ಯಾದಿ 3) ಅನುಸ್ವಾರದಿಂದ ಕೂಡಿದ ಅಕ್ಷರಗಳು ಅಂ , ಕಂ , ಅಂತರಂಗ ಇತ್ಯಾದಿ

4) ವಿಸರ್ಗದಿಂದ ಕೂಡಿದ ಅಕ್ಷರಗಳು ಅಃ , ಮಃ , ರಃ , ದುಃಖ , ಅಂತಃಕರಣ , ಚಿಃ ಸತ್ತರೇಂ ಪುಟ್ಟರೆ ಇತ್ಯಾದಿ 5) ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುವಾಗುತ್ತವೆ . ಕಲ್ಲು , ಮಣ್ಣು , ನಿಲ್ಲು , ಮೆತ್ತಗೆ ಇತ್ಯಾದಿ 6) ಷಟ್ಪದಿಯ ಮೂರು ಮತ್ತು ಆರನೇ ಪಾದದ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದೇ ಪರಿಗಣಿಸಬೇಕು .

7) ವ್ಯಂಜನಾಂತ ಅಕ್ಷರದ ಹಿಂದಿನ ಅಕ್ಷರಗಳು ಗುರುವಾಗುತ್ತವೆ . ಬಾನ್ ‌, ಅರಿಲ್ ‌, ನೇಸರ್ ‌, ಇವರ್ ‌, ಕಾಲ್ ‌, ತಿನ್ ಇತ್ಯಾದಿ 8) ಹ್ರಸ್ವಾಕ್ಷರವು ಪ್ಲುತಸ್ವರಯುಕ್ತವಾಗಿದ್ದಾಗ ಗುರುವಾಗುತ್ತದೆ . ಕುಕ್ಕೂಕೂ S ಎಂದು ಕೋೞಿ ಕೂಗಿದುವಾಗಳ್ ‌

ಒಂದು ಅಕ್ಷರ ಗುರುವಾಗಲು ಅನೇಕ ಕಾರಣಗಳಿದ್ದರೂ ಒಂದೇ ಗುರುವೆಂದು ಭಾವಿಸಬೇಕು . ಶಾಸ್ತ್ರ , ಆಕಾಂಕ್ಷೆ , ಕಂಟ್ರ್ಯಾಕ್ಟರ್ ‌ ಇತ್ಯಾದಿ

ಗಣ : ಗಣ ಎಂದರೆ ಗುಂಪು ಎಂದರ್ಥ . ಗಣಗಳಲ್ಲಿ 3 ವಿಧ . ಅವುಗಳೆಂದರೆ : 1) ಅಕ್ಷರಗಣ 2) ಅಂಶಗಣ 3) ಮಾತ್ರಾಗಣ

ಅಕ್ಷರಗಣ ಅಕ್ಷರಗಣ : ಅಕ್ಷರಗಣ ಎಂದರೆ ಅಕ್ಷರಗಳ ಗುಂಪು . ಅಕ್ಷರಗಣದಲ್ಲಿ 8 ವಿಧ ,   ಅವುಗಳೆಂದರೆ : 1) ಮಗಣ 2) ನಗಣ 3) ಭಗಣ 4) ಯಗಣ 5) ಜಗಣ 6) ರಗಣ 7) ಸಗಣ 8) ತಗಣ

ಗಣಗಳನ್ನು ಸುಲಭವಾಗಿ ನೆನಪಿಡಲು ಸೂತ್ರ : ಗುರುಲಘು ಮೂರಿರೆ ಮನಗಣ ಗುರುಲಘು ಮೊದಲಲ್ಲಿ ಬರಲು ಭಯಗಣಮೆಂಬರ್ / ಗುರುಲಘು ನಡುವಿರೆ ಜರಗಣ ಗುರುಲಘು ಕೊನೆಯಲ್ಲಿ ಬರಲು ಸತಗಣಮಕ್ಕುಂ // ( ಈಶ್ವರ ಕವಿಯ ಕವಿಜಿಹ್ವಾಬಂಧನ )

ಅಕ್ಷರಗಣಗಳನ್ನು ಸುಲಭವಾಗಿ ಗುರುತಿಸಲು ಸೂತ್ರ : ಯ ಮಾ ತಾ ರಾ ಜ ಭಾ ನ ಸ ಲ ಗಂ

ಅಕ್ಷರವೃತ್ತಗಳು ( ವರ್ಣವೃತ್ತಗಳು ) : ವೃತ್ತಗಳು : ಸಂಸ್ಕೃತ ಮೂಲದವು . ನಾಲ್ಕು ಪಾದಗಳಿಂದ ಕೂಡಿರುವ ಪದ್ಯ . ಅಕ್ಷರವೃತ್ತಗಳು ಉಕ್ತೆಯಿಂದ ( ಒಂದು ಅಕ್ಷರ ) ಉತ್ಕೃತಿ ( ಇಪ್ಪತ್ತಾರು ಅಕ್ಷರಗಳು ) ವರೆಗೆ ಒಟ್ಟು ಇಪ್ಪತ್ತಾರು ಇವೆ . ವೃತ್ತಗಳ ವಿಧಗಳು : ಸಮ , ಅರ್ಧಸಮ , ವಿಷಮ ವೃತ್ತಗಳು

ಖ್ಯಾತಕರ್ನಾಟಕ ವೃತ್ತಗಳು : ಸಂಸ್ಕೃತ ಅಕ್ಷರ ಛಂದಸ್ಸಿನಲ್ಲಿ ಇಪ್ಪತ್ತಾರು ಛಂದೋವೃತ್ತಗಳಿವೆ . ಕನ್ನಡ ಕವಿಗಳು ಬಳಸಿರುವುದು ಆರು ವೃತ್ತಗಳನ್ನು ಮಾತ್ರ . ಅವುಗಳನ್ನು ʼಖ್ಯಾತ ಕರ್ನಾಟಕʼ ವೃತ್ತಗಳೆಂದು ಕರೆಯಲಾಗಿದೆ .

ಆರು ಖ್ಯಾತ ಕರ್ನಾಟಕ ವೃತ್ತಗಳು : 1) ಉತ್ಪಲಮಾಲಾ ವೃತ್ತ 2) ಚಂಪಕಮಾಲಾ ವೃತ್ತ 3) ಶಾರ್ದೂಲ ವಿಕ್ರೀಡಿತ ವೃತ್ತ 4) ಮತ್ತೇಭವಿಕ್ರೀಡಿತ ವೃತ್ತ 5) ಸ್ರಗ್ಧರಾ ವೃತ್ತ 6) ಮಹಾಸ್ರಗ್ಧರಾ ವೃತ್ತ

ಒಂದನೆಯ ನಾಗವರ್ಮನ ಛಂದೋಂಬುಧಿಯಲ್ಲಿ ಲಕ್ಷಣಪದ್ಯ ಒಂದು ಹೀಗಿದೆ . ಗುರುವೊಂದಾದಿಯೊಳುತ್ಪಲಂ ಗುರು ಮೊದಲ್ ‌ ಮೂಱಾಗೆ ಶಾರ್ದೂಲಮಾ ಗುರು ನಾಲ್ಕಾಗಿರಲಂತು ಸ್ರಗ್ಧರೆ ಲಘುದ್ವಂದ್ವಂ ಗುರುದ್ವಂದ್ವಮಾ ಗಿರೆ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ಧರಂ ಹರಿಣಾಕ್ಷೀ ಲಘು ನಾಲ್ಕು ಚಂಪಕಮಿವಾಱುಂ ಖ್ಯಾತಕಾರ್ಣಾಟಿಕಂ //

ಚಂಪೂಕಾವ್ಯ : ಪದ್ಯ ಮತ್ತು ಗದ್ಯ ಮಿಶ್ರಿತವಾದ ಕಾವ್ಯ “ ಮುಕ್ಕಾಲು ಪಾಲು ಕಂದ ಕಾಲು ಪಾಲು ಆರು ವೃತ್ತಗಳು ”

ಖ್ಯಾತ ಕರ್ನಾಟಕ ವೃತ್ತಗಳ ಸಾಮಾನ್ಯ ಲಕ್ಷಣಗಳು : 1) 4 ಸಾಲುಗಳಿರುತ್ತವೆ 2) ಪ್ರತಿಸಾಲು ಸಮವಾಗಿರುತ್ತವೆ ( ಅಕ್ಷರ ಸಂಖ್ಯೆ ಮತ್ತು ಗಣಗಳು ) 3) ನಿಯತ ಸ್ಥಾನದಲ್ಲಿ ಯತಿ ಬರುತ್ತದೆ 4) ಆದಿಪ್ರಾಸವಿರುತ್ತದೆ 5) ಸಮವೃತ್ತಗಳು

ಉತ್ಪಲಮಾಲೆ : 20 ಅಕ್ಷರ / 11 ನೇ ಅಕ್ಷರ ಯತಿ ಸೂತ್ರ : ಉತ್ಪಲಮಾಲೆಯಪ್ಪುದು ಭರಂನಭಭಂರಲಗಂ ನೆಗೞ್ದಿರಲ್ ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ ಡುತ್ತಿರೆ ಲಂಬಣಂ ಪರಿಯೆ ಮುತ್ತಿನಕೇಡನೆ ನೋಡಿನೋಡಿ ಬ

ಚಂಪಕಮಾಲೆ : 21 ಅಕ್ಷರ / 13 ನೇ ಅಕ್ಷರಯತಿ ಸೂತ್ರ : ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್ ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನೊಂದೆಚಿತ್ತದಿಂ

ಶಾರ್ದೂಲವಿಕ್ರೀಡಿತ : 19 ಅಕ್ಷರ / 12 ನೇ ಅಕ್ಷರಯತಿ ಕಣ್ಗೊಪ್ಪಲ್ ಮಸಜಂ ಸತಂತಗಮುಮಾ ಶಾರ್ದೂಲವಿಕ್ರೀಡಿತಂ ಕಲ್ಗೋಳ್ ತೋರ್ಪುಪುಗರ್ ಸುವರ್ಣದಗುಣಂ ಕಾಷ್ಟಂಗಳೊಳ್ ತೋರ್ಪುಗರ್

ಮತ್ತೇಭವಿಕ್ರೀಡಿತ : 20 ಅಕ್ಷರ / 13 ನೇ ಅಕ್ಷರಯತಿ ಸಭರಂನಂಮಯಲಂಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ

ಸ್ರಗ್ಧರಾ ವೃತ್ತ : 21 ಅಕ್ಷರ / 7 ನೇ ಅಕ್ಷರಯತಿ ತೋರಲ್ ಮಂ ರಂಭನಂ ಮೂಯಗಣಮುಮದೆತಾಂ ಸ್ರಗ್ಧರಾ ವೃತ್ತಮಕ್ಕುಂ ಕಾರುಣ್ಯಂಗೆಯ್ದು ಸದ್ದೀಕ್ಷೆಯನೆಸಗಿಲ ಸಚ್ಚಿತ್ಕ್ರಿಯಾಮಾರ್ಗಮಂಪೇಳ್ವಾರಾಜ

ಮಹಾಸ್ರಗ್ಧರಾ ವೃತ್ತ : 22 ಅಕ್ಷರ / 15 ನೇ ಅಕ್ಷರಯತಿ ಸತತಂನಂಸಂರರಂಗಂ ನೆರೆದೆಸೆಯೆ ಮಹಾಸ್ರಗ್ಧರಾ ವೃತ್ತಮಕ್ಕುಂ ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ

ಖ್ಯಾತ ಕರ್ನಾಟಕ ವೃತ್ತಗಳು ವೃತ್ತಗಳು ಶಾ ಉ ಮತ್ತೆ ಚಂ ಸ್ರ ಮಹಾ ಅಕ್ಷರಗಳು 19 20 20 21 21 22 ಯತಿ 12 11 13 13 07 15 ಛಂದಸ್ಸು ಅತಿಧೃತಿ ಕೃತಿ ಕೃತಿ ಪ್ರಕೃತಿ ಪ್ರಕೃತಿ ಆಕೃತಿ

ಮಾತ್ರಾಗಣ : ಮಾತ್ರಾಗಣದಲ್ಲಿ ಅಕ್ಷರಗಳು ಮುಖ್ಯವಲ್ಲ . ನಿಗದಿತ ಮಾತ್ರೆಗಳು ಮುಖ್ಯ . ಲಘುವಿಗೆ ಒಂದು ಮಾತ್ರಾ ಬೆಲೆ . ಗುರುವಿಗೆ ಎರಡು ಮಾತ್ರಾ ಬೆಲೆ . ಮಾತ್ರಾಗಣದಲ್ಲಿ 3 ವಿಧಗಳಿವೆ 1) ಮೂರು ಮಾತ್ರೆಯ ಗಣ 2) ನಾಲ್ಕು ಮಾತ್ರೆಯ ಗಣ 3) ಐದು ಮಾತ್ರೆಯ ಗಣ ಆಧುನಿಕ ಛಂದಸ್ಸಿನಲ್ಲಿ ಎರಡು ಮಾತ್ರೆಯ ಗಣ ಪ್ರಯೋಗವೂ ಕಂಡುಬರುತ್ತದೆ .

1) ಮೂರು ಮಾತ್ರೆಯ ಗಣವಿನ್ಯಾಸದಲ್ಲಿ 3 ವಿಧ 1) UUU 2) -U 3) U-

2) ನಾಲ್ಕು ಮಾತ್ರೆಯ ಗಣವಿನ್ಯಾಸದಲ್ಲಿ 5 ವಿಧ 1) UUUU 2) –UU 3) UU- 4) – - 5) U-U

3) ಐದು ಮಾತ್ರೆಯ ಗಣವಿನ್ಯಾಸದಲ್ಲಿ 8 ವಿಧ 1) UUUUU 2) – UUU 3) U – UU 4) UUU – 5) – - U 6) UU – U 7) U – – 8) – U –

ಕಂದಪದ್ಯ ಸಂಸ್ಕೃತದ ಆರ್ಯಾಗೀತಿ ಎಂಬ ಛಂದೋಬಂಧ ಕಂದಪದ್ಯದ ಮೂಲ ಎನ್ನಬಹುದು . ಕಂದವೆಂಬ ಹೆಸರು ಸ್ಕಂಧಕದ ಪ್ರಾಕೃತ ರೂಪವಾದ ಖಂಧಆ > ಖಂಧ > ಕಂದ ಎಂದು ಪರಿವರ್ತನೆಯಾಗಿ ಹುಟ್ಟಿರುವುದು ಸಂಭವನೀಯ ( ಟಿ.ವಿ.ವೆಂಕಟಾಚಲಶಾಸ್ತ್ರಿ )

ಲಕ್ಷಣಗಳು : 1) ಕಂದಪದ್ಯವು ಮಾತ್ರಾಗಣಾತ್ಮಕವಾದ ಚೌಪದಿ . 2) ನಾಲ್ಕು ಸಾಲುಗಳಿದ್ದು ಒಂದು ಮತ್ತು ಮೂರನೆಯ ಸಾಲುಗಳು ಸಮವಾಗಿರುತ್ತವೆ . ಎರಡು ಮತ್ತು ನಾಲ್ಕನೆಯ ಸಾಲುಗಳು ಸಮವಾಗಿರುತ್ತವೆ . 3) ಒಂದು ಮತ್ತು ಮೂರನೆಯ ಪಾದಗಳಲ್ಲಿ ನಾಲ್ಕು ಮಾತ್ರೆಯ ಮೂರು ಗಣಗಳಿದ್ದು , ಎರಡು ಮತ್ತು ನಾಲ್ಕನೆಯ ಪಾದಗಳಲ್ಲಿ ನಾಲ್ಕು ಮಾತ್ರೆಯ ಐದು ಗಣಗಳಿರುತ್ತವೆ .

4) ಪ್ರತಿ ಪದ್ಯದ ಅರ್ಧವಾದ ಮೇಲೆ ಅಂದರೆ ಎಂಟನೆಯ ಗಣದ ಕೊನೆಗೆ ಕಡ್ಡಾಯವಾಗಿ ಗುರು ಬರಲೇಬೇಕು . 5) ಆರನೆಯ ಗಣ ಜಗಣ (U-U ) ಅಥವಾ ನಾಲ್ಕು ಲಘುಗಳ (UUUU) ಗಣವಾಗಿರಬೇಕು . 6) ವಿಷಮ ಸ್ಥಾನಗಳಲ್ಲಿ ( ಒಂದು , ಮೂರು , ಐದು , ಏಳನೆ ಗಣ ) ಜಗಣ (U-U) ಬರಕೂಡದು .

ಉಡಿದಿರ್ದ ಕಯ್ದು ನೆತ್ತರ ಕಡಲೊಳಗಡಿಗಡಿಗೆ ತಳಮನುರ್ಚುತ್ತಿರೆ ಕಾ ಲಿಡಲೆಡೆವಡೆಯದೆ ಕುರುಪತಿ ದಡಿಗವೆಣಂಗಳನೆ ಮೆಟ್ಟಿ ಮೆಲ್ಲನೆ ನಡೆದಂ

ಇತಿಹಾಸ : ಕ್ರಿ.ಶ . 7 ನೇ ಶತಮಾನದ ಸಿಂಗಣಗದ್ದೆ ಶಾಸನದಲ್ಲಿ ( ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕು - ಗಂಗ ಶ್ರೀಪುರುಷನ ಕಾಲದ್ದು ) ಕಂದಪದ್ಯದ ಪ್ರಾಚೀನ ತಾಮ್ರಶಾಸನ ಮೊದಲ ಬಾರಿಗೆ ಉಪಲಬ್ದವಾಗಿದೆ ಕನ್ನಡದಲ್ಲಿ ಕಂದಪದ್ಯದ ಲಕ್ಷಣವನ್ನು ಮೊದಲು ಹೇಳಿದವನು ಒಂದನೇ ನಾಗವರ್ಮ ( ಛಂದೋಂಬುಧಿ ) ರನ್ನ ಕವಿಯನ್ನು ʼಕಂದಪದ್ಯಪ್ರಿಯ ’ ಎನ್ನಲಾಗಿದೆ . ಹರಿಹರ : “ ಕಂದಂಗಳ್ ಅಮೃತಾಲತಿಕಾ ಕಂದಂಗಳ್ ” ( ಗಿರಿಜಾ ಕಲ್ಯಾಣ ) ಎಂದು ಹೊಗಳಿದ್ದಾನೆ

ಸುರಂಗ ಕವಿ : “ ಕಂದಂಗಳ್ ‌ ವಾಗ್ವನಿತೆಯ ಕಂದಂಗಳ್ ”‌ ( ತ್ರಿಷಷ್ಟಿಪುರಾತನರ ಚರಿತೆ ) ಎಂದಿದ್ದಾನೆ ತಿರುಮಲಾರ್ಯ : “ ಕಂದಂ ಕವಿಕೋಕಿಲ ಮಾಕಂದಂ ” “ ಕಂದಂಗಳ್ ‌ ಮಱುಕದ ಕಿಱುಗಂದಂಗಳ್ ” ( ಚಿಕದೇವರಾಜ ವಿಜಯ ) ಎಂದು ‌ ಪ್ರಶಂಸಿಸಿದ್ದಾನೆ

ಕಂದಪದ್ಯದಲ್ಲಿ ರಚನೆಯಾದ ಮೊದಲ ಕೃತಿ : ಕವಿರಾಜಮಾರ್ಗ ಕೇಶಿರಾಜನ ʼಶಬ್ದಮಣಿದರ್ಪಣʼ ಕೃತಿಯಲ್ಲಿ 347 ಕಂದಪದ್ಯಗಳಿವೆ ಜನ್ನನ ʼಯಶೋಧರ ಚರಿತೆʼಯಲ್ಲಿ ಹೆಚ್ಚು ಕಂದಪದ್ಯಗಳಿವೆ

ರಗಳೆ : ಇತಿಹಾಸ : ಪಂಪ , ಪೊನ್ನ , ರನ್ನ , ನಾಗವರ್ಮ , ದುರ್ಗಸಿಂಹ , ಶಾಂತಿನಾಥ ಮೊದಲಾದವರ ಕಾವ್ಯಗಳಲ್ಲಿ ರಗಳೆಯ ಪ್ರಭೇದಗಳನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ . ಮಟ್ಟರಗಳೆ , ಪದ್ಧಳಿ , ತ್ವರಿತ ರಗಳೆಗಳ ಮೊದಲಾದವು ಇಂತಹ ಹೆಸರುಗಳು . ರಗಳೆಯ ಪ್ರಯೋಗವಿರುವ ಮೊದಲ ಕೃತಿ : ಆದಿಪುರಾಣ ರಗಳೆಯ ಪ್ರಯೋಗವನ್ನು ಮೊದಲು ಮಾಡಿದವನು : ಪಂಪ

ʼರಗಳೆʼ ʼರಘಟಾʼ ಶಬ್ದಗಳನ್ನು ಮೊದಲ ಸಲ ಬಳಸಿದವನು ಒಂದನೆಯ ನಾಗವರ್ಮ ( ಛಂದೋಂಬುಧಿ ) ಗಣ ನಿಯಮ ವಿಪರ್ಯಾಸದೊಳ್ ಎಣೆವಡೆದು ಒಳ್ಪೆಸೆಯೆ ಮಾತ್ರೆ ಸಮನಾಗೆ ಗುಣಾ ಗ್ರಣಿಯ ಮತದಿಂದೆ ತಾಳದ ಗಣನೆಗೆ ಒಡಂಬೊಟ್ಟಡೆ ಅದುವೆ ರಘಟಾ ಬಂಧಂ

ನಾಗವರ್ಮನ ಕಿರಿಯ ಸಮಕಾಲೀನನಾದ ಜಯಕೀರ್ತಿಯೂ ತನ್ನ ಸಂಸ್ಕೃತ ʼಛಂದೋನುಶಾಸನʼದಲ್ಲಿ ರಗಳೆಯ ಲಕ್ಷಣ ತಿಳಿಸಿದ್ದಾನೆ . ಸ್ವಚ್ಛಂದಃ ಸಂಜ್ಞಾ ರಘಟಾ ಮಾತ್ರಾಕ್ಷರ ಸಮೋದಿತಾಃ ಪಾದದ್ವಂದ್ವ ಸಮಾಕೀರ್ಣಾಸುಶ್ರಾವ್ಯಾಸೈವ ಪದ್ಧತಿಃ ಗುಣಚಂದ್ರನ ಛಂದಸ್ಸಾರದಲ್ಲಿ ರಗಳೆ , ರಘಟಾ ಎರಡೂ ಮಾತು ಬಂದಿವೆ .

ರಗಳೆಯ ಲಕ್ಷಣಗಳು : ಮಾತ್ರಾಗಣಾತ್ಮಕವಾದುದು . ಸಾಲುಗಳ ಮಿತಿಯಿಲ್ಲ ( ಪ್ರಾಸದ ದೃಷ್ಠಿಯಿಂದ 2 ಸಾಲು ಪರಿಗಣನೆ ). ಪ್ರತಿಪಾದದಲ್ಲಿ ಮಾತ್ರೆಗಳು ಸಮನಾಗಿರಬೇಕು . ಅಂತ್ಯಪ್ರಾಸ ಕಡ್ಡಾಯ . ಸ್ವಚ್ಛಂದ ಛಂದಸ್ಸು

ವಿಧಗಳು : ರಗಳೆಯಲ್ಲಿ ಮೂರು ವಿಧ ಉತ್ಸಾಹ ರಗಳೆ ಮಂದಾನಿಲ ರಗಳೆ ಲಲಿತ ರಗಳೆ

ಉತ್ಸಾಹ ರಗಳೆ ಉತ್ಸಾಹ ರಗಳೆಯ ಲಕ್ಷಣಗಳು : ಮಾತ್ರಾಗಣಾತ್ಮಕವಾದುದು . ಸಾಲುಗಳ ಮಿತಿಯಿಲ್ಲ ( ಪ್ರಾಸದ ದೃಷ್ಠಿಯಿಂದ 2 ಸಾಲು ಪರಿಗಣನೆ ). ಪ್ರತಿಪಾದದಲ್ಲಿ ಮಾತ್ರೆಗಳು ಸಮನಾಗಿರುತ್ತವೆ 3 ಮಾತ್ರೆಯ 4 ಗಣಗಳು = 12 ಮಾತ್ರೆಗಳು 3 ಮಾತ್ರೆಯ 3 ಗಣಗಳು + ಒಂದು ಗುರು = 11 ಮಾತ್ರೆಗಳು ಅಂತ್ಯಪ್ರಾಸ ಕಡ್ಡಾಯವಾಗಿರುತ್ತದೆ . ಸ್ವಚ್ಛಂದ ಛಂದಸ್ಸು

ತುಂಬಿವಿಂಡಿನಂತೆ ಪಾಡಿ ಜಕ್ಕವಕ್ಕಿಯಂತೆ ಕೂಡಿ ಕುಳಿರ್ವ ಪೂಗೊಳಂಗಳಲ್ಲಿ ತಳಿರ ಕಾವಣಂಗಳಲ್ಲಿ ಮಾವಿನಡಿಯೊಳಾಡುತುಂ ಪಾಡವೆಯ್ದೆ ಕೇಳುತುಂ

ಮಂದಾನಿಲ ರಗಳೆ ಮಾತ್ರಾಗಣಾತ್ಮಕವಾದುದು . ಸಾಲುಗಳ ಮಿತಿಯಿಲ್ಲ ( ಪ್ರಾಸದ ದೃಷ್ಠಿಯಿಂದ 2 ಸಾಲು ಪರಿಗಣನೆ ). ಪ್ರತಿಪಾದದಲ್ಲಿ ಮಾತ್ರೆಗಳು ಸಮನಾಗಿರುತ್ತವೆ 4 4 4 4 = 16 ಮಾತ್ರೆಗಳು 3 5 3 5 = 16 ಮಾತ್ರೆಗಳು ಅಂತ್ಯಪ್ರಾಸ ಕಡ್ಡಾಯವಾಗಿರುತ್ತದೆ . ಸ್ವಚ್ಛಂದ ಛಂದಸ್ಸು

ಆಡುವ ಗುಂಡಯ್ಯನ ಹೊಸ ನೃತ್ಯಂ ನೋಡುವ ಶಿವನಂ ಮುಟ್ಟಿತು ಸತ್ಯಂ 4*4 = 16 ( ಹರಿಹರ – ಕುಂಬಾರ ಗುಂಡಯ್ಯನ ರಗಳೆ ) ನಂದನಂಗಳೊಳ್ ‌ ಸುಳಿವ ಬಿರಯಿಯಿಂ ಕಂಪು ಕಣ್ಮಲೆಯ ಪೂತ ಸುರಯಿಯಿಂ 3 5 3 5 = 16 ( ಪಂಪ – ವಿಕ್ರಮಾರ್ಜುನ ವಿಜಯಂ )

ಲಲಿತ ರಗಳೆ ಅಳಿಯೆರಗದನಿಲನಲುಗದ ರವಿಕರಂ ಪುಗದ ಸುಳಿಗೊಂಡು ದಳವೇಱೆ ಹಸುರಳಿದು ಬೆಳುಪುಳಿದ 5*4=20

ಸರಳ ರಗಳೆ ಇಂಗ್ಲಿಷಿನ ಬ್ಲಾಂಕ್ ವರ್ಸ್ (Blank verse) ಪದಕ್ಕೆ ಸಂವಾದಿಯಾಗಿ ಬಳಸುವ ಪದ . ಜಗತ್ಪ್ರಸಿದ್ಧ ಕಾವ್ಯ ಛಂದಸ್ಸುಗಳಲ್ಲಿ ಇದೂ ಒಂದು . ಇದು ಲಲಿತ ರಗಳೆಯ ರೂಪ . ಪ್ರಾಸರಹಿತವಾದ ರಗಳೆ . ಸ್ಮಶಾನ ಕುರುಕ್ಷೇತ್ರಂ , ಬೆರಳ್‍ಗೆ ಕೊರಳ್ , ಶೂದ್ರತಪಸ್ವಿ ( ಕುವೆಂಪುರವರ ನಾಟಕಗಳು ) ನಾಟಕಗಳಲ್ಲಿ ಸರಳ ರಗಳೆಯನ್ನು ಬಳಸಲಾಗಿದೆ . ಬಿರುಗಾಳಿ ( ಕುವೆಂಪು ) ನಾಟಕದ ಮುನ್ನುಡಿಯಲ್ಲಿ ಟಿ.ಎಸ್.ವೆಂಕಣ್ಣಯ್ಯ ಸರಳ ರಗಳೆಯನ್ನು ʼಮಹಾಛಂದಸ್ಸುʼ ಎಂದಿದ್ದಾರೆ ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ ನಿಮ್ಮ ಸಿರಿಯಡಿಗೊಪ್ಪಿಸಲ್ಕೆ ಓ ಪ್ರಿಯಗುರುವೆ . . .. . . . ಶ್ರೀ ರಾಮಾಯಣದರ್ಶನಂ .

ಲಲಿತ ರಗಳೆ , ಬ್ಲಾಂಕ್ ‌ ವರ್ಸ್ ‌ ಗಳನ್ನು ಕಸಿಮಾಡಿ ಸರಳ ರಗಳೆಯನ್ನು ಮೊದಲಿಗೆ ರೂಪಿಸಿದವರು ಮಾಸ್ತಿ . ( ಅರುಣ - ಕವನ ಸಂಕಲನದ ʼಸ್ಥಳಗಳ ಹೆಸರುʼ - ಕವಿತೆ )

ಷಟ್ಪದಿ ಷಟ್ + ಪದಿ = ಆರು ಸಾಲಿನ ಪದ್ಯ ಮೊದಲ ಷಟ್ಪದಿ ಕಾವ್ಯ : ಚಂದ್ರರಾಜನ ಮದನತಿಲಕ ಕಾಲ : ಕ್ರಿ.ಶ.1030 15-18 ಶತಮಾನ ಷಟ್ಪದಿ ಯುಗ ಷಟ್ಪದಿಯ ಮೂಲ : ಅಂಶ ಷಟ್ಪದಿ ನಂತರ ಅಂಶ ಷಟ್ಪದಿಯ ಕವಲು ಒಡೆದು ಮಾತ್ರಾ ಷಟ್ಪದಿಯಾಗಿ ಬದಲಾವಣೆ ವಿಧಗಳು : 6 (6 + 1 = 7 )      

ಒಂದನೇ ನಾಗವರ್ಮನು ತನ್ನ ಛಂದೋಂಬುಧಿಯಲ್ಲಿ ಹೇಳುವ ಕರ್ನಾಟಕ ವಿಷಯಜಾತಿಗಳಲ್ಲಿ ಷಟ್ಪದಿಯೂ ಒಂದು ಅಂಶಷಟ್ಪದಿಯ ಲಕ್ಷಣವನ್ನು ಮೊದಲು ನಿರೂಪಿಸುವುದು ಛಂದೋಂಬುಧಿ ಹೀಗೆ ಹೇಳಿದ್ದಾನೆ ಮಂದರಧರಗಣಂ ಬಂದಿರ್ಕಾಱಂತ್ಯದೊಳ್ ‌ ಕುಂದದೆ ನೆಲಸುಗೆ ಮದನಹರಂ ಇಂದು ನಿಭಾನನೆ ಮುಂದಣ ಪದ ( ನು ) ಮೀ ಯಂದಮೆ ಯಾಗ ( ಲ್ಕೆ ) ಷಟ್ಪದಿ ಕೇಳ್ ‌ ಆರು ಮಂದರಧರಗಣಗಳು ( ವಿಷ್ಣುಗಣಗಳು ) ಒಂದು ಮದನಹರ ( ರುದ್ರ ) ಗಣ

ಅಂಶಷಟ್ಪದಿ ಲಕ್ಷಣ : ವಿ ವಿ ವಿ ವಿ ವಿ ವಿ ರು ವಿ ವಿ ವಿ ವಿ ವಿ ವಿ ರು

ಮಾತ್ರಾಷಟ್ಪದಿ ಒಂದನೇ ನಾಗವರ್ಮನ ಛಂದೋಂಬುಧಿಯ ಅಧಿಕಪಾಠದಲ್ಲಿ ಬರುವ ಪದ್ಯ : ಶರಕುಸುಮ ಭೋಗ ಭಾಮಿನಿ ಪರಿವರ್ಧಿನಿ ವಾರ್ಧಿಕಗಳೆಂದಾಱು ತೆಱಂ ಕರಿ ದಶ ರವಿ ಮನು ರಾಜರ್ ‌ / ಬರೆ ವಿಂಶತಿಮಾತ್ರೆಯಿಂದೆ ಷಟ್ಪದಿ ನಡೆಗುಂ

ಮಾತ್ರಾ ಷಟ್ಪದಿಯ ಸಾಮಾನ್ಯ ಲಕ್ಷಣಗಳು : 1) 6 ಪಾದಗಳಿರುತ್ತವೆ 2) 1,2,4,5 ನೇ ಪಾದಗಳು ಸಮವಾಗಿದ್ದು , 3-6 ನೇ ಪಾದಗಳು ಸಮವಾಗಿರುತ್ತವೆ 3) ಮೂರು ಮತ್ತು ಆರನೆಯ ಪಾದಗಳು 1,2,4,5 ನೇ ಪಾದಗಳ ಒಂದೂವರೆ ಪಟ್ಟು ಇರುತ್ತವೆ 4) 3-6 ನೇ ಪಾದದ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದೇ ಭಾವಿಸಬೇಕು .

1) ಶರಷಟ್ಪದಿ : ಮೊದಲ ಸಾಲಿನಲ್ಲಿ 4 ಮಾತ್ರೆಯ ಎರಡು ಗಣಗಳಿರುತ್ತವೆ . ಈಶನ ಕರುಣೆಯ ನಾಶಿಸು ವಿನಯದಿ ದಾಸನ ಹಾಗೆಯೆ ನೀ ಮನವೇ ಕ್ಷೇಶದ ವಿಧವಿಧ ಪಾಶವ ಹರಿದು ವಿ ಲಾಸದಿ ಸತ್ಯವ ತಿಳಿ ಮನವೇ

ಶರ ಷಟ್ಪದಿಯ ಗಣವಿನ್ಯಾಸ : 4 4 4 4 4 4 4 +2 = 30 4 4 4 4 4 4 4 +2 = 30

2) ಕುಸುಮ ಷಟ್ಪದಿ : ಮೊದಲ ಸಾಲಿನಲ್ಲಿ 5 ಮಾತ್ರೆಯ ಎರಡು ಗಣಗಳಿರುತ್ತವೆ ಅವರವರ ದರುಶನಕೆ ಅವರವರ ವೇಷದಲಿ ಅವರಿವರಿಗೆಲ್ಲ ಗುರು ನೀನೊಬ್ಬನೆ ಅವರವರ ಭಾವಕ್ಕೆ ಅವರವರ ಪೂಜೆಗಂ ಅವರಿವರಿಗೆಲ್ಲ ಶಿವ ನೀನೊಬ್ಬನೆ

ಕುಸುಮ ಷಟ್ಪದಿಯ ಗಣವಿನ್ಯಾಸ : 5 5 5 5 5 5 5 + 2 = 37 5 5 5 5 5 5 5 + 2 = 37 (74)

3) ಭೋಗ ಷಟ್ಪದಿ : ಮೊದಲ ಸಾಲಿನಲ್ಲಿ ಮೂರು ಮಾತ್ರೆಯ ನಾಲ್ಕು ಗಣಗಳಿರುತ್ತವೆ ತಿರುಕನೋರ್ವನೂರ ಮುಂದೆ ಮುರುಕುಧರ್ಮಶಾಲೆಯಲ್ಲಿ ಒರಗಿರುತ್ತಲೊಂದ ಕನಸ ಕಂಡನೆಂತನೆ ಪುರದ ರಾಜ ಸತ್ತರವಗೆ ವರಕುಮಾರರಿಲ್ಲದಿರಲು ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು

ಭೋಗ ಷಟ್ಪದಿಯ ಗಣವಿನ್ಯಾಸ : 3 3 3 3 3 3 3 3 3 3 3 3 3 3 + 2 = 64 3 3 3 3 3 3 3 3 3 3 3 3 3 3 + 2 = 64 (128)

4) ಭಾಮಿನೀ ಷಟ್ಪದಿ : ಮೊದಲ ಸಾಲಿನಲ್ಲಿ 3 4 3 4 ಗಣವಿನ್ಯಾಸ ಬರುತ್ತದೆ . ಎಲ್ಲರೊಳು ಕಲಿಭೀಮನೇ ಮಿಡು ಕುಳ್ಳ ಗಂಡನು ಹಾನಿಹರಿಬಕೆ ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು ಖುಲ್ಲನಿವನುಪಟಳವನಾತಂ ಗೆಲ್ಲವನು ಹೇಳುವೆನು ಬಳಿಕವ ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ

ಭಾಮಿನೀ ಷಟ್ಪದಿಯ ಗಣವಿನ್ಯಾಸ : 3 4 3 4 3 4 3 4 3 4 3 4 3 4 + 2 =51 3 4 3 4 3 4 3 4 3 4 3 4 3 4 + 2 =51 (102)

5) ಪರಿವರ್ಧಿನೀ ಷಟ್ಪದಿ : ಮೊದಲ ಸಾಲಿನಲ್ಲಿ ನಾಲ್ಕು ಮಾತ್ರೆಯ ನಾಲ್ಕು ಗಣಗಳು ಬರುತ್ತವೆ . ದುರಿತವನಂ ಬೆಳೆವುದಕೆ ಪೊಲಂಕೊಲೆ ಪರಿಕಲಿಸಿದನವದೋಹಳಮನೃತಂ ಪರಿಕಾಲುದಕಮದಕೆ ಕಳವನ್ಯಸ್ತ್ರೀಸಂಗಮೆಗೆಯ್ಮೆ

4 4 4 4 4 4 4 4 4 4 4 4 4 4 + 2 = 58 4 4 4 4 4 4 4 4 4 4 4 4 4 4 + 2 = 58 ( 116 )

6) ವಾರ್ಧಕ ಷಟ್ಪದಿ : ಮೊದಲ ಸಾಲಿನಲ್ಲಿ ಐದು ಮಾತ್ರೆಯ ನಾಲ್ಕು ಗಣಗಳು ಬರುತ್ತವೆ . ಬಿಸುಡದಿರು ಬಿಸುಡದಿರು ಬೇಡಬೇಡಕಟಕಟ ಹಸುಳೆನೊಂದಹನೆಂದು ಬೀಳ್ವವನನೆತ್ತಿ ತ ಕ್ಕಿಸಿಕೊಂಡು ಕುಲವನೋಡದೆ ಬೇಡಿಕೊಂಬೆನಿವನೆನ್ನ ಮಗನಲ್ಲ ನಿನ್ನ ಶಿಶುವಿನೋಪಾದಿ ಸುಡಲನುಮತವನಿತ್ತು ಕರು ಣಿಸು ಕರುಣೆಯೆಂದೊಡಲೆ ಮರುಳೆ ಹೆಣನುಟ್ಟುದಂ ಮಸಣವಾಡಗೆಯ ಹಾಗವನು ಕೊಟ್ಟಲ್ಲದೇನೆಂದಡಂ ಬಿಡೆನೆಂದನು

ವಾರ್ಧಕ ಷಟ್ಪದಿಯ ಗಣವಿನ್ಯಾಸ : 5 5 5 5 5 5 5 5 5 5 5 5 5 5 + 2 = 72 5 5 5 5 5 5 5 5 5 5 5 5 5 5 + 2 = 72 ಒಟ್ಟು ಮಾತ್ರೆಗಳು = 154

7) ಉದ್ದಂಡ ಷಟ್ಪದಿ : ಮೊದಲ ಸಾಲಿನಲ್ಲಿ ನಾಲ್ಕು ಮಾತ್ರೆಯ ಐದು ಗಣಗಳು ಬರುತ್ತವೆ   ಪರಿಣಾಮದಕಣಿ ಶಾಂತಿಯ ನಿಧಿ ಭಕ್ತಿಯ ಸಾ ಗರಮೇಕೋನಿಷ್ಠೆಯ ಹರನತಿಸಾಮರ್ಥ್ಯದ ತರನೀತಿಯಕಡಲುದಯಾಸಾಗರ ಪುಣ್ಯದ ಪುಂಜ್ಯುಂಸತ್ಯದಸದನಂ

ಉದ್ದಂಡ ಷಟ್ಪದಿಯ ಗಣವಿನ್ಯಾಸ : 4 4 4 4 4 4 4 4 4 4 4 4 4 4 4 4 4 4 =72 4 4 4 4 4 4 4 4 4 4 4 4 4 4 4 4 4 4 =72 ಒಟ್ಟು ಮಾತ್ರೆಗಳು 144

ಕ್ರ ಸಂ ಷಟ್ಪದಿಯ ಹೆಸರು ಮೊದಲ ಸಾಲಿನ ಗಣವಿನ್ಯಾಸ ಮೂರು ಮತ್ತು ಆರನೇ ಸಾಲಿನ ಗಣವಿನ್ಯಾಶ ಪೂರ್ವಾರ್ಧದಲ್ಲಿ ಮಾತ್ರೆಗಳ ಸಂಖ್ಯೆ ಒಟ್ಟು ಮಾತ್ರೆಗಳ ಸಂಖ್ಯೆ 1 ಶರ 4 4 4 4 4 + 2 30 60 2 ಕುಸುಮ 5 5 5 5 5 + 2 37 74 3 ಭೋಗ 3 3 3 3 3 3 3 3 3 3 +2 44 88 4 ಭಾಮಿನಿ 3 4 3 4 3 4 3 4 3 4 + 2 51 102 5 ಪರಿವರ್ಧಿನಿ 4 4 4 4 4 4 4 4 4 4 + 2 58 116 6 ವಾರ್ಧಕ 5 5 5 5 5 5 5 5 5 5 + 2 72 144 7 ಉದ್ದಂಡ 4 4 4 4 4 4 4 4 4 4 4 4 4 72 144

ಷಟ್ಪದಿಯ ಹಿನ್ನೆಲೆ ಮತ್ತು ಪ್ರಮುಖ ಕೃತಿಗಳು : ಮೊದಲ ಉಲ್ಲೇಖ : ಷಟ್ಪದಿಯ ಮೊದಲ ಉಲ್ಲೇಖ ಒಂದನೇ ನಾಗವರ್ಮನ ಛಂದೋಂಬುಧಿಯಲ್ಲಿ ದೊರೆಯುತ್ತದೆ ಮೊದಲ ಷಟ್ಪದಿ ಕಾವ್ಯ : ಚಂದ್ರರಾಜನ - ಮದನತಿಲಕ 13 ನೇ ಶತಮಾನವನ್ನು ಷಟ್ಪದಿಯ ವಿಕಾಸ ಕಾಲ ಎನ್ನುತ್ತೇವೆ ರಾಘವಾಂಕ ( ಕಾಲ ಕ್ರಿ.ಶ.1225) ನನ್ನು ʼಷಟ್ಪದಿಗಳ ಬ್ರಹ್ಮʼ ಎಂದು ಕರೆಯಲಾಗಿದೆ

ವಾರ್ಧಕ ಷಟ್ಪದಿಯನ್ನು ಷಟ್ಪದಿಗಳ ರಾಜ ಎಂದು ಕರೆಯುತ್ತಾರೆ ಭಾಮಿನೀ ಷಟ್ಪದಿಯನ್ನು ಷಟ್ಪದಿಗಳ ರಾಣಿ ಎಂದು ಕರೆಯುತ್ತಾರೆ

ಭಾಮಿನೀ ಷಟ್ಪದಿ : ಭೀಮಕವಿಯ ಬಸವಪುರಾಣವೇ ಭಾಮಿನೀ ಷಟ್ಪದಿಯ ಮೊದಲ ಕಾವ್ಯ 1) ಗದುಗಿನ ಭಾರತ - ನಾರಣಪ್ಪ 2) ಪ್ರಭುಲಿಂಗಲೀಲೆ -– ಚಾಮರಸ 3) ರಾಮಧಾನ್ಯಚರಿತೆ , ನಳಚರಿತೆ , ಹರಿಭಕ್ತಿಸಾರ –- ಕನಕದಾಸ 4) ಜ್ಞಾನಸಿಂಧು -– ಚಿದಾನಂದವಧೂತ 5) ಅನುಭವಾಮೃತ – ಮಹಲಿಂಗರಂಗ 6) ಕನ್ನಡ ಭಾಗವತ –- ಚಾಟು ವಿಠಲನಾಥ

ವಾರ್ಧಕ ಷಟ್ಪದಿಯ ಕೃತಿಗಳು : 1) ಹರಿಶ್ಚಂದ್ರಚಾರಿತ್ರ್ಯ , ಸೋಮನಾಥಚಾರಿತ್ರ್ಯ , ಸಿದ್ಧರಾಮ ಚಾರಿತ್ರ್ಯ - – ರಾಘವಾಂಕ 2) ಜೈಮಿನಿ ಭಾರತ - ಲಕ್ಷ್ಮೀಶ 3) ಚೆನ್ನಬಸವಪುರಾಣ –- ವಿರೂಪಾಕ್ಷ ಪಂಡಿತ 4) ರಾಮಪಟ್ಟಾಭಿಷೇಕ – - ಮುದ್ದಣ ( ನಂದಳಿಕೆ ಲಕ್ಷ್ಮೀನಾರಾಯಣ ) 5) ಶಿವತತ್ತ್ವ ಚಿಂತಾಮಣಿ - ಲಕ್ಕಣ್ಣದಂಡೇಶ 6) ಭಾವಚಿಂತಾರತ್ನ -– ಗುಬ್ಬಿಯ ಮಲ್ಲಣಾರ್ಯ  

ಕುಮುದೇಂದು ( 1275 ) : ಕುಮುದೇಂದು ರಾಮಾಯಣ – ಎಲ್ಲಾ ಜಾತಿಯ ಷಟ್ಪದಿ . ದೇಪರಾಜ ( ದೇವರಾಜ ) ಅಮರುಕಶತಕ – ಪರಿವರ್ಧಿನಿ ಷಟ್ಪದಿಯಲ್ಲಿದೆ .

1) ʼಷಟ್ಪದಿʼಯಲ್ಲಿ ಎಷ್ಟು ವಿಧ ? 8 4 6 10

2) ಇವುಗಳಲ್ಲಿ ʼವಾರ್ಧಕಷಟ್ಪದಿʼ ಕಾವ್ಯ ಯಾವುದು ? ಯಶೋಧರ ಚರಿತ್ರೆ ಗಿರಿಜಾ ಕಲ್ಯಾಣ ಹರಿಶ್ಚಂದ್ರ ಕಾವ್ಯ ಪ್ರಭುಲಿಂಗ ಲೀಲೆ

SDA 2008 3) ಕುಮಾರವ್ಯಾಸ ಭಾರತದ ಛಂದಸ್ಸು ಚಂಪೂ ವಾರ್ಧಕ ಷಟ್ಪದಿ ಭೋಗ ಷಟ್ಪದಿ ಭಾಮಿನಿ ಷಟ್ಪದಿ

4) ಪ್ರಭುಲಿಂಗಲೀಲೆ ಕಾವ್ಯದ ಛಂದಸ್ಸು ಷಟ್ಪದಿ ರಗಳೆ ಸಾಂಗತ್ಯ ಚಂಪೂ

FDA 2018 ( 282) 5) ʼಬೆಳ್ಳಿ ಮೋಡವೆ ಎಲ್ಲಿ ಓಡುವೆ ನನ್ನ ಬಳಿಗೇ ನಲಿದು ಬಾʼ ಇದರ ಲಯ ಮಂದಾನಿಲ ಭಾಮಿನಿ ಲಲಿತ ವಾರ್ಧಕ

6) ವಾರ್ಧಕ ಷಟ್ಪದಿಯ 3 ಮತ್ತು 6 ನೇ ಸಾಲಿನಲ್ಲಿರುವ ಮಾತ್ರೆಗಳ ಒಟ್ಟು ಸಂಖ್ಯೆ ಎಷ್ಟು ? 28 30 32 34

7) ಭಾಮಿನಿ ಷಟ್ಪದಿಯ ಕಿರಿಯ ಸಾಲುಗಳ ಮಾತ್ರಾರಚನೆ ಹೀಗೆ 3+3+3+3 3+4+3+4 4+3+4+3 3+5+3+5 103

8) ವಾರ್ಧಕ ಷಟ್ಪದಿಯ ಲಕ್ಷಣವಿದು 4:4:4:4 6:6:6:6 5:5:5:5 3:4:3:4 104

9) ʼಜೈಮಿನಿ ಭಾರತʼವು ಈ ಷಟ್ಪದಿಯಲ್ಲಿ ರಚಿತವಾಗಿದೆ ಪರಿವರ್ಧಿನಿ ಭೋಗ ಭಾಮಿನಿ ವಾರ್ಧಕ 105

ಅಂಶಗಣ / ಅಂಶಛಂದಸ್ಸು ಅಂಶಗಳು : ಮೂಲಾಂಶ : ಒಂದು ಗುರು / ಎರಡು ಲಘು ಒಂದು ಗುರು ಅಥವಾ ಎರಡು ಲಘುಗಳ ನಂತರ ಬರುವ ಒಂದು ಲಘುವಾಗಲೀ ಒಂದು ಗುರುವಾಗಲೀ ಒಂದೊಂದು ಅಂಶಗಳು

ನಯನ ಕನ್ನಡ ರಾಜ್ಯೋತ್ಸವ ವೈಯಾಕರಣ ರಾಸಾಯನಿಕ ಶಬ್ದ ವೇಷಾಂತರ

ಅಂಶಗಣದಲ್ಲಿ ಮೂರು ವಿಧ : ಬ್ರಹ್ಮಗಣ ವಿಷ್ಣುಗಣ ರುದ್ರಗಣ 1) ಬ್ರಹ್ಮಗಣ - ಎರಡು ಅಂಶ - ನಾಲ್ಕು ವಿನ್ಯಾಸ 1) - - 2) UU - 3) – U 4) UUU

2) ವಿಷ್ಣುಗಣ - ಮೂರು ಅಂಶ – ಎಂಟು ರೀತಿ ( ಹೆಚ್ಚು ಬಳಕೆಯಾಗಿರುವ ಅಂಶಗಣ ) 1) - - - 2) UU - - 3) – U – 4) UUU - 5) - - U 6) UU – U 7) – UU 8) UUUU

3) ರುದ್ರಗಣ - ನಾಲ್ಕು ಅಂಶ – ಹದಿನಾರು ರೀತಿ 1) - - - - 2) UU - - - 3) – U - - 4) UUU — - 5) – U - U 6) UU – U - 7) – UU - 8) UUUU -

9) - - - U 10) UU — - U 11) – U - U 12) UUU - U 13) – – UU 14) UU - UU 15) – UUU 16) UUUUU

ತ್ರಿಪದಿ : ಕನ್ನಡ ದೇಸೀಯ ಛಂದಸ್ಸುಗಳಲ್ಲಿ ತ್ರಿಪದಿ ಅತ್ಯಂತ ಪ್ರಸಿದ್ಧವಾದುದು . ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು . ಒಂದನೇ ನಾಗವರ್ಮ ತನ್ನ ಛಂದೋಂಬುಧಿಯಲ್ಲಿ ತ್ರಿಪದಿಯಲ್ಲಿಯೇ ತ್ರಿಪದಿಯ ಲಕ್ಷಣ ಹೇಳಿದ್ದಾನೆ . ಬಿಸುರುಹೋದ್ಭವಗಣಂ ರಸದಶಸ್ಥಾನದೊಳ್ ಬಿಸುರುಹ ನೇತ್ರಗಣಮೆ ಬರ್ಕುಳಿದವು ಬಿಸುರುಹ ನೇತ್ರೇ ತ್ರಿಪದಿಗೆ

ತ್ರಿಪದಿಯ ಗಣವಿನ್ಯಾಸ : ವಿ ವಿ ವಿ ವಿ ವಿ ಬ್ರ ವಿ ವಿ ವಿ ಬ್ರ ವಿ

ಲಕ್ಷಣಗಳು : 1) ಅಂಶಗಣಾತ್ಮಕವಾದುದು ಮೂರು ಸಾಲುಗಳಿರುತ್ತವೆ ಒಟ್ಟು 11 ಗಣಗಳು 4) ಆರು ಮತ್ತು ಹತ್ತನೇ ಸ್ಥಾನದಲ್ಲಿ ಬ್ರಹ್ಮಗಣ ಉಳಿದವು ವಿಷ್ಣುಗಣಗಳು 5) ಆದಿಪ್ರಾಸವಿರುತ್ತದೆ 6) ಗಣಪರಿವರ್ತನೆ ಬರುತ್ತದೆ ಅಂದರೆ ವಿಷ್ಣುಗಣದ ಸ್ಥಾನದಲ್ಲಿ ರುದ್ರಗಣವೋ ಅಥವಾ ಬ್ರಹ್ಮಗಣವೋ ಬ್ರಹ್ಮಗಣದ ಸ್ಥಾನದಲ್ಲಿ ವಿಷ್ಣುಗಣವೋ ಬರಬಹುದು .

ಸಾಧುಗೆ ಸಾಧು ಮಾಧುರ್ಯ್ಯನ್ಗೆ ಮಾಧೂರ್ಯ್ಯಂ ಬಾಧಿಪ್ಪ ಕಲಿಗೆ ಕಲಿಯುಗವಿಪರೀತ ನ್ಮಾಧವನೀತನ್ಪೆಱನಲ್ಲ ( ಕಪ್ಪೆ ಅರಭಟ್ಟನ ಬಾದಾಮಿ ಶಾಸನ – ಕಾಲ – ಕ್ರಿ.ಶ.7 ನೇ ಶತಮಾನ )

ತ್ರಿಪದಿಯ ವಿಧಗಳು : 1) ಚಿತ್ರ ತ್ರಿಪದಿ ( ಕೊನೆಯ ಗಣ ವಿಷ್ಣುಗಣ ) 2) ವಿಚಿತ್ರ ( ಕೊನೆಯ ಗಣ ರುದ್ರಗಣ )

ಅಡಗಿಯ ಮನಿಯಾಗ ಮಡದಿಯ ಸುಳಿವಿಲ್ಲ ಅಡಗಿ ಬಾಯೀಗಿ ರುಚಿಯಿಲ್ಲ / ಹಡೆದವ್ವ ಮಡದಿ ತವರಿಗೆ ಹೋಗ್ಯಾಳ ( ಚಿತ್ರ ತ್ರಿಪದಿ )

ಹಾದಿಯ ಮನೆಯೋಳೆ ಪಾದದುಂಗುರದೋಳೆ ಗೋದಿಯ ಸೀರೆ ನೆರಿಯೋಳೆ ಸರಸಾತಿ ಬೋದಿಸಮ್ಮಯ್ಯ ಸವಿನುಡಿಯ ( ವಿಚಿತ್ರ ತ್ರಿಪದಿ )

ಮಾತ್ರಾ ತ್ರಿಪದಿ : ಅಂಶಗಣಾತ್ಮಕವಾಗಿದ್ದ ತ್ರಿಪದಿಯು ಕಾಲಾನಂತರದಲ್ಲಿ ಮಾತ್ರಾತ್ರಿಪದಿಯಾಗಿ ಪರಿವರ್ತನೆಯಾಯಿತು . ಸರ್ವಜ್ಞನನ್ನು “ ತ್ರಿಪದಿಯ ಬ್ರಹ್ಮ ” ಎನ್ನುವರು . ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲುಮುರಿದಂತೆ ಸರ್ವಜ್ಞ

ಮಾತ್ರಾತ್ರಿಪದಿಯ ಗಣವಿನ್ಯಾಸ : 5 5 5 5 5 3 5 5 5 3 5

ಇತಿಹಾಸ : ಕನ್ನಡದ ಮೊದಲ ತ್ರಿಪದಿ ಶಾಸನ ಬಾದಾಮಿ ಶಾಸನ ಆದಿಪುರಾಣ , ಶಾಂತಿಪುರಾಣ ಕೃತಿಗಳಲ್ಲಿ ತ್ರಿಪದಿಗಳಿವೆ ಸರ್ವಜ್ಞನನ್ನು ʼತ್ರಿಪದಿಯ ಬ್ರಹ್ಮʼ ಎಂದು ಕರೆಯಲಾಗಿದೆ ದ.ರಾ.ಬೇಂದ್ರೆ : ತ್ರಿಪದಿಯನ್ನು ʼಜಾನಪದ ವೃತ್ತಗಳ ಗಾಯತ್ರಿʼ ಎಂದಿದ್ದಾರೆ ಡಿ.ಎಸ್ .‌ ಕರ್ಕಿ : ತ್ರಿಪದಿಯನ್ನು ʼಕನ್ನಡ ಛಂದಸ್ಸಿನ ಗಂಗೋತ್ರಿʼ ಎಂದಿದ್ದಾರೆ ಬಿಎಂಶ್ರೀ : ತ್ರಿಪದಿಯನ್ನು ʼಜಾನಪದ ಜಾಹ್ನವಿʼ ಎಂದಿದ್ದಾರೆ

ಪ್ರಮುಖ ತ್ರಿಪದಿಯ ಕೃತಿಗಳು : ತ್ರಿಪದಿಯ ಮೊದಲ ಕೃತಿ : ಅಕ್ಕಮಹಾದೇವಿಯ ಯೋಗಾಂಗತ್ರಿವಿಧಿ (12 ನೇ ಶತಮಾನ ) 2) ನಿಜಗುಣಶಿವಯೋಗಿ : ಕೈವಲ್ಯ ವಚನಗಳು 3) ಪರಂಜ್ಯೋತಿಯತಿ : ಅನುಭವಮುಕುರ ( 995 - ತ್ರಿಪದಿಗಳು ) ಜಯದೇವಿ ತಾಯಿ ಲಿಗಾಡೆ - ಶ್ರೀ ಸಿದ್ಧರಾಮೇಶ್ವರ ಪುರಾಣ ( 4100 - ತ್ರಿಪದಿಗಳು ) ಎಸ್.ವಿ.ಪರಮೇಶ್ವರಭಟ್ಟ - ಸುರಗಿ ಸುರಹೊನ್ನೆ ( 700- ತ್ರಿಪದಿಗಳು )

ಸಾಂಗತ್ಯ : ಲಕ್ಷಣಗಳು : 1) ಅಂಶಗಣಾತ್ಮಕವಾದುದು 2) ನಾಲ್ಕು ಸಾಲುಗಳಿದ್ದು ಒಂದು ಮತ್ತು ಮೂರನೇ ಸಾಲುಗಳು ಎರಡು ಮತ್ತು ನಾಲ್ಕನೇ ಸಾಲುಗಳು ಸಮವಾಗಿರುತ್ತವೆ . 3) ಒಟ್ಟು ಹದಿನಾಲ್ಕು ಗಣಗಳಿರುತ್ತವೆ 4) 7 -14 ನೇ ಗಣಗಳು ಬ್ರಹ್ಮಗಣಗಳು ಉಳಿದುವು ವಿಷ್ಣುಗಣಗಳು 5) ಆದಿಪ್ರಾಸವಿರುತ್ತದೆ

ಪರಮ ಪರಂಜ್ಯೋತಿ ಕೋಟಿ ಚಂದ್ರಾದಿತ್ಯ ಕಿರಣ ಸುಜ್ಞಾನ ಪ್ರಕಾಶ ಸುರರ ಮಕುಟ ಮಣಿರಂಜಿತ ಚರಣಾಬ್ಜ ಶರಣಾಗು ಪ್ರಥಮ ಜಿನೇಶ ( ಭರತೇಶ ವೈಭವ - ರತ್ನಾಕರವರ್ಣಿ )

ವಿ ವಿ ವಿ ವಿ ವಿ ವಿ ಬ್ರ ವಿ ವಿ ವಿ ವಿ ವಿ ವಿ ಬ್ರ

ನಾಲ್ಕು ಸಾಲುಗಳ ಚೌಪದಿ ಅಚ್ಚಗನ್ನಡ ಛಂದಸ್ಸು ಕರ್ನಾಟಕ ವಿಷಯಜಾತಿಗಳಲ್ಲಿ ಪ್ರಸಿದ್ಧವಾದುದು ಮೊದಲಿನಿಂದಲೂ ಅಂಶಗಣಾತ್ಮಕವಾಗಿಯೇ ಉಳಿದ ಛಂದಸ್ಸು ಹದಿನಾರನೆಯ ಶತಮಾನ ಸಾಂಗತ್ಯದ ಉಚ್ಛ್ರಾಯದ ಕಾಲ

ಇತಿಹಾಸ : ಮೊದಲ ಸಾಂಗತ್ಯ ಕೃತಿ : ದೇಪರಾಜನ ʼಸೊಬಗಿನ ಸೋನೆʼ ( ಕಾಲ . ಸು.ಕ್ರಿ.ಶ 1265 )

ಸಾಂಗತ್ಯ ಕೃತಿಗಳು : 1) ಮೊದಲ ಕೃತಿ : ದೇಪರಾಜನ ʼಸೊಬಗಿನ ಸೋನೆʼ (1265 ) 2) ಭರತೇಶ ವೈಭವ - ರತ್ನಾಕರವರ್ಣಿ 3) ಮೋಹನ ತರಂಗಿಣಿ – ಕನಕದಾಸ 4) ರಾಮನಾಥ ಚರಿತೆ ( ಕುಮಾರರಾಮನಸಾಂಗತ್ಯ ) - ನಂಜುಂಡ ಕವಿ 5) ತ್ರಿಪುರದಹನ ಸಾಂಗತ್ಯ : ಶಿಶುಮಾಯಣ 6) ಹದಿಬದೆಯ ಧರ್ಮ : ಸಂಚಿಯ ಹೊನ್ನಮ್ಮ 7) ಇಂದ್ರಚಾಪ , ಚಂದ್ರವೀಥಿ – ಎಸ್ ‌ ವಿ ಪರಮೇಶ್ವರಭಟ್ಟ

ಅಂಶಷಟ್ಪದಿ : ಒಂದನೇ ನಾಗವರ್ಮನು ತನ್ನ ಛಂದೋಂಬುಧಿಯಲ್ಲಿ ಹೇಳುವ ಕರ್ನಾಟಕ ವಿಷಯಜಾತಿಗಳಲ್ಲಿ ಷಟ್ಪದಿಯೂ ಒಂದು ಅಂಶಷಟ್ಪದಿಯ ಲಕ್ಷಣವನ್ನು ಮೊದಲು ನಿರೂಪಿಸುವುದು ಛಂದೋಂಬುಧಿ . ಅದರಲ್ಲಿ ನಾಗವರ್ಮನು ಹೀಗೆ ಹೇಳಿದ್ದಾನೆ .

ಮಂದರಧರಗಣಂ ಬಂದಿರ್ಕಾಱಂತ್ಯದೊಳ್ ‌ ಕುಂದದೆ ನೆಲಸುಗೆ ಮದನಹರಂ ಇಂದು ನಿಭಾನನೆ ಮುಂದಣ ಪದ ( ನು ) ಮೀ ಯಂದಮೆ ಯಾಗ ( ಲ್ಕೆ ) ಷಟ್ಪದಿ ಕೇಳ್ ‌ ಆರು ಮಂದರಧರಗಣಗಳು ( ವಿಷ್ಣುಗಣಗಳು ) ಒಂದು ಮದನಹರ ( ರುದ್ರ ) ಗಣ

ಅಂಶಷಟ್ಪದಿ ಲಕ್ಷಣ : ವಿ ವಿ ವಿ ವಿ ವಿ ವಿ ರು ವಿ ವಿ ವಿ ವಿ ವಿ ವಿ ರು

ಲಕ್ಷಣಗಳು : ಅಂಶಗಣಾತ್ಮಕವಾದುದು ಆರು ಸಾಲುಗಳಿದ್ದು 1,2,4,5 ನೇ ಪಾದಗಳು ಸಮವಾಗಿದ್ದು , ಪ್ರತಿಸಾಲಿನಲ್ಲಿ ತಲಾ ಎರಡು ವಿಷ್ಣುಗಣಗಳಿರುತ್ತವೆ 3 ಮತ್ತು 6ನೆಯ ಪಾದಗಳು ಸಮವಾಗಿದ್ದು , ಪ್ರತಿಸಾಲಿನಲ್ಲಿ ತಲಾ ಎರಡು ವಿಷ್ಣುಗಣಗಳು ಮತ್ತು ಕೊನೆಯಲ್ಲಿ ಒಂದು ರುದ್ರಗಣವಿರುತ್ತದೆ ಆದಿಪ್ರಾಸವಿರುತ್ತದೆ . ಒಟ್ಟು 12 ವಿಷ್ಣುಗಣಗಳು 2 ರುದ್ರಗಣಗಳಿರುತ್ತವೆ .

ಅದು ಪರಮಾಸ್ಪದ ಮದು ಪುಣ್ಯಸಂಪದ ಮದು ಮಹಾಭ್ಯುದಯವಿಲಾಸಾವಾಸಂ ಅದು ದಿಬ್ಯಮದು ಸೇಬ್ಯ ಮದು ಸೌಮ್ಯಮದು ರಮ್ಯ ಮದು ಸುಖಾಧಾರಸಂಸಾರಸಾರಂ

ಏಳೆ : ಏಳೆಯ ಲಕ್ಷಣವನ್ನು ಮೊದಲು ವಿವರಿಸಿರುವುದು ಛಂದೋಂಬುಧಿಯಲ್ಲಿ . ಹೊಸಗನ್ನಡದಲ್ಲಿ ಇದನ್ನು ಮೊದಲು ಬಳಸಿದವರು ಬಿ ಎಂ ಶ್ರೀಕಂಠಯ್ಯ ( ಬಿ.ಎಂ.ಶ್ರೀ . ) ಲಕ್ಷಣಗಳು : ಅಂಶಗಣಾತ್ಮಕವಾದುದು ಏಳು ಗಣಗಳ ಅತೀ ಚಿಕ್ಕ ಛಂದಸ್ಸು ಇದು ಒಂದು ದ್ವಿಪದಿ ಆರನೆಯ ಗಣ ಬ್ರಹ್ಮಗಣ ಉಳಿದವು ವಿಷ್ಣುಗಣಗಳು

ಸುಬ್ಬಿ ಮೈ ನೆರೆದಾಳ ಸುಬ್ಬಿಗೇನೊಯ್ಯಾಲೆ ಕೊಬ್ಬರಿ ಕಾರ ತಿಳಿದುಪ್ಪ   ಗಣವಿನ್ಯಾಸ : ವಿ ವಿ ವಿ ವಿ ವಿ ಬ್ರ ವಿ ಏಳೆಯ ಕೃತಿಗಳು : ಎಸ್ ‌ ವಿ ಪರಮೇಶ್ವರಭಟ್ಟ – ತುಂಬೆಹೂವು

ಅಕ್ಕರ : ನಾಗವರ್ಮ ಹೇಳುವ 10 ಕರ್ನಾಟಕ ವಿಷಯಜಾತಿಗಳಲ್ಲಿ ಇದೂ ಒಂದು . ತ್ರಿಪದಿಯ ನಂತರ ಪ್ರಾಚೀನ ಛಂದೋರೂಪ 5 ವಿಧಗಳು : 1) ಪಿರಿಯಕ್ಕರ 2) ದೊರೆಯಕ್ಕರ 3) ನಡುವಣಕ್ಕರ 4) ಎಡೆಯಕ್ಕರ 5) ಕಿರಿಯಕ್ಕರ

ಅಕ್ಕರಗಳ ಲಕ್ಷಣವನ್ನು ಮೊದಲು ವಿವರಿಸಿರುವ ಕೃತಿ : ನಾಗವರ್ಮನ ʼಛಂದೋಂಬುಧಿʼ . ಸಾಮಾನ್ಯ ಲಕ್ಷಣಗಳು : ಅಂಶಗಣಾತ್ಮಕವಾದುವು ನಾಲ್ಕು ಸಾಲುಗಳಿರುತ್ತವೆ ಪ್ರತಿಸಾಲಿನಲ್ಲಿ ನಿರ್ದಿಷ್ಟ ಗಣಗಳಿರುತ್ತವೆ ಆದಿಪ್ರಾಸವಿರುತ್ತದೆ

ಅಕ್ಕರದ ವಿಧಗಳು : ಕ್ರ ಸಂ ಅಕ್ಕರದ ವಿಧ ಗಣವಿನ್ಯಾಸ ಪ್ರತಿ ಸಾಲಿನ ಗಣಗಳ ಸಂಖ್ಯೆ 1 ಪಿರಿಯಕ್ಕರ ಬ್ರ ವಿ ವಿ ವಿ ವಿ ವಿ ರು 7 2 ದೊರೆಯಕ್ಕರ ವಿ ವಿ ಬ್ರ ವಿ ವಿ ಬ್ರ 6 3 ನಡುವಣಕ್ಕರ ಬ್ರ ವಿ ವಿ ವಿ ರು 5 4 ಎಡೆಯಕ್ಕರ ಬ್ರ ವಿ ವಿ ರು 4 5 ಕಿಱಿಯಕ್ಕರ ವಿ ವಿ ಬ್ರ 3

ವಡಿ : ಪದ್ಯದ ಪಾದದ ಮೊದಲ ಅಕ್ಷರ ಯತಿಯ ನಂತರ ಆವೃತ್ತಿಗೊಂಡರೆ ಅದನ್ನು ವಡಿ ಎನ್ನುತ್ತಾರೆ . ಆ ಡಿ ಬಾ ಎನ ಕಂದ / ಅಂ ಗಾಲ ತೊಳೆದೇನು ತೆಂ ಗೀನ ಕಾಯಿ ತಿಳಿನೀರ / ತ ಕ್ಕೊಂಡು ಭಂಗರಾ ಮಾರಿ ತೊಳೆದೇನ

ವಡಿಯ ಪ್ರಸ್ತಾಪ ಬರುವ ಮೊದಲ ಕೃತಿ : ಈಶ್ವರ ಕವಿಯ ಕವಿಜಿಹ್ವಾಬಂಧನ ವಡಿಯನ್ನು ಕುರಿತು ಮೊದಲು ಹೇಳಿದವನು : ಈಶ್ವರ ಕವಿ ಇದು ತೆಲುಗು ಭಾಷೆಗೆ ಸಂಬಂಧಿಸಿದ್ದು .

ಹೊಸಗನ್ನಡ ಛಂದಸ್ಸು : ಹೊಸಗನ್ನಡ ಛಂದಸ್ಸಿನ ಮಟ್ಟುಗಳನ್ನು ಮೊದಲು ಪ್ರಯೋಗಿಸಿದವರು : ಬಿ.ಎಂ.ಶ್ರೀಕಂಠಯ್ಯ ಕೃತಿ : ಇಂಗ್ಲಿಷ್ ‌ ಗೀತಗಳು ( 1921) ಇಂಗ್ಲಿಷ್ ‌ ಕವಿತೆಗಳ ಕನ್ನಡ ಅನುವಾದ ಪದ್ಯಗಳು ಸ್ವತಂತ್ರ ಕವಿತೆ : ಕಾಣಿಕೆ

ಸಾನೆಟ್ ‌ : 14 ಸಾಲಿನ ಪದ್ಯ ಸಾನೆಟ್ ‌ ಎಂಬ ಪದ sonare ಎಂಬ ಪದದಿಂದ ನಿಷ್ಪನ್ನವಾಗಿದೆ . Sonare ಎಂದರೆ ಸಣ್ಣಹಾಡು . ಸಾನೆಟ್ ‌ ನ ತವರು ಇಟಲಿ . ಸಾನೆಟ್ ‌ ಅನ್ನು ಮೊದಲು ಬಳಸಿದವನು ಡಾಂಟೆ . ಸಾನೆಟ್ ‌ ಅನ್ನು ಪರಿಷ್ಕರಿಸಿ ಪ್ರಸಿದ್ಧಿಗೆ ತಂದವರು ಪೆಟ್ರಾರ್ಕ್ . ಕನ್ನಡದಲ್ಲಿ ಸಾನೆಟ್ ‌ ರಚಿಸಿದವರಲ್ಲಿ ಎಂ.ಗೋವಿಂದ ಪೈ ಮೊದಲಿಗರು .

ಕನ್ನಡದಲ್ಲಿ ಪ್ರಾಸತ್ಯಾಗ ಮಾಡಿ ಪದ್ಯ ಬರೆದವರಲ್ಲಿ ಎಂ.ಗೋವಿಂದ ಪೈ ಮೊದಲಿಗರು . ದ.ರಾ.ಬೇಂದ್ರೆ ಮತ್ತು ಮಾಸ್ತಿ ಇದನ್ನು ʼಅಷ್ಟಷಟ್ಪದಿʼ ಎಂದಿದ್ದಾರೆ ಗೋವಿಂದ ಪೈ ʼಚತುರ್ದಶಪದಿʼ ಎಂದಿದ್ದಾರೆ ವಿ.ಕೃ.ಗೋಕಾಕ್ ‌ ʼಸುನೀತʼ ಎಂದು ಕರೆದಿದ್ದಾರೆ . ಸಾನೆಟ್ ‌ ಗೆ ಸಂವಾದಿಯಾಗಿ ಬಳಸುವ ಕನ್ನಡ ಪದಗಳು ಸುನೀತ , ಅಷ್ಟಷಟ್ಪದಿ , ಚತುರ್ದಶಪದಿ . ಹದಿನಾಲ್ಕು ಸಾಲಿನ ಕವಿತೆ ಸುನೀತ (8+6 =14, 4x3+2 = 14)  

ಸಾನೆಟ್ ‌ ನ ಕೃತಿಗಳು : ಉಯ್ಯಾಲೆ – ದ.ರಾ.ಬೇಂದ್ರೆ ಕೃತ್ತಿಕೆ – ಕುವೆಂಪು

ಮುಡಿ : ಪಾದದ ಕೊನೆಯಲ್ಲಿ ನಿಲ್ಲುವ ಬಿಡಿ ಅಕ್ಷರವನ್ನು ಮುಡಿ ಎನ್ನುವರು . ತ್ರಿಮಾತ್ರಾಲಯದಲ್ಲಿ : ನಲ್ಲೆ . ಮುಡಿದ . ಮೊಲ್ಲೆ.ಯರಳು . ಇಲ್ಲೆ . ನಿಲ್ಲಿ.ರೆಂದಿ. ತು – ಮುಡಿ ಓರೆ.ಗಣ್ಣಿ.ನೊಂದು.ಹೊರಳು . ಹೋಗ.ಬೇಡಿ.ರೆಂದಿ . ತು – ಮುಡಿ ಚತುರ್ಮಾತ್ರಾಲಯದಲ್ಲಿ : ಚಿಮ್ಮುತ ನಿರಿಯನು ಬನದಲಿ ಬಂದಳು ಬಿಂಕದ ಸಿಂಗಾ . ರಿ – ಮುಡಿ ಹೊಮ್ಮಿದ ಹಸುರಲಿ ಮೆರೆಯಿತು ಹಕ್ಕಿ ಕೊರಲಿನ ದನಿದೋ . ರಿ - ಮುಡಿ

ಗಣಪರಿವೃತ್ತಿ : ʼಲಯದಲ್ಲಿ ಒಂದು ಹೊಸ ಬಳುಕನ್ನು ತರುವುದಕ್ಕಾಗಿ ಒಂದು ಜಾತಿಯ ಗಣಗಳ ಸ್ಥಾನದಲ್ಲಿ ಅದೇ ಮಾತ್ರಾ ಪರಿಮಿತಿಯ ಇನ್ನೊಂದು ಜಾತಿಯ ಗಣಗಳನ್ನು ಇರಿಸುವುದಕ್ಕೆʼ ಗಣಪರಿವೃತ್ತಿ ಎನ್ನುವರು .  

ತ್ರಿಮಾತ್ರಾಲಯ : ದೂರ ತೀರ ದಿಂದ ಬಂದ ದಿವ್ಯ ವೇಣು ನಾದ ಕೆ ನೆಲಮುಗಿಲನು ತುಂಬಿ ಹರಿದ ಮಂಜುಲ ತರ ಗಾನ ಕೆ ಮೂರು ಮಾತ್ರೆಯ ಲಯದ ಸ್ಥಾನದಲ್ಲಿ 2, 4 ರ ಗಣದ ಬಳಕೆ   ಪಂಚಮಾತ್ರಾಲಯ : ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು .

ಅನಾಗತ : ತಾಳವನ್ನು ಎತ್ತಿಕೊಡುವ ಪಾದಾದಿಯ ಬಿಡಿಯಾದ ಲಘು ಅಕ್ಷರ ( ಎರಡು ಲಘು ಅಕ್ಷರಗಳು ) ಕ್ಕೆ ʼಅನಾಗತʼ ಎನ್ನುವರು . ತ್ರಿಮಾತ್ರಾಲಯದಲ್ಲಿ : ಸು ನೀಲ ನಯನ ದಾಳದಲ್ಲಿ ರ ಹಸ್ಯ ವಿ‍ಶ್ವ ಸ್ವಪ್ನದಲ್ಲಿ

ಚತುರ್ಮಾತ್ರಾಲಯದಲ್ಲಿ : ಕು ಮಾರ ವ್ಯಾಸನು ಹಾಡಿದ ನೆಂದರೆ ಕಲಿಯುಗ ದ್ವಾಪರವಾಗುವುದು ತಾಳಕ್ಕೆ ಹಿಂದೆ ಎರಡು ಲಘುಗಳನ್ನು ತರುವುದಕ್ಕೆ : ಹಗ ಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ ಖಗ ಹಾರಿತು ಗೂಡಿನ ಒಳಗೆ

ಪ್ರಗಾಥ : ಇಂಗ್ಲಿಷಿನಲ್ಲಿ ಓಡ್ ‌ (Ode) ಎಂಬ ಭಾವಗೀತೆಯ ಪ್ರಕಾರಕ್ಕೆ ಸಂವಾದಿಯಾಗಿ ಬಳಸುವ ಪದ ಪ್ರಗಾಥ ಓಡ್ ‌ ಶಬ್ದದ ಸ್ಥಾನದಲ್ಲಿ ಪ್ರಗಾಥ ಶಬ್ದವನ್ನು ಮೊದಲ ಸಲ ಬಳಸಿ ರೂಢಿಸಿದವರು ಬಿ.ಎಂ.ಶ್ರೀ . ಅನಿಯತವಾದ ಖಂಡಗಳಿಂದ ಕೂಡಿದ ಪದ್ಯ ಪ್ರಕಾರ

ಕನ್ನಡದಲ್ಲಿ ಪ್ರಗಾಥಗಳು : ಬೇಲೂರಿನ ಶಿಲಾಬಾಲಿಕೆಯರು – ಡಿ . ವಿ . ಜಿ . ಓ ಹಾಡೇ – ದ.ರಾ.ಬೇಂದ್ರೆ ಹೊಂಗನಸುಗಳು – ಬಿ.ಎಂ.ಶ್ರೀ ರಜತಮಹೋತ್ಸವ ಪ್ರಗಾಥ – ಬಿ.ಎಂ.ಶ್ರೀ ಕನ್ನಡ ತಾಯ ನೋಟ - ಬಿ.ಎಂ.ಶ್ರೀ ಇಕ್ಷುಗಂಗೋತ್ರಿ – ಕುವೆಂಪು ( ಶ್ರೀ ಸ್ವಾತಂತ್ರ್ಯೋದಯ ಮಹಾಪ್ರಗಾಥಾ ) ರಸಸರಸ್ವತಿ – ಪುತಿನ ಅಖಂಡ ಕರ್ನಾಟಕ - ಕುವೆಂಪು

ಕನ್ನಡ ಛಂದಸ್ಸಿನ ಪ್ರಮುಖ ಕೃತಿಗಳು : ಕ್ರ ಸಂ ಕೃತಿಯ ಹೆಸರು ಕವಿ ಕಾಲ ವಿಶೇಷ ಅಂಶಗಳು 1 ಕವಿರಾಜಮಾರ್ಗ ಶ್ರೀವಿಜಯ ಕ್ರಿ.ಶ.850 ಕನ್ನಡ ಛಂದಸ್ಸಿನ ಯತಿ, ಪ್ರಾಸ, ಗುರು, ಲಘುಗಳ ಪ್ರಸ್ತಾಪವಿರುವ ಕೃತಿ 2 ಛಂದೋಂಬುಧಿ ಒಂದನೆಯ ನಾಗವರ್ಮ ಕ್ರಿ.ಶ.990 ಕನ್ನಡದ ಮೊದಲ ಛಂದಶ್ಶಾಸ್ತ್ರ ಗ್ರಂಥ 3 ಕವಿಜಿಹ್ವಾಬಂಧನ ಈಶ್ವರ ಕ್ರಿ.ಶ.1500 ʼಅಭಿನವ ಕೇಶಿರಾಜʼ ಬಿರುದು 4 ಛಂದಸ್ಸಾರ ಗುಣಚಂದ್ರ 15ನೇ ಶತಮಾನ 5 ಛಂದೋನುಶಾಸನ ಜಯಕೀರ್ತಿ ಕರ್ನಾಟಕ ವಿಷಯ ಭಾಷಾಜಾತಿ ಗಳ ಬಗ್ಗೆ ವಿವರವಿದೆ 6 ಸಮಾಲೋಕನ ತೀನಂಶ್ರೀ ಕಾವ್ಯಮೀಮಾಂಸೆ – ಭಾರತೀಯ ಕಾವ್ಯಮೀಮಾಂಸೆ / ವ್ಯಾಕರಣ – ಕನ್ನಡ ಮಧ್ಯಮ ವ್ಯಾಕರಣ

ಕನ್ನಡ ಛಂದಸ್ಸಿನ ಪ್ರಮುಖ ಕೃತಿಗಳು : ಕ್ರ ಸಂ ಕೃತಿಯ ಹೆಸರು ಕವಿ 7 ಕನ್ನಡ ಛಂದೋವಿಕಾಸ ಡಿ ಎಸ್‌ ಕರ್ಕಿ 8 ಕನ್ನಡ ಛಂದಃಸ್ವರೂಪ ಟಿ.ವಿ.ವೆಂಕಟಾಚಲಶಾಸ್ತ್ರಿ 9 ಛಂದೋಗತಿ ಸೇಡಿಯಾಪು ಕೃಷ್ಣಭಟ್ಟ 10 ಕನ್ನಡ ಛಂದಸ್ಸು ಟಿ.ವಿ.ವೆಂಕಟಾಚಲಶಾಸ್ತ್ರಿ 11 ಛಂದೋಮಿತ್ರ ಅ.ರಾ.ಮಿತ್ರ

ವಂದನೆಗಳು
Tags