ವರ್ಣಮಾಲೆ ಮತ್ತು ದ್ವನ್ಯಂಗಗಳು

HarshithaBJ1 2,349 views 19 slides Dec 20, 2021
Slide 1
Slide 1 of 19
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8
Slide 9
9
Slide 10
10
Slide 11
11
Slide 12
12
Slide 13
13
Slide 14
14
Slide 15
15
Slide 16
16
Slide 17
17
Slide 18
18
Slide 19
19

About This Presentation

ವರ್ಣಮಾಲೆ ಮತ್ತು ಧ್ವನ್ಯಂಗಗಳು


Slide Content

ಕನ್ನಡ ವಿಚಾರ ಪ್ರಸ್ತುತಿ ವಿಷಯ : ವರ್ಣಮಾಲೆ ಮತ್ತು ಧ್ವನ್ಯಂಗಗಳು ಪ್ರಸ್ತುತ ಪಡಿಸುವವರು ಹರ್ಷಿತ ಬಿಜೆ Ed 211624 ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಸಕಲೇಶಪುರ ಮಾರ್ಗದರ್ಶಕರು ಮಂಜುನಾಥ ಆರ್ ಸಹಾಯಕ ಪ್ರಾಧ್ಯಾಪಕರು ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಸಕಲೇಶಪುರ

ಕನ್ನಡ ವರ್ಣಮಾಲೆ ವರ್ಣಮಾಲೆ:- ವ್ಯವಸ್ಥಿತವಾಗಿ ಜೋಡಿಸಿದ ಅಕ್ಷರಮಾಲೆಯ ಗುಂಪನ್ನು ವರ್ಣಮಾಲೆಯನ್ನು ಬಹುದು. ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ. ಅ, ಆ, ಈ, ಈ, ಉ, ಊ, ಋ, ಎ, ಏ, ಐ, ಒ, ಓ, ಔ, ಅಂ, ಅಃ ಕ, ಖ, ಗ, ಘ, ಙ ಚ, ಛ, ಜ, ಝ, ಞ ಟ, ಠ, ಡ, ಢ, ಣ ತ, ಥ, ದ, ಧ, ನ ಪ, ಫ, ಬ, ಭ, ಮ ಯ, ರ, ಲ, ವ, ಶ, ಷ, ಸ, ಹ, ಳ

ಕನ್ನಡ ವರ್ಣಮಾಲೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ 1. ಸ್ವರಗಳು- 13 2. ವ್ಯಂಜನಗಳು- 24 3. ಯೋಗವಾಹಗಳು- 02 ಸ್ವರಗಳು ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಚರಿಸಲು ಬರುವ ವರ್ಣಮಾಲೆಯ ಮೊದಲ 13 ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತಾರೆ. ಅವುಗಳೆಂದರೆ:- ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ ಸ್ವರಗಳ ವಿಧಗಳು: ಸ್ವರಗಳಲ್ಲಿ ಎರಡು ವಿಧ ಅವು ಯಾವುವೆಂದರೆ ೧. ಹೃಸ್ವ ಸ್ವರಗಳು ೨. ದೀರ್ಘ ಸ್ವರಗಳು

ಹೃಸ್ವ ಸ್ವರ : ಹೃಸ್ವ ಸ್ವರಗಳು 6. ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ವರ್ಣಮಾಲೆಯ ಅಕ್ಷರಗಳನ್ನು (ಅ, ಇ, ಉ, ಋ, ಎ, ಒ) ಹೃಸ್ವ ಸ್ವರಗಳೆಂದು ಕರೆಯುವರು. ದೀರ್ಘಸ್ವರ : ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ವರ್ಣಮಾಲೆಯ ಏಳು ಅಕ್ಷರಗಳನ್ನು (ಆ, ಈ, ಊ, ಏ, ಐ, ಓ, ಔ) ದೀರ್ಘಸ್ವರಗಳು ಎಂದು ಕರೆಯುವರು. 2 . ವ್ಯಂಜನಗಳು ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಚರಿಸಲೂ ಬಾರದ ವರ್ಣಮಾಲೆಯ 34 ಅಕ್ಷರಗಳನ್ನು ವ್ಯಂಜನಗಳು ಎಂದು ಕರೆಯುತ್ತಾರೆ. ಅವುಗಳೆಂದರೆ: ಕ, ಖ, ಗ, ಘ, ಙ ಚ, ಛ, ಜ,ಝ,ಞ ಟ, ಠ, ಡ, ಢ, ಣ ತ, ಥ, ದ, ಧ, ನ ಯ, ರ, ಲ, ವ, ಶ, ಷ, ಸ, ಹ, ಳ

ವ್ಯಂಜನಗಳಲ್ಲಿ ಎರಡು ವಿಧ ಯಾವುದೆಂದರೆ. ೧. ವರ್ಗೀಯ ವ್ಯಂಜನಗಳು: ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ 25 ಅಕ್ಷರಗಳನ್ನು ವರ್ಗಿಯವ್ಯಂಜನ ಎಂದು ಕರೆಯುವರು. (ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಎಲ್ಲಾ ಕಾಗುಣಿತಾಕ್ಷರ ಗಳಿಗೆ ವರ್ಗಿಯ ವ್ಯಂಜನಗಳು ಎಂದು ಕರೆಯುತ್ತಾರೆ). ಉದಾ: ಕ - ವರ್ಗ = ಕ, ಖ, ಗ, ಘ, ಙ ಚ - ವರ್ಗ = ಚ, ಛ, ಜ,ಝ,ಞ ಟ - ವರ್ಗ = ಟ, ಠ, ಡ, ಢ, ಣ ತ - ವರ್ಗ = ತ, ಥ, ದ, ಧ, ನ ಪ - ವರ್ಗ = ಪ, ಫ, ಬ, ಭ, ಮ

೨. ಅವರ್ಗೀಯ ವ್ಯಂಜನಗಳು ಅವರ್ಗೀಯ ವ್ಯಂಜನಗಳು ‘ಯ್’ ಕಾರದಿಂದ ‘ಳ್’ ಕಾಲದವರೆಗೆ ಕೊಟ್ಟು 9 ಅಕ್ಷರಗಳಿವೆ. ಇವುಗಳನ್ನು ಒಂದೊಂದಾಗಿ ವರ್ಗೀಕರಿಸಲಾಗುವುದಿಲ್ಲ. ಹಾಗಾಗಿ ಇವುಗಳನ್ನು ಅವಗ್ರೀಯ ವ್ಯಂಜನಗಳು ಎಂದು ಕರೆಯುತ್ತಾರೆ. ಅವುಗಳೆಂದರೆ:- ಯ, ರ, ಲ, ವ, ಶ, ಷ, ಸ, ಹ, ಳ.

• ಅಲ್ಪಪ್ರಾಣಾಕ್ಷರಗಳು: 10 ಕಡಿಮೆ ಸ್ವರದಿಂದ/ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತ ಅಕ್ಷರಗಳಿಗೆ ಅಲ್ಪಪ್ರಾಣಾಕ್ಷರಗಳು ಎನ್ನಲಾಗಿದೆ. ಉದಾ: ಕ, ಚ, ಟ, ತ, ಪ‌ ಗ, ಜ, ಡ, ದ, ಬ • ಮಹಾಪ್ರಾಣ ಕ್ಷರಗಳು : 10 ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಾಕ್ಷರ ಗಳಿಗೆ ಮಹಾಪ್ರಾಣಾಕ್ಷರಗಳು ಎಂದು ಕರೆಯುತ್ತಾರೆ. ಉದಾ: ಖ, ಛ, ಠ, ಥ, ಫ ಘ, ಝ,ಢ,ಧ,ಭ

• ಅನುನಾಸಿಕಗಳು- 5 ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ವರ್ಗಿಯ ವ್ಯಂಜನಗಳೇ ಅನುನಾಸಿಕಗಳು. ಅವುಗಳೆಂದರೆ: ‌‌ ಙ, ಞ, ಣ, ನ, ಮ. ಈ ಐದು ಅನುನಾಸಿಕ ಅಕ್ಷರಗಳು ಆಯಾ ವರ್ಗದ ಅಕ್ಷರಗಳ ಹಿಂದೆ ನಿಂತು ಬಿಂದು (ಅನುಸ್ವಾರ)ವಾಗಿ ಕಾರ್ಯನಿರ್ವಹಿಸುತ್ತವೆ. ಉದಾ:- ‘ಕ’ ವರ್ಗದಲ್ಲಿ – ಅಙ್ಗಳ = ಅಂಗಳ ‘ಚ’ ವರ್ಗದಲ್ಲಿ – ಪಞ್ಜರ = ಪಂಜರ ‘ಟ’ ವರ್ಗದಲ್ಲಿ – ಗಣ್ಟೆ = ಗಂಟೆ ‘ತ’ ವರ್ಗದಲ್ಲಿ – ಸನ್ತಸ = ಸಂತಸ 'ಪ’ ವರ್ಗದಲ್ಲಿ – ಪಮ್ಪ = ಪಂಪ.

3. ಯೋಗವಾಹಗಳು: ಸ್ವತಂತ್ರ ವಲ್ಲದ ಹಾಗೂ ಸ್ವರವು ಅಲ್ಲದ, ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭ ಅಕ್ಷರಗಳ ನಡುವಿನ ಎರಡು ಅಕ್ಷರಗಳನ್ನು ಯೋಗವಾಹಗಳ ಎಂದು ಕರೆಯುತ್ತಾರೆ. (ಬೇರೆ ಅಕ್ಷರಗಳ ಸಹಯೋಗದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನುತ್ತಾರೆ). ಯೋಗವಾಹಗಳ ವಿಧಗಳು: ೧. ಅನುಸ್ವಾರ- ಯಾವುದೇ ಅಕ್ಷರವು ಒಂದು ಸೊನ್ನೆ, ಬಿಂದು, ಎಂಬ ಸಂಕೇತವನ್ನು ಹೊಂದಿದ್ದರೆ ಅದು ಅನು ಸ್ವರಾಕ್ಷರ ಎನಿಸುವುದು. ಉದಾ: ಅಂಕ, ಬಿಂದು, ಎಂಬ.

೨. ವಿಸರ್ಗ – ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರಮೇಲೊಂದು ಇರುವ 2 ಸೊನ್ನೆಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗ ಅಕ್ಷರ ಎನಿಸುವುದು. ಉದಾ: ಅಂತಃ, ದುಃಖ, ಸಃ, ನಃ

ಧ್ವನ್ಯಂಗಗಳು ಧ್ವನ್ಯಂಗಗಳು ಎಂದರೆ ಧ್ವನಿಯನ್ನು ನಿರ್ಮಾಣ ಮಾಡುವ ಅಂಗಗಳು ಎಂದು ಅರ್ಥ. ‌

ಮೊದಲು ಈ ಚಿತ್ರದಲ್ಲಿರುವ ಸ್ಥಾನಗಳನ್ನು ಗುರುತಿಸಿ. ಬಾಯಿ ಒಂದು ಕುಹರ. ಅದರ ಒಳಭಾಗದಲ್ಲಿರುವ ಚಲಿಸುವ ಅಂಗಗಳು ಆಕ್ರಮಿಸುವ ಸ್ಥಳಗಳನ್ನು ಅನುಸರಿಸಿ ಬಾಯಿಯ ಆಕಾರವು ಬದಲಾಗುತ್ತದೆ. ಈ ವ್ಯತ್ಯಾಸವು ಉಚ್ಚಾರವಾಗುವ ಶಬ್ದದ ಕಾಕು (Tone)ವನ್ನು ಬದಲು ಮಾಡಬಹುದು. ಅವೇ ನಿರ್ದಿಷ್ಟವಾದ ಧ್ವನಿಯನ್ನೂ ಉಂಟು ಮಾಡಬಹುದು (Produce or Articulate). ಈ ಅಂಗಗಳು ಹೀಗಿವೆ. ನಂಗಿಲು (Uvula), ಮೃದುತಾಲು (Soft Palate), ಕಠಿನತಾಲು (Hard Palate), ಹಲ್ಲುಗಳು (Teeth), ನಾಲಿಗೆ (Tongue), ತುಟಿಗಳು (Lips), ಮೂಗು (Nose), ಅಲ್ಲದೆ ನಾಸಾಕುಹರ (Nasal Passage) ಮತ್ತು ಬಟವೆಗಳು (Sinuses) ಶ್ವಾಸನಿಗ್ರಹಕ್ಕೂ, ಧ್ವನಿಯ ಅನುರಣನಕ್ಕೂ ಸಹಾಯಕವಾಗುತ್ತವೆ.

ಧ್ವನಿಯನ್ನು ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಬಹು ಸಂಕೀರ್ಣವಾದ ಕಾರ್ಯ. ಕೊರಳಿನ ಮಾಂಸಖಂಡಗಳ ಬಿಗಿಯು ಗಂಟಲಿನ ಮೇಲೆ ಪ್ರಭಾವವನ್ನು ಬೀರಬಹುದು. ಕೆಳಗಿನ ದವಡೆಯ ಚಲನೆ, ಮುಖದ ಕೆಲವು ಮಾಂಸಖಂಡಗಳು ಕೂಡ ಬಾಯಿಯ ಆಕಾರವನ್ನು ಬದಲಿಸಬಹುದು. ಇದರಿಂದ ಹೊರಡುವ ಧ್ವನಿಯು ಬದಲಾಗುತ್ತದೆ. ದೇಹದ ಮೇಲ್ಭಾಗವು ಕಂಪಿಸುತ್ತದೆ. ತಲೆಯ ಮತ್ತು ಎದೆಯ ಮೂಳೆಗಳು ಧ್ವನಿವರ್ಧಕಗಳಾಗಬಹುದು .

ಕನ್ನಡ ಅಕ್ಷರಗಳು ಇರುವ ಪಟ್ಟಿಯನ್ನು ಪರಿಶೀಲಿಸಿ. ಕನ್ನಡದ ಅಕ್ಷರಗಳನ್ನು ಅವು ಹುಟ್ಟುವ ಸ್ಥಾನಗಳನ್ನು ಗಮನಿಸಿ ಐದು ವಿಧವಾಗಿ ವಿಂಗಡಿಸಿದ್ದಾರೆ. ೧. ಕಂಠ್ಯ, ೨. ತಾಲವ್ಯ ೩. ಮೂರ್ಧನ್ಯ, ೪. ದಂತ್ಯ, ೫. ಓಷ್ಠ್ಯ. ಮೃದು, ಅಕ್ಷರಗಳು ಬಾಯಿಯಲ್ಲಿ ಉಚ್ಚಾರವಾಗುತ್ತವೆ. ಬಾಯಿಯ ಮೇಲ್ಭಾಗವನ್ನು ಅಂಗಳು ಅಥವಾ ಅಟ್ಟ ಎಂದು ಕರೆಯುತ್ತಾರೆ. ಆಂಗಳು ಇರುವ ಆಟ್ಟದ ಮುಂಭಾಗ ಮಾತ್ರ ನಾಲಿಗೆಯು ತಗಲುವಂತೆ ಉಚ್ಚಾರವಾಗುವ ಅಕ್ಷರಗಳು ಮೃದು. ಉದಾ. ದ, ಧ, ಣ ಇತ್ಯಾದಿಗಳು. ಅಂಗಳ ಮೇಲ್ಭಾಗಕ್ಕೆ ನಾಲಿಗೆಯು ತಗುಲದೆ ಉಚ್ಚಾರವಾಗುವ ಅಕ್ಷರಗಳು ಕರ್ಕಶ ವರ್ಣಗಳು. ಉದಾ: ಕ, ಬ, ಟ, ಡ ಇತ್ಯಾದಿಗಳು

ಕಂಠ ಎಂದರೆ ಗಂಟಲು. ಅದರಲ್ಲಿ ಉಚ್ಚಾರಗೊಳ್ಳುವ ಅಕ್ಷರಗಳು ಕಂಠ್ಯಗಳು. ತಾಲು ಎಂದರೆ ಅಂಗಳು. ಅಲ್ಲಿ ಉಚ್ಚಾರವಾಗುವ ಅಕ್ಷರಗಳು ತಾಲವ್ಯಗಳು. ಮೂರ್ಧ ಎಂದರೆ ನೆತ್ತಿ. ಅಂಗಳಿನ ಮಧ್ಯಭಾಗ. ಅಲ್ಲಿ ಹುಟ್ಟುವ ಅಕ್ಷರಗಳು ಮೂರ್ಧನ್ಯಗಳು. ದಂತ ಎಂದರೆ ಹಲ್ಲು. ಹಲ್ಲಿನ ಬಳಿ ಉಚ್ಚಾರವಾಗುವ ಅಕ್ಷರಗಳು ದಂತ್ಯಗಳು. ಓಷ್ಠ ಎಂದರೆ ತುಟಿ. ತುಟಿಗಳಲ್ಲಿ ಉಚ್ಚಾರವಾಗುವ ಅಕ್ಷರಗಳು ಓಷ್ಠ್ಯಗಳು. ಈಗ ಅಕ್ಷರಗಳ ಪಟ್ಟಿಯನ್ನು ನೋಡಿ. ಕನ್ನಡದ ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತಿವೆ ಎಂಬುದನ್ನು ತಿಳಿಯಬಹುದು.

ಇದು ನಿಧಾನವಾಗಿ ಪ್ರತಿಯೊಂದು ಅಕ್ಷರವನ್ನೂ ಉಚ್ಚರಿಸಿ ಅದು ಹುಟ್ಟುವ ಸ್ಥಳವನ್ನು ಗುರುತಿಸುವ ಒಂದು ಪ್ರಯೋಗ. ಬೇಗ ಆಗುವ ಕೆಲಸವಲ್ಲ. ಕೆಲವು ಅಕ್ಷರಗಳು ಎರಡು ಭಾಗಗಳಲ್ಲಿ ಕಂಡುಬರುತ್ತವೆ. ಅವುಗಳ ಉಚ್ಚಾರಣೆಗೆ ಎರಡು ಅಂಗಗಳ ಸಹಾಯವೂ ಬೇಕು ಎಂದು ಅರ್ಥ. ನಮ್ಮ ಭಾಷೆಯಲ್ಲಿಲ್ಲದ ಎಷ್ಟೋ ಧ್ವನಿಗಳು ಪ್ರಪಂಚದ ಇತರ ಭಾಷೆಗಳಲ್ಲಿ ಇವೆ. ಇವೆಲ್ಲವನ್ನೂ ಗುರುತಿಸುವುದಕ್ಕೆ ಭಾಷಾ ಶಾಸ್ತ್ರಜ್ಞರು The International Phonetic Alphabet ಎಂಬ ವರ್ಣಮಾಲೆಯನ್ನು ಸಿದ್ಧಪಡಿಸಿದ್ದಾರೆ. *******************************************

ಧನ್ಯವಾದಗಳು