ಶ್ರೀ ಮಲ್ಲೇಶ್ವರ ದೇವಾಲಯದ ಒಂದು ಅಧ್ಯಯನ ಮಲ್ಲೇಶ್ವರ

meghanam627 20 views 80 slides Sep 09, 2025
Slide 1
Slide 1 of 80
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8
Slide 9
9
Slide 10
10
Slide 11
11
Slide 12
12
Slide 13
13
Slide 14
14
Slide 15
15
Slide 16
16
Slide 17
17
Slide 18
18
Slide 19
19
Slide 20
20
Slide 21
21
Slide 22
22
Slide 23
23
Slide 24
24
Slide 25
25
Slide 26
26
Slide 27
27
Slide 28
28
Slide 29
29
Slide 30
30
Slide 31
31
Slide 32
32
Slide 33
33
Slide 34
34
Slide 35
35
Slide 36
36
Slide 37
37
Slide 38
38
Slide 39
39
Slide 40
40
Slide 41
41
Slide 42
42
Slide 43
43
Slide 44
44
Slide 45
45
Slide 46
46
Slide 47
47
Slide 48
48
Slide 49
49
Slide 50
50
Slide 51
51
Slide 52
52
Slide 53
53
Slide 54
54
Slide 55
55
Slide 56
56
Slide 57
57
Slide 58
58
Slide 59
59
Slide 60
60
Slide 61
61
Slide 62
62
Slide 63
63
Slide 64
64
Slide 65
65
Slide 66
66
Slide 67
67
Slide 68
68
Slide 69
69
Slide 70
70
Slide 71
71
Slide 72
72
Slide 73
73
Slide 74
74
Slide 75
75
Slide 76
76
Slide 77
77
Slide 78
78
Slide 79
79
Slide 80
80

About This Presentation

ಹಿಸ್ಟರಿ ಅಂಡ್ ಕಂಪ್ಯೂಟಿಂಗ್ ಎಂಬ ಪತ್ರಿಕೆಯ ಕಿರು ಸಂಶೋಧನಾ ಚಿತ್ರ ಪ್ರಬಂಧ-ಕಾಡು ಮಲ್ಲೇಶ್ವರ ದೇವಾಲಯದ ಒಂದು ಅಧ್ಯಯನ.
ಶ್ರೀ ಕಾಡ�...


Slide Content

1 ಮಾರ್ಗದರ್ಶಕರು ಇತಿಹಾಸ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸರ್ಕಾರಿ ಕಲಾ ಕಾಲೇಜು ಡಾ. ಬಿ. ಆರ್. ಅಂಬೇಡ್ಕರ್ ವೀಧಿ ಬೆಂಗಳೂರು - 560001 NAAC ಮೌಲ್ಯಮಾಪನ A+ ಗ್ರೇಡ್ ಸಿಜಿಪಿಎ 3.29 ಪತ್ರಿಕೆ : ಹಿಸ್ಟರಿ ಅಂಡ್ ಕಂಪ್ಯೂಟಿಂಗ್ ಸ್ನಾತಕೋತ್ತರ ಪದವಿಗಾಗಿ ಅರ್ಪಿಸಿರುವ ಕಿರು ಸಂಶೋಧನಾ ಚಿತ್ರ ಪ್ರಬಂಧ ಅರ್ಪಣೆ ಮಾರ ಮಾರ್ಗದರ್ಶಕರು ಅರ್ಪಿಸುವವರು ಕರ ಡಾ . ಸುಮಾ.ಡಿ ಸಂಶೋಧನ ವಿದ್ಯಾರ್ಥಿ : ಮೇಘನಾ ಎಲ್ ಸಹ ಪ್ರಾಧ್ಯಾಪಕರು ನಾಲ್ಕನೇ ಸೆಮಿಸ್ಟರ್ ಎಂ ಎ ಇತಿಹಾಸ ಸರ್ಕಾರಿ ಕಲಾ ಕಾಲೇಜು , ನೋಂದಣಿ ಸಂಖ್ಯೆ:P18CX23A042001 ಬೆಂಗಳೂರು 2024-2025 ಕಾಡು ಮಲ್ಲೇಶ್ವರ ದೇವಾಲಯ : ಒಂದು ಅಧ್ಯಯನ

2 ಮೌಲ್ಯಮಾಪನ ವರದಿ ಸರ್ಕಾರಿ ಕಲಾ ಕಾಲೇಜಿನ ಎಂ . ಎ . ಇತಿಹಾಸ ಸ್ನಾತಕೋತ್ತರ ಪದವಿಗಾಗಿ ವಿದ್ಯಾರ್ಥಿ ಮೇಘನಾ . ಎಲ್ ‌ , ನೊಂದಣಿ ಸಂಖ್ಯೆ : P18CX23A04200 1 , ಅವರು ಸಿದ್ಧಪಡಿಸಿ ಸಲ್ಲಿಸಿರುವ “ ಕಾಡು ಮಲ್ಲೇಶ್ವರ ದೇವಾಲಯದ ಒಂದು ಅಧ್ಯಯನ ” , ಎಂಬ ಶೀರ್ಷಿಕೆಯ ಹಿಸ್ಟರಿ ಅಂಡ್ ಕಂಪ್ಯೂಟಿಂಗ್ ಎಂಬ ಪತ್ರಿಕೆಯ ಕಿರು ಸಂಶೋಧನಾ ಚಿತ್ರ ಪ್ರಬಂಧವು ಒಪ್ಪಿತವಾಗಿರುತ್ತದೆ ಎಂದು ದೃಢೀಕರಿಸಲಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ನಿಯಮಾವಳಿಯಂತೆ ಈ ಕಿರು ಸಂಶೋಧನಾ ಚಿತ್ರ ಪ್ರಬಂಧವು ಸ್ನಾತಕೋತ್ತರ ಪದವಿಗಾಗಿ ಪೂರ್ಣಗೊಂಡಿರುತ್ತದೆ . ದಿನಾಂಕ : ಸ್ಥಳ : ಬೆಂಗಳೂರು 1 . ಪರಿವೀಕ್ಷಕರ ಸಹಿ : 2. ಪರಿವೀಕ್ಷಕರ ಸಹಿ :

ವಿದ್ಯಾರ್ಥಿಯ ಘೋಷಣಾ ಪ ತ್ರ 3 ಈ ಮೂಲಕ ಪ್ರಮಾಣೀಕರಿಸುವುದೇನೆಂದರೆ ಸ್ನಾತಕೋತ್ತರ ಪದವಿಗಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ “ ಕಾಡು ಮಲ್ಲೇಶ್ವರ ದೇವಾಲಯದ ಒಂದು ಅಧ್ಯಯನ ” ಎಂಬ ಶೀರ್ಷಿಕೆಯ ಕಿರು ಸಂಶೋಧನಾ ಚಿತ್ರ ಪ್ರಬಂಧವನ್ನು ಸಲ್ಲಿಸಿರುತ್ತೇನೆ . ಈ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನಾನು ವಿವಿಧ ಮೂಲಗಳಿಂದ ಸಂಗ್ರಹಿಸಿರುತ್ತೇನೆ . ಈ ಕಿರು ಪ್ರಬಂಧದ ಯಾವುದೇ ಭಾಗವನ್ನು ಭಾಗಶಃ ಅಥವಾ ಪೂರ್ಣವಾಗಿಯಾಗಲಿ ಯಾವುದೇ ವಿಶ್ವವಿದ್ಯಾಲಯದ ಡಿಪ್ಲೋಮೋ / ಸರ್ಟಿಫಿಕೇಟ್ ಗಳ ಪದವಿಗಾಗಿ ಸಲ್ಲಿಸಿರುವುದಿಲ್ಲವೆಂದು ಈ ಮೂಲಕ ದೃಡೀಕರಿಸುತ್ತೇನೆ . ದಿನಾಂಕ: ಸ್ಥಳ : ಬೆಂಗಳೂರು ಮೇಘನಾ . ಎಲ್ ನಾಲ್ಕನೇ ಸೆಮಿಸ್ಟರ್ ಎಂ . ಎ . ಇತಿಹಾಸ ನೋಂದಣಿ ಸಂಖ್ಯೆ:P18CX23A042001

4 ಮಾರ್ಗದರ್ಶಕರ ದೃಢೀಕರಣ ಪತ್ರ ಈ ಮೂಲಕ ದೃಢೀಕರಿಸುವುದೇನೆಂದರೆ " ಕಾಡು ಮಲ್ಲೇಶ್ವರ ದೇವಾಲಯದ ಒಂದು ಅಧ್ಯಯನ ” ಎಂಬ ಕಿರು ಸಂಶೋಧನಾ ಚಿತ್ರ ಪ್ರಬಂದವನ್ನು ವಿದ್ಯಾರ್ಥಿನಿ ಮೇಘನಾ . ಎಲ್ ‌ , ನಾಲ್ಕನೇ ಸೆಮಿಸ್ಟರ್ , ಎಂ . ಎ . ಇತಿಹಾಸ , ನೋಂದಣಿ ಸಂಖ್ಯೆ : P18CX23A04200 1 ಅವರು ಸಲ್ಲಿಸಿರುತ್ತಾರೆ . ಇದು ಪ್ರಾಥಮಿಕ ಹಾಗೂ ದ್ವಿತೀಯ ಆಕರಗಳ ಅಧ್ಯಯನದ ಮೂಲ ಸಂಶೋಧನೆಯಾಗಿದೆ . ಈ ಸಂಶೋಧನೆಯನ್ನು ಸ್ನಾತಕೋತ್ತರ ಪದವಿಯ ಭಾಗವಾಗಿ 2024-2025 ನೇ ಶೈಕ್ಷಣಿಕ ಸಾಲಿನಲ್ಲಿ ನನ್ನ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರೈಸಿದ್ದಾರೆ . ಬೆಂಗಳೂರು ನಗರ ವಿಶ್ವವಿದ್ಯಾಲಯದ ನಿಯಮಾವಳಿಯಂತೆ ಈ ಕಿರು ಸಂಶೋಧನಾ ಚಿತ್ರ ಪ್ರಬಂಧವು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಪೂರ್ಣಗೊಂಡಿರುತ್ತದೆ . ಮಾರ್ಗದರ್ಶಕರು ಡಾ . ಸುಮಾ . ಡಿ ಸಹ ಪ್ರಾಧ್ಯಾಪಕರು ಸರ್ಕಾರಿ ಕಲಾ ಕಾಲೇಜು ಬೆಂಗಳೂರು

5 ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ 2024 - 25 ನೇ ಶೈಕ್ಷಣಿಕ ಸಾಲಿನಲ್ಲಿ ಹಿಸ್ಟರಿ ಅಂಡ್ ಕಂಪ್ಯೂಟಿಂಗ್ ಪತ್ರಿಕೆಯಲ್ಲಿ , ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿ , ಮೇಘನಾ ಎಲ್ ‌ , ಎಂ.ಎ . ಹಿಸ್ಟರಿ , 4ನೇ ಸೆಮಿಸ್ಟರ್ ನೋಂದಣಿ ಸಂಖ್ಯೆ : P18CX23A04200 1 , ಅವರು ಕಿರು ಸಂಶೋಧನಾ ಚಿತ್ರ ಪ್ರಬಂಧವನ್ನು ಸಲ್ಲಿಸಿರುತ್ತಾರೆ . ಇದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ಈ ಮೂಲಕ ದೃಢೀಕರಿಸುತ್ತೇವೆ . ಈ ಕಿರು ಸಂಶೋಧನಾ ಚಿತ್ರಪ್ರಬಂಧದ ಯಾವುದೇ ಭಾಗವನ್ನು ಭಾಗಶಃ ಅಥವಾ ಪೂರ್ಣವಾಗಿಯಾಗಲಿ ಯಾವುದೇ ವಿಶ್ವವಿದ್ಯಾಲಯದ ಡಿಪ್ಲೋಮೋ / ಸರ್ಟಿಫಿಕೇಟ್ ಗಳ ಪದವಿಗಾಗಿ ಸಲ್ಲಿಸಿರುವುದಿಲ್ಲವೆಂದು ದೃಢೀಕರಿಸುತ್ತೇವೆ . ಸಂಯೋಜಕರು ಪ್ರಾಂಶುಪಾಲರು ಡಾ . ಹೆಚ್.ಜಿ ನಾರಾಯಣ್ ‌ ಡಾ . ಬಿ . ಸಿ ನಾಗೇಂದ್ರ ಕುಮಾರ್ ಪ್ರಾಧ್ಯಾಪಕರು ಪ್ರಾಧ್ಯಾಪಕರು ಸರ್ಕಾರಿ ಕಲಾ ಕಾಲೇಜು ಸರ್ಕಾರಿ ಕಲಾ ಕಾಲೇಜು ಬೆಂಗಳೂರು ಬೆಂಗಳೂರು ದೃಢೀಕರಣ ಪತ್ರ

ವಿದ್ಯಾರ್ಥಿ ಮೇಘನಾ . ಎಲ್ ನಾಲ್ಕನೇ ಸೆಮಿಸ್ಟರ್ ಎಂ . ಎ . ಇತಿಹಾಸ ನೋಂದಣಿ ಸಂಖ್ಯೆ:P18CX23A042001 ಕೃತಜ್ಞತೆ ಗಳು ಈ ಕಿರು ಸಂಶೋಧನಾ ಚಿತ್ರ ಪ್ರಬಂಧವು ಅತ್ಯಂತ ಜವಾಬ್ದಾರಿಯಿಂದ ಕೂಡಿದ ಕೆಲಸವಾಗಿದೆ . ಈ ಕಾರ್ಯವನ್ನು ಪೂರೈಸುವಲ್ಲಿ ನಿರಂತರ ಮಾರ್ಗದರ್ಶನ ನೀಡಿದ ನನ್ನ ಮಾರ್ಗದರ್ಶಕರಾದ ಡಾ . ಸುಮಾ . ಡಿ ಮೇಡಂ ಅವರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಅರ್ಪಿಸುತ್ತೇನೆ , ಕಿರು ಸಂಶೋಧನಾ ಚಿತ್ರ ಪ್ರಬಂಧವನ್ನು ಪೂರೈಸಲು ಸಹಾಯ ಮತ್ತು ಸಹಕಾರ ನೀಡಿದ ನಮ್ಮ ವಿಭಾಗದ ಸಂಯೋಜಕರಾದ ಡಾ . ಹೆ ಚ್ . ಜಿ . ನಾರಾಯಣ ಸರ್ ಅವರಿಗೆ ‌, ನಮ್ಮ ಕಾಲೇಜಿನ ಗ್ರಂಥಪಾಲಕರಿಗೂ ಹಾಗೂ ಗಣಕಯಂತ್ರ ಪ್ರಯೋಗಾಲಯವನ್ನು ಒದಗಿಸಿಕೊಟ್ಟ ನಮ್ಮ ಕಾಲೇಜಿನ ಪ್ರಾಂಶುಪಾಲ ರಾ ದ ಡಾ.ಬಿ.ಸಿ.ನಾಗೇಂದ್ರಕುಮಾರ್ ‌ ಸರ್ ‌ ಅವರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ . 6

7 ಸುಸ್ವಾಗತ

8 ಶ್ರೀ ಕಾಡು ಮಲ್ಲಿಕಾರ್ಜುನ ದೇವಾಲಯ ಒಂದು ಅಧ್ಯಯನ

9

ಪರಿವಿಡಿ ಪೀಠಿಕೆ ಹಿನ್ನಲೆ ಇತಿಹಾಸ ಶಿಲಾ ಶಾಸನ ದೇವಾಲಯದ ರಚನೆ ಪ್ರವೇಶದ್ವಾರ ಗರ್ಭಗೃಹ ಅಂತರಾಳ ಉಪದೇಗುಲ ಶಿಲ್ಪಗಳ ವಿವರಣೆ ಪ್ರದಕ್ಷಿಣ ಪಥ ವಾಸ್ತುಶಿಲ್ಪ ಹಬ್ಬಗಳ ಮಹತ್ವ 10

ಪೀಠಿಕೆ ಬೆಂಗಳೂರು ಪರಿಸರದ ಭೌಗೋಳಿಕ ಹಿನ್ನೆಲೆಯು ಪ್ರಾಚೀನ ಕಾಲದಿಂದಲೂ ಹಲವು ಧಾರ್ಮಿಕ ಕ್ಷೇತ್ರಗಳ ಮತ್ತು ವ್ಯಾಪಾರಿಗಳ ಕೇಂದ್ರಗಳ ವಿಕಾಸಕ್ಕೆ ಕಾರಣವಾಗಿದೆ . ಆಯಕಟ್ಟಿನ ಎಡೆಗಳಲ್ಲಿ ಪ್ರಮುಖ ದೇವಾಲಯಗಳು ಮತ್ತು ಪಟ್ಟಣಗಳು ಬೆಳೆದು ಬಂದಿದೆ . ಹೀಗೆ ಪಾರಂಪರಿಕವಾಗಿ ಬೆಳೆದು ಬಂದಿರುವ ಕ್ಷೇತ್ರಗಳು ತಮ್ಮ ಗರ್ಭದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಘೋಷಿಸಿಕೊಂಡು ಬಂದಿದೆ . ಶೈವ , ವೈಷ್ಣವ ಜೈನ ಮತ ಪರಂಪರೆಯೊಂದಿಗೆ ಗುರುತಿಸಿಕೊಂಡಿರುವ ಈ ಕ್ಷೇತ್ರಗಳು ಇಂದು ಧಾರ್ಮಿಕ ಕೇಂದ್ರಗಳಾಗಿವೆ . ಅಂತಹ ಕ್ಷೇತ್ರಗಳಲ್ಲಿ ಮಲ್ಲೇಶ್ವರ ಒಂದು . ಇದು ಸುಮಾರು ೭೦೦ ವರ್ಷಗಳ ಇತಿಹಾಸವನ್ನು ಹೊಂದಿದೆ . 11

ಶ್ರೀ ಕಾಡು ಮಲ್ಲೇಶ್ವರ ದೇವಾಲಯ ಚಿತ್ರ 12

ದೇವಾಯಲದ ಪಕ್ಷಿನೋಟ 13

ಹಿನ್ನೆಲೆ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ತನ್ನದೇ ಆದ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದೆ . ಮಲ್ಲೇಶ್ವರ ದೇವಾಲಯಗಳ ಬೀಡೆಂದೇ ಹೆಸರು ವಾಸಿಯಾಗಿದೆ . ಐತಿಹಾಸಿಕ ಹಾಗೂ ಪೌರಾಣಿಕ ದೃಷ್ಟಿಯಲ್ಲಿ ಪ್ರಸಿದ್ಧವಾದ ಸ್ಥಳ ಕಾಡು ಮಲ್ಲಿಕಾರ್ಜುನ ಸ್ವಾಮಿ . ದೇವಾಲಯ . “ ಓಂ ಶುದ್ಧ ಸ್ಪಟಿಕೆ ಸಂಕಾಸಂ ಶುದ್ಧ ವಿದ್ಯಾ ಪ್ರದಾಯಕಂ ಶುದ್ಧ ಪೂರ್ಣಂ ಚಿದಾನಂದಂ ಸದಾಶಿವ ಮಹಾಂ ಭಜಿ ಭಾ ಗರ್ತವ ಸಂಪುತ್ಸೋ ಭಾಗರ್ತ ಪ್ರತಿಭಕ್ತೆ ಜಗದ ಪಿತರೋ ವಂದೇ ಪಾರ್ವತಿ ಪರಮೇಶ್ವರೋ ರಮರಂಬಿಕಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ” 14

ಶ್ರೀ ಕಾಡು ಮಲ್ಲೇಶ್ವರ ದೇವಾಲಯದ ಪುನರ್ನಿಮಾಪಕರು ರಾವ್ ‌ ಬಹದ್ದೂರ್ ‌ ಎಲ್ಲೆ ಮಲ್ಲಪ್ಪ ಶೆಟ್ಟರು . 15

ಶೆಟ್ಟರು 1798 ರಿಂದ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇಗುಲದ ಜೀರ್ಣೋದ್ಧಾರಕ ಮಾಡಿ ಗರ್ಭಗುಡಿ ಮತ್ತು ಕಲ್ಯಾಣಿಯನ್ನು ಕಟ್ಟಿಸಿದರು . ದೇವಾಲಯದ ಮುಂಭಾಗದಲ್ಲಿ ಕಲ್ಲಿನ ಸೋಪಾನಗಳಿಂದ ಅಲಂಕೃತವಾದ ಕೊಳದಲ್ಲಿ ಪ್ರಶುಭ ಮೂರ್ತಿಯನ್ನು ಸ್ಥಾಪಿಸಿದರು . ಈ ವೃಷಭದ ಬಾಯಿಂದ ತೀರ್ಥವು ಹೊರ ಬರುವುದನ್ನು ಇಂದಿಗೂ ಕಾಣಬಹುದು . ಅವರ ಕಾಲದಲ್ಲಿ ನಿರ್ಮಾಣವಾದ ದೇಗುಲಗಳು : ಬಸವನಗುಡಿಯ ದೊಡ್ಡ ಬಸವೇಶ್ವರ , ಗವಿಪುರಂ ಗುಡ್ಡ ಹಳ್ಳಿಯ ಗವಿ ಗಂಗಾಧರೇಶ್ವರ , ಪ್ರಳಯಕಾಲ ರುದ್ರೇಶ್ವರ ದೇವಾಲಯ . ಬೆಳ್ಳಿ ಬಸವೇಶ್ವರ ದೇವಸ್ಥಾನ , ಹಲಸೂರು ಸೋಮೇಶ್ವರ ದೇವಸ್ಥಾನ . 16 ರಾವ್ ‌ ಬಹದ್ದೂರ್ ‌ ಎಲ್ಲೆ ಮಲ್ಲಪ್ಪ ಶೆಟ್ಟರು

ಈ ದೇವಾಲಯಗಳ ಜೀವನೋದ್ಧಾರಕ್ಕೆ ಧನ ಸಹಾಯವನ್ನು ಶೆಟ್ಟರು ಮಾಡಿದರು. ಹಾಗೆಯೇ ಮತ್ತೊಬ್ಬರಾದ ಎಸ್.ಜಿ ನರಸಿಂಹಯ್ಯ ಇವರು ಸಂಪಿಗೆ ರಸ್ತೆಯ ಕಡೆಗೆ ಪ್ರವೇಶ ದ್ವಾರವಿರಲ್ಲಿ . ಅವರು ದೇವಸ್ಥಾನದ ಕನ್ ‌ ವೀನರ್ ‌ ಆಗಿದ್ದಾಗ ಸಂಪಿಗೆಯ ರಸ್ತೆಯ ಕಡೆಗೊಂದು ದ್ವಾರವನ್ನು ಮಾಡಿಸಿದರು . ಬೆಳೆದುನಿಂತ ಮಲ್ಲೇಶ್ವರದ ಬಡಾವಣೆಗೆ ಅದು ಅತ್ಯಾವಶ್ಯಕವಾಗಿತ್ತು . 17

ಶ್ರೀ ಶ್ರೀ ಜಯಚಾಮರಾಜ ವೊಡೆಯರ್ ‌ ವರ್ಧಂತಿಯಂದು , ಕಾಡುಮಲ್ಲೇಶ್ವರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ 18

ಕಾಡು ಮಲ್ಲೇಶ್ವರ ದೇವಾಲಯದ ಹೊರನೋಟ 19

ಇತಿಹಾಸ   ಬೆಂಗಳೂರು ನಗರದ ಹೃದಯ ಭಾಗದಲ್ಲಿ ಮಲ್ಲೇಶ್ವರಂನ 15 ನೇ ಕ್ರಾಸ್‌ನಲ್ಲಿ ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯವಿದೆ . ಕಾಡು ಮಲ್ಲೇಶ್ವರ ದೇವಸ್ಥಾನವು ಸುಮಾರು 800 ವರ್ಷಗಳಷ್ಟು ಹಳೆಯದ್ದು ಎಂದು ನಂಬಲಾಗಿದೆ . ಮಲ್ಲೇಶ್ವರಂನಲ್ಲಿ ಕಾಣ ಸಿಗುವ ಕಾಡು ಮಲ್ಲೇಶ್ವರ ದೇವಾಲಯ ಬೆಂಗಳೂರಿನ ಪ್ರಮುಖವಾದ ದೇವಾಲಯವಾಗಿದೆ . ಮಲ್ಲೇಶ್ವರಂ ಫ್ಲೇಗ್ ‌ ನಿಂದ ಹುಟ್ಟಿಕೊಂಡಿದ್ದು ಆ ಜಾಗದಲ್ಲಿ ಮೊದಲು ಜನವಸತಿ ಇರಲಿಲ್ಲ . 20

ಶತಮಾನಗಳಷ್ಟು ಹಳೆಯದಾದ ಕಾಡು ಮಲ್ಲೇಶ್ವರ ದೇವಸ್ಥಾನದಿಂದ ಮಲ್ಲೇಶ್ವರಂವು ತನ್ನ ಹೆಸರನ್ನು ಪಡೆದುಕೊಂಡಿದೆ . ಕನ್ನಡದಲಿ , ʼಕಾಡು ಮಲ್ಲೇಶ್ವರʼ ಎಂದರೆ ಕಾಡಿನ ಅಧಿಪತಿ ಮಲ್ಲೇಶ್ವರ ಎಂದು ಅರ್ಥವನ್ನು ನೋಡಬಹುದಾಗಿದೆ . ಇನ್ನೋಂದು ಅರ್ಥದಲ್ಲಿ ʼಕಾಡಿನ ಬೆಟ್ಟದ ಮೇಲಿರುವ ದೇವರುʼ ಎಂದರ್ಥ ಏಕೆಂದರೆ ಈ ದೇವಾಲಯವು ಬೆಟ್ಟದ ಮೇಲೆ ಉದ್ಭವ ಲಿಂಗವಾಗಿ ನಿರ್ಮಿಸಲ್ಟಟ್ಟಿದೆ . ದೇವರು ಮಲ್ಲಿಕಾರ್ಜುನ ಇದು ಕರ್ನಾಟಕದಲ್ಲಿ ಪೂಜಿಸಲ್ಪಟುವ ಶಿವನ ಜನಪ್ರಿಯ ರೂಪವಾಗಿದೆ 21 ಇತಿಹಾಸ

ದಂತ ಕಥೆಯಾ ಪ್ರಕಾರ ವೀಳ್ಯದಲೆ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಎಲೆ ಮಲ್ಲಪ್ಪ ಶೆಟ್ಟಿ ಎಂಬ ವರ್ಕತರು ಒಂದು ದಿನ ತಮ್ಮ ಊರಿಗೆ ಹಿಂದಿರುಗಲಾಗದೆ ಈಗಿನ ಮಲ್ಲೇಶ್ವರ ದೇವಸ್ಥಾನ ಇರುವ ಸ್ಥಳದಲ್ಲಿ ತಂಗಿದ್ದರು . ಆ ಸಂದರ್ಭದಲ್ಲಿ ಅವರು ಇಲ್ಲಿ ಇದಂತಹ ಕಲ್ಲುಗಳನ್ನು ಬಳಸಿ ಅನ್ನ ಮಾಡುವಾಗ ಅದು ರಕ್ತದ ಬಣ್ಣಕ್ಕೆ ತಿರುಗಿತು . ಅದನ್ನು ಕಂಡು ಹೆದರಿದ ಮಲ್ಲಪ್ಪ ಶೆಟ್ಟರು ಪ್ರಜ್ಞೆ ತಪ್ಪಿ ಬಿದ್ದರು . ಒಲೆಗೆ ಬಳಸಿದ್ದ ಕಲ್ಲುಗಳಲ್ಲಿ ಒಂದು ಕಲ್ಲು ಶಿವ ಲಿಂಗದ ಆಕಾರ ಪಡೆದುಕೊಂಡಿತ್ತು . ತಮ್ಮ ತಪ್ಪಿನ ಅರಿವಾದ ನಂತರ ಪರಿಹಾರವಾಗಿ ಶೆಟ್ಟರು ಅಲ್ಲಿಯೇ ದೇವಸ್ಥಾನ ನಿರ್ಮಿಸಿದರು ಎಂಬ ಐತಿಹ್ಯವಿದೆ . 22

ಶಿಲಾಶಾಸನ 23 ಈ ದೇವಾಲಯದ ಪಕ್ಕದಲ್ಲಿರುವ ಒಂದು ಬಂಡೆಯ ಮೇಲೆ ಒಂದು ಶಿಲಾಶಾಸನವನ್ನು ನಾವು ನೋಡಬಹುದಾಗಿದೆ . ಅದನ್ನು ಕಬ್ಬಿಣದ ಪಂಜರದಿಂದ ಸುತ್ತುವರೆದಿದ್ದೆ . ಅದರ ಮೇಲೆ ಶಿವಾಜಿಯ ಚಿತ್ರವೂ ಸಹ ನಾವು ನೋಡಬಹುದಾಗಿದೆ . ಈ ಶಾಸನವು ಹಳೆಗನ್ನಡದಲ್ಲಿ ಬರೆದ ಬೆಂಗಳೂರಿನ ಏಕೈಕ ಮರಾಠ ಶಾಸನ ವು ಇದಾಗಿದೆ .

ಶಿಲಾಶಾಸನ 24 ಶಿವಾಜಿಗೆ ಬೆಂಗಳೂರು ಮತ್ತು ಮಲ್ಲೇಶ್ವರಂ ಜೊತೆಗಿನ ಸಂಪರ್ಕವನ್ನು ತಿಳಿಸಿತ್ತದೆ . ಕೆಲವು ಶತಮಾನಗಳ ಶಿವಾಜಿಯ ತಂದೆ ಶಹಜಿ ಬಿಜಾಪುರ ಸುಲ್ತಾನರರ ಮೇಲೆ ಸೇವೆ ಸಲ್ಲಿಸುತ್ತಿದ್ದಾಗ , ಅವರೂ ಮೂರನೇ ಕೆಂಪೇಗೌಡ ಮೇಲೆ ದಾಳಿ ನಡೆಸಿ ಅವರನ್ನು ಯುದ್ಧದಲ್ಲಿ ಸೋಲಿಸಿದರು . ಇದರ ಪ್ರತಿಫಲವಾಗಿ ಬಿಜಾಪುರ ರಾಜ್ಯಕೆ ಸೇರಿದ ಈ ಬೆಂಗಳೂರು ಗ್ರಾಮವು ಕ್ರಿ.ಶ 1667 ನೇ ವರ್ಷದಲ್ಲಿ ಶಿವಾಜಿಯವರ ಸಹೋದರರಾದ ಎಕೋಜಿ ( ವೆಂಕೋಜಿ ) ರಾಯರ ಪಾಲಿಗೆ ಬಂದಿತು . ಮಲ್ಲೇಶ್ವರಂ 1669 CE ಏಕೋಜಿಯ ಮಲ್ಲಾಪುರ ಮಲ್ಲಿಕಾರ್ಜುನ ದೇವಾಲಯ ದಾನ ಶಾಸನ

ಮಲ್ಲೇಶ್ವರಂ 1669 CE ಏಕೋಜಿಯ ಮಲ್ಲಾಪುರ ಮಲ್ಲಿಕಾರ್ಜುನ ಇವರು 1669ನೇ ವರ್ಷದಲ್ಲಿ ಬೆಂಗಳೂರಿನ ಪ್ರದೇಶದಲ್ಲಿ ಜಾಗೀರಾಗಿ ಪಡೆಯುವ ಉದ್ಧೇಶದಿಂದ ಆ ಗ್ರಾಮದಲ್ಲಿ ಚೌತ್ ‌ ವನ್ನು ( ತೆರಿಗೆ ) ವಿಧಿಸುವ ಮಂತ್ರಿಯಾಗಿ ಬಾಜೀರಾವ ಪೇಶ್ವೆಯವರೊಂದಿಗೆ ಈ ಪ್ರಾಂತ್ಯಕ್ಕೆ ಬಂದರು . ಮಲ್ಲಾಪುರ ಮಲ್ಲಿಕಾರ್ಜುನ ಸ್ವಾಮಿಯೆಂಬ ಹೆಸರಿನಿಂದ ಪ್ರಖಾತ್ಯವಾಗಿದ್ದ ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ಯವರನ್ನು ಕಂಡು ದೇವರನ್ನು ಪೂಜಿಸಿ ತರುವಾತು . ಗ್ರಾಮಸ್ಥರ ಪ್ರಾರ್ಥನೆ ಮೇರೆಗೆ ಮಲ್ಲೇಶ್ವರದ ಬಳಿ ಇದ್ದ ಮೇದರ ನಿಂಗನಹಳ್ಳಿ ಯೆಂಬ ಗ್ರಾಮವನ್ನು ಈ ಸ್ವಾಮಿಗೆ ಮಾನ್ಯವಾಗಿ ಅರ್ಪಿಸಿದರು . 25 ಶಿಲಾಶಾಸನ

26 1669 CE ರ ಮಲ್ಲೇಶ್ವರಂನ 3D ಸ್ಕ್ಯಾನಿಂಗ್ ಮೂಲಕ ಪಡೆದ ಮಲ್ಲಾಪುರ ಹೆಸರಿನ ಡಿಜಿಟಲ್ ಚಿತ್ರ ಎಕೋಜಿಯ ಮಲ್ಲಾಪುರ ಮಲ್ಲಿಕಾರ್ಜುನ ದೇವಾಲಯ ದೇಣಿಗೆ ಶಾಸನ . ಶಿಲಾಶಾಸನ

ಇದು ಇಂದು ಭಾರತೀಯ ವಿಜ್ಞಾನ ಸಂಸ್ಥೆ ಇರುವ ಸ್ಥಳವಾಗಿರುತ್ತದೆ . ಈ ದೇವಸ್ಥಾನಕ್ಕೆ ತಮ್ಮ ರಕ್ಷಣೆ ಮತ್ತು ಪ್ರೋತ್ಸಾಹವನ್ನು ನೀಡಿದ್ದರು ಇದಕ್ಕೆ ಯಾರು ಭಂಗವನ್ನು ಉಂಟು ಮಾಡಬಾರದು ಎಂದು ಒಂದು ಶಾಸನವನು ವಿಧಿಸಿ ಕೆಳಕಂಡಂತೆ ಬರೆಯಿಸಿರುತ್ತಾರೆ . ಸೌಮ್ಯ ಸಂವತ್ಸರದ ಮಾರ್ಗಶಿರ ಶುದ್ಧ ಶ್ರೀಮನ್ ‌ ಮಲ್ಲಪುರದ ಮಲ್ಲಿಕಾರ್ಜುನ ದೇವರ ದೇವಮಾನ್ಯಕ್ಕೆ ಎಕೋಜಿರಾಯರ ಬೆಂಗಳೂರು ಮಹಾನಾಡು ಕೇಳಲಿಕ್ಕಾಗಿ ಮೇದರ ನಿಂಗನಹಳ್ಳಿಯ ಧರ್ಮಕ್ಕೆ ಕೊಟ್ಟಿತು , ಕೋಟಿ ಚಂದ್ರ ಸೂರ್ಯರು ಉಳ್ಳ ಕಾಲವೂ ಧರ್ಮಕ್ಕೆ ಕೊಟ್ಟಿನು , ಈ ಧರ್ಮಕ್ಕೆ ವಕ್ರ ಮಾಡಿದವರು ಕತ್ತೆಯಾಗಿ ಕಾಗೆಯಾಗಿ ಚಂಚಾಲರ ಜನ್ಮದಲ್ಲಿ ಹುಟ್ಟುವರು ದೇವತಾ ಶಾಪಕ್ಕೆ ಒಳಗಾಗುವವರು ಎಂಬುದು ಇಲ್ಲಿನ ಐತಿಹ್ಯ 27 ಶಿಲಾಶಾಸನ

ಈ ಶಾಸನವನ್ನು ಕ್ರಿ . ಶ 1908 ರಲ್ಲಿ ಖ್ಯಾತ ಪ್ರಾಕ್ತನ ಶಾಸ್ತ್ರಜ್ಞಗಾಗಿದ್ದ ಹಾಗೂ ಮಲ್ಲೇಶ್ವರಂ ನ ನಿವಾಸಿಗಳೇ ಆಗಿದ್ದ ಆರ್ .‌ ನರಸಿಂಹಾಚಾರ್ ‌ ರವರು ಮತ್ತೆ ಹಚ್ಚಿದರು . ಈ ಶಾಸನದಲ್ಲಿ ಉಲ್ಲೇಖ ಗೊಂಡಿರುವಂತೆ ಏಕೋಜಿ ಈ ದೇವಾಲಯಕ್ಕೆ ಮಾನ್ಯವಾಗಿ ನೀಡಿದ ಮೇದಾರ ನಿಂಗನಹಳ್ಳಿ ಇಂದಿನ “ ನ್ಯೂ ಬಿಲ್ ”‌ ರಸ್ತೆಯಲ್ಲಿ ಬರುವಂತಹದು , ಇದು ಇಂದಿನ ಬಹುತೇಕ ಐ.ಐ.ಎಸ್.ಸಿ ಕ್ಯಾಂಪಸ್ ‌ ಒಳಗೊಂಡಿರುವ ಭಾಗವಾಗಿದೆ ಎಂದು ಆರ್ ‌ ನರಸಿಂಹಾಚಾರ ರವರೇ ಗುರುತಿಸಿದ್ದಾರೆ . 28 ಶಿಲಾಶಾಸನ

ದೇವಾಲಯದ ರಚನೆ 29 ಬೆಂಗಳೂರಿನ ಹೃದಯ ಭಾಗದಲ್ಲಿ ಇರುವ ವಿಶಾಲವಾದ ಕಾಡು ಮಲ್ಲೇಶ್ವರ ಎಂಬ ದೇವಾಲಯವು ಈ ದೇವಾಲಯವನ್ನು ವಾಸ್ತಾಶಾಸ್ತ ಅನುಸಾರ ಪೂರ್ವಾಭಿಮುಖಾ ವಾಗಿ ನಿರ್ಮಿಸಲಾಗಿದೆ . ಮೊದಲು ಮಲ್ಲಪುರಂ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶಕ್ಕೆ ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಈ ದೇವಾಲಯದ ಹೆಸರನ್ನು ಇಡಲಾಯಿತು . ಮಲ್ಲಿಕಾರ್ಜುನನಾದ ಶಿವನು ಇಲ್ಲಿನ ಪ್ರಮುಖ ದೇವರು ಆದ್ದರಿಂದ ಈ ದೇವಾಲಯವನ್ನು ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಎಂದೂ ಕರೆಯುತ್ತಾರೆ . ದೇವಾಲಯವು ಎರಡು ಮುಖ್ಯ ದ್ವಾರಗಳನ್ನು ಹೊಂದಿರುವ ದೇಗುಲದ ಮಹದ್ವಾರವೂ ಪೂರ್ವಾಭಿಮುಖವಾಗಿದೆ . ಈ ದೇಗುಲವು ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದೆ . ಇಪ್ಪತ್ತನಾಲ್ಕು ಕಂಬ ಗಳ ಸಹಾಯಯದಿಂದ ನಿಂತಿರುವ ದೇಗುಲವಿದ್ದು .

ದೇವಾಲಯದ ರಚನೆ 30

ದೇವಾಲಯದ ರಚನೆ ಶ್ರಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ , ದೇವಸ್ತಾನದ ರಸ್ತೆಯಿಂದ ರಾಜಗೋಪುರ ದಿಂದ ಏಳು ಮೆಟ್ಟಿಲ್ಲುಗಳು ಮತ್ತೆ ಮುಂದೆ 43 ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನದ ದ್ವಾರವನ್ನು ತಲುಪಬಹುದು . ಮಹಾದ್ವಾರದ ಮೇಲೆ ಮುಖ್ಯಮಂಟಪದಲ್ಲಿ ಶಿವ ಪಾರ್ವತಿಯರು ನಂದಿಯ ಮೇಲೆ ಕುಳಿರಿತುವ ಮೂರ್ತಿಯೂ ಸಹ ಇದೆ 31

ದೇವಾಲಯದ ರಚನೆ 32 ಗರ್ಭಗೃಹದಲ್ಲಿ ನೆಲಮಟ್ಟದ ಪುಟ್ಟ ಉದ್ಬವ ಲಿಂಗ ವಿದ್ದು ಇದನ್ನು ಶಿವ ಮಲ್ಲಿಕಾರ್ಜುನ ಸ್ವಾಮಿಯಾಗಿ ಆರಾಧಿಸಲಾಗುತ್ತಿದೆ . ಗರ್ಭಗೃಹ ಮುಂಭಾಗದ ಆವರಣವು 24 ಕಂಬಗಳ ಸಹಾಯದಿಂದ ನಿರ್ಮಾಣಗೊಂಡಿದೆ . ಚೌಕಾಕಾರದ ಗರ್ಭಗೃಹ , ಅಂತರಾಳ , ಅರ್ಧಮಂಟಪ, ನವರಂಗ ಪ್ರದಕ್ಷಿಣ ಪತ, ಮುಖಮಂಟಪ, ಧ್ವಜಸ್ತಂಭ, ಬಲಿಪೀಠ ಹಾಗೂ ಮೂಲ ಗರ್ಭಗುಡಿಗೆ ಹೊಂದಿಕೊಂಡಂತೆ ಐದು ಗರ್ಭಗುಡಿ ಇದೆ . ಇವುಗಳಲ್ಲಿ ವಿಷ್ಣು, ಲಕ್ಷ್ಮಿ, ವಿಶ್ವೇಶ್ವರಲಿಂಗ, ಪಾರ್ವತಿ, ಸೂರ್ಯದೇವನ ಗರ್ಭಗುಡಿ ಇದೆ. ದೇವಾಯಲದ ಮುಂದೆ ಅಸ್ವತಕಟ್ಟೆ ಇದೆ . ಅದರ ಪಕ್ಕದಲ್ಲಿ ಹಲವಾರು ನಾಗರಕಲ್ಲು ಗಳನ್ನು ಪ್ರತಿಸ್ಥಾಪನೆಯನ್ನು ಮಾಡಲಾಗಿದೆ .

ದೇವಾಲಯದ ರಚನೆ 33 ದೇವಾಲಯದ ಮುಂಭಾಗದಲ್ಲಿರುವ ಧ್ವಜಸ್ತಂಭ ಮತ್ತು ಬಸವನ ಮೂರ್ತಿ

ಪ್ರವೇಶದ್ವಾರ 34 ಕಾಡು ಮಲ್ಲೇಶ್ವರ ದೇವಸ್ಥಾನದ ಪುರಾತನ ಮಹಾದ್ವಾರವಿರುವುದು ಪೂರ್ವಾಭಿಮುಖವಾಗಿದೆ. ಗರ್ಭಗುಡಿಗೆ ಕರೆದೊಯ್ಯಲು ಕಲ್ಲಿನ ಮೆಟ್ಟಿಲುಗಳ ಉದ್ದನೆಯ ಹಾರಾಟವಿತ್ತು . ಕಲ್ಲಿನ ಮೆಟ್ಟಿಲುಗಳ ಸುತ್ತಲು ಹಳೆಯ ಮರಗಳಿಂದ ಕೂಡಿದ ಹಚ್ಚ ಹಸಿರಿನ ಉದ್ಯಾನವಿದೆ . ಆಧುನಿಕತೆಯಿಂದ ನಂಬಿಕೆಯಿಂದ ರಕ್ಷಿಸಲ್ಪಟ್ಟ ಹಳೆಯ ʼಕಾಡುʼ ವಿನ ಒಂದು ತುಣುಕು , ಸಾಂದರ್ಭಿಕವಾಗಿ ದೇವಾಲಯದ ಗಂಟೆಯ ಮೊಳಗುವಿಕೆ , ಪಕ್ಷಿಗಳ ಚಿಲಿಪಿಲಿ ಮತ್ತು ಬಿರುಗಾಳಿಯು ಕಣ್ಣನ್ನು ಪ್ರವೇಶಿಸಿದಂತೆ ಭಾಸವಾಗುತ್ತದೆ . ಶ್ರೀ ಕಾಡುಮಲ್ಲೇಶ್ವರ ದೇವಸ್ಥಾನದ ಎದುರುಗಡೆ ಆಗ್ನೇಯ ದಿಕ್ಕಿನಲ್ಲಿ ಇದೇ ದೇವಸ್ಥಾನಕ್ಕೆ ಸೇರಿದ ಒಂದು ಕಲ್ಯಾಣಿಯೂ ಅದರ ಸುತ್ತ ಕಲ್ಲುಗೋಡೆಗಳೂ ಇವೆ .

ಪ್ರವೇಶದ್ವಾರ 35

ಗರ್ಭಗೃಹ ಅಂತರಾ ಳ ದೇವಾಲಯದ ಗರ್ಭಗೃಹ , ಅಂತರಾಳ , ಅರ್ಧಮಂಟಪ ಮತ್ತು ನವರಂಗ ಗಳು, ಪ್ರಾರಂಭದ ಹಂತದ ರಚನೆ , ಇವು ಇಂದಿಗೂ ತಮ್ಮ ಮೂಲ ಸ್ವರೂಪಗಳಲ್ಲಿಯೇ ಉಳಿದುಕೊಂಡಿವೆ . ಗರ್ಭಗೃಹವು ಚೌಕಾಕಾರ ದ ವಿನ್ಯಾಸದಲ್ಲಿದೆ . ಎತ್ತರವಲ್ಲದ ಶಿವಲಿಂಗವಿದೆ . ಗರ್ಭಗೃಹದ ಪ್ರವೇಶದ್ವಾರವು ವಿವಿಧ ಕಸೂರಿ ಕಲೆಯ ಕೆತ್ತನೆಗಳಿಂದ ಕೂಡಿದೆ . 36

ಗರ್ಭಗೃಹ ಅಂತರಾ ಳ ಗರ್ಭಗೃಹದ ಪ್ರವೇಶ ದ್ವಾರ ಮಧ್ಯದ ಭಾಗದಲ್ಲಿ ನಟರಾಜ ಕೆತ್ತೆನೆ ಯನ್ನು ಮಾಡಲಾಗಿದೆ . ಹಾಗೆಯೇ ಪ್ರವೇಶದ್ವಾರದ ಕೆಳಭಾಗದಲ್ಲಿ ಮದನಿಕೆ ಯನ್ನು ಕೆತ್ತನೆಯನ್ನು ಮಾಡಿದ್ದಾರೆ . ಗರ್ಭಗೃಹವನ್ನು ಗೋಡೆಯಿಂದ ನಿರ್ಮಿಸಿ ಅದರ ಮುಂಭಾಗದ ಪ್ರವೇಶದ್ವಾರವನ್ನು ಪಂಚಲೋಹಗಳಿಂದ ಪಕ್ಷಿಗಳು ಹಾಗೂ ವಿವಿಧ ರೀತಿಯ ಹೂ ಬಳ್ಳಿ ಚಿತ್ತಾರವನ್ನು ಕೆತ್ತಲಾಗಿದೆ . ಪ್ರಧಾನ ಗರ್ಭಗೃಹದಲ್ಲಿ ಉದ್ಬವಲಿಂಗವಿದೆ . 37

ಗರ್ಭಗೃಹ ಅಂತರಾ ಳ 38 ಗರ್ಭಗುಡಿಯ ಬಲಭಾಗದಲ್ಲಿ ಶ್ರಿ ಪ್ರಸನ್ನ ಗಣಪತಿ ಗುಡಿಯು ಇದೆ . ಈ ಗುಡಿಯು ಪಂಚಲೋಹದಿಂದ ನಿರ್ಮಿಸಿದ ದ್ವಾರವನ್ನು ಹೊಂದಿದೆ . ಪ್ರವೇಶದ್ವಾರದ ಮಧ್ಯಭಾಗದಲ್ಲಿ ಗಣಪತಿಯ ಚಿತ್ತಾರವನ್ನು ಕೆತ್ತನೆ ಮಾಡಿದ್ದಾರೆ . ಪ್ರವೇಶದ್ವಾರದ ಸುತ್ತಲೂ ವಿವಿಧ ರೀತಿಯ ಹೂಬಳ್ಳಿ , ಮದನಿಕೆಯರು , ಪಕ್ಷಿಗಳನ್ನು ಕೆತ್ತನೆ ಮಾಡಲಾಗಿದೆ . ಗರ್ಭಗುಡಿ ಬಲಭಾಗದ ಶ್ರೀ ಪ್ರಸನ್ನ ಗಣಪ

ಬಾಲಸುಬ್ರಹ್ಮಣ್ಯನ ಮೂರ್ತಿ ಕಾಶಿ ವಿಶ್ವನಾಥ ದೇವರು ಭ್ರಮರಾಂಭ ಅಮ್ಮನವರು 39 ಗರ್ಭಗೃಹ ಅಂತರಾಳ

ಉಪದೇಗುಲಗಳು ಈ ದೇವಾಲಯವು ಹಲವಾರು ಉಪ ದೇಗುಲಗಳನ್ನು ಹೊಂದಿದೆ . ದೇವಸ್ಥಾನದ ಒಳಾಂಗಣದ ಪ್ರದಕ್ಷಿಣ ಪಥದಲ್ಲಿ ಬಂದಾಗ ಶ್ರೀ ದಕ್ಷಿಣಾಮೂರ್ತಿ , ಅನಂತರಶ್ರೀವಳ್ಳಿ ಮತ್ತು ದೇವಸೇನ ಸಹಿತ ಶ್ರೀ ಸುಬ್ರಮಣ್ಯ ಸ್ವಾಮಿಯ ಗುಡಿ ಇದೆ . ಪಕ್ಕದಲೇ ಶ್ರೀ ಚಂಡಿಕೇಶ್ವರ ಸ್ವಾಮಿ ಯ ಸನ್ನಿಧಿ . ಎಡಕ್ಕೆ ನಾಗರ ಕಟ್ಟೆ ಇದೆ . ಶ್ರಿ ಕನಕದುರ್ಗ ಅಮ್ಮನವರು , ಸಣ್ಣ ಯಾಗ ಶಾಲೆ , ಆಂಜನೇಯ ದೇಗುಲವಿದೆ . ದೇವಸ್ಥಾನದ ಈಶ್ಯಾನ ಮುಲೆಯಲ್ಲಿ ಶ್ರೀ ಕಾಲಭೈರವ ದೇವರಿದ್ದಾರೆ . ಶ್ರಿ ಗಣಪತಿ , ಶ್ರೀ ಅರುಣಾಚಲೇಶ್ವರ ಮತ್ತು ಆಸ್ರಿ ಪಾರ್ವತಿ ಅವರ ಉಪದೇಗುಲವಿದೆ ಉಪಗುಡಿಗಳ ನಂತರ ನವಗ್ರಹ ಗಳ ಸನ್ನಿಧಿ ಇದೆ . 40

ಉಪದೇಗುಲಗಳು 41 ಶ್ರೀ ದಕ್ಷಿಣ ಮೂರ್ತಿ ದೇವರು ಶ್ರೀ ಪಾರ್ವತಿ ಅಮ್ಮನವರು ಶ್ರೀ ಆಂಜನೇಯ ಸ್ವಾಮಿ

ಉಪದೇಗುಲಗಳು 42 ಶ್ರೀ ಚಂಡಿಕೇಶ್ವರ ದೇವರು ಶ್ರಿ ವಲ್ಲೀ ದೇವಸೇನಾ ಸಮೇತ ಸುಬ್ರಹ್ಮಣ್ಯ ಸ್ವಾಮಿ ಶ್ರಿ ಕಾಲಭೈವರ ಸ್ವಾಮಿ

ಉಪದೇಗುಲಗಳು 43

ದೇವಾಲಯದ ಮುಂದೆ ಅಶ್ವತಕಟ್ಟೆ ಇದೆ ಅದರ ಪಕ್ಕದಲ್ಲಿ ಹಲವಾರು ನಾಗರಕಲ್ಲುಗಳನ್ನು ಪ್ರತಿಸ್ಥಾಪನೆ ಮಾಡಲಾಗಿದೆ 44 ಉಪದೇಗುಲಗಳು

45 ಪ್ರದಕ್ಷಿಣ ಪಥ ಈ ದೇವಾಲಯವು ವಿಶಾಲವಾದ ಪ್ರದಕ್ಷಿಣ ಪಥವನ್ನು ಹೊಂದಿದೆ . ಗರ್ಭಗೃಹದ ಮುಂಭಾಗದಲ್ಲಿಯೂ ಸಹ ಇದೆ . ದೇವಾಲಯದ ಸುತ್ತಲೂ ಪ್ರದಕ್ಷಿಣ ಪಥವನ್ನು ನಾವು ನೋಡಬಹುದಾಗಿದೆ .

ಮಲ್ಲೇಶ್ವರಂನ ಹೃದಯ ಭಾಗದಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯವು ಆಕರ್ಷಕ ರಾಜಗೋಪುರ ವನ್ನು ಹೊಂದಿದೆ . ಇದು ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದೆ . ಆಕರ್ಷಕ ವಿಮಾ ನ ಗೋಪುರ ವನ್ನು ಹೊಂದಿದೆ . ರಾಜಗೋಪುರವು ವಿವಿಧ ಕಸೂರಿ ಕಲೆಯ ಕೆತ್ತನೆಗಳಿಂದ ಕೂಡಿದೆ. ಪ್ರವೇಶದ್ವಾರದ ಮೇಲೆ ಮದನಿಕೆಯನ್ನು ಕೆತ್ತನೆಯನ್ನು ಮಾಡಿದ್ದಾರೆ . 46 ವಾಸ್ತುಶಿಲ್ಪ

ಈ ದೇವಾಲಯವು ತನ್ನ ವಿಶಿಷ್ಟ ವಾಸ್ತುಶಿಲ್ಪ ಶೈಲಿಗೆ ಹೆಸರುವಾಸಿಯಾಗಿದೆ , ಸಂಕೀರ್ಣವಾದ ಕೆತ್ತನೆಗಳು , ಎತ್ತರದ ಗೋಪುರಗಳು ( ಪ್ರವೇಶ ಗೋಪುರಗಳು ) ಮತ್ತು ಅದರ ಆವರಣದೊಳಗೆ ಪ್ರಶಾಂತವಾದ ಕೊಳವಿದೆ . ಎತ್ತರದ ಪ್ರದೇಶದಲ್ಲಿ ನೆಲೆಗೊಂಡಿರುವ ಈ ದೇವಾಲಯವು ದ್ರಾವಿಡ ಶೈಲಿಯಲ್ಲಿ ಕೆತ್ತಿದ ಕಂಬಗಳನ್ನು ಹೊಂದಿದೆ . ಶ್ರೀ   ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ   ವಾಸ್ತುಶಿಲ್ಪ ಮತ್ತು ಸಂಕೀರ್ಣವಾದ ಕೆತ್ತನೆಗಳಿಂದ ಕೂಡಿದೆ . 47 ವಾಸ್ತುಶಿಲ್ಪ

ದೇವಾಲಯದ ಮುಂಭಾಗ ದೇವಾಲಯದ ಸುತ್ತಲಿನ ಪ್ರಹಂಗಣ 48 ವಾಸ್ತುಶಿಲ್ಪ

49 ಈ ದೇವಾಲಯವು ಐತಿಹಾಸಿಕ ಮತ್ತು ಕಲಾತ್ಮಕ ಮಹತ್ವವನ್ನು ಹೆಚ್ಚಿಸುತ್ತದೆ . ಇದು ಅಮೂಲ್ಯವಾದ ಸಾಂಸ್ಕೃತಿಕ ಪರಂಪರೆಯ ತಾಣವಾಗಿದೆ . ಈ ದೇವಾಲಯಕ್ಕೆ ಮೆಟ್ಟಿಲುಗಳ ಸಮೂಹ ವು ಕಾರಣವಾಗುತ್ತದೆ . ದೇವಾಲಯದ ವಿಶಿಷ್ಟತೆಯೆಂದರೆ ಅದು ಹೇರಳವಾದ ಹಸಿರಿನಿಂದ ಆವೃತವಾಗಿದೆ . ದೇವಸ್ಥಾನದ ಪರಿಸರದಲ್ಲಿ ಬಿಲ್ವ ಪತ್ರೆ . ಪಾರಿಜತ , ಶ್ರೀಗಂಧ , ಬೇವು ಸೇರಿದಂತೆ ಹಲವು ಜಾತಿಯ ಮರಗಿಡಗಳನ್ನು ಬೆಲಿಸಿ ದೇವಾಲಯದ ಪರಿಸವರನ್ನು ಸುಂದರಗೊಳಿಸಿದೆ . ವಾಸ್ತುಶಿಲ್ಪ

ದೇವಾಲಯದ ಆವರಣದಲ್ಲಿರುವಂತಹ ಮರಗಳು 50 ವಾಸ್ತುಶಿಲ್ಪ

ಹಬ್ಬಗಳ ಮಹತ್ವ ಉತ್ಸವ ವಾಹನಗಳು ಇಂದು ಈ ಕಾಡು ಮಲ್ಲೇಶ್ವರ ದೇವಾಲಯ ಈ ಭಾಗದ ಜನರ ಸಾಂಸ್ಕೃತಿಕ ಉತ್ಸವಗಳ ಕೇಂದ್ರವೂ ಆಗಿದೆ . ಶ್ರೀ ಕಾಡುಮಲ್ಲೇಶ್ವರದಲ್ಲಿ ಶ್ರೀಶೈಲ ಸದೃಶ ಸ್ವಯಂಭು ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಶಿವರಾತ್ರಿಯ ಸಮಯದಲ್ಲಿ ವಾರ್ಷಿಕ ಕಲ್ಯಾಣೋತ್ಸವ ನಡೆಯುತ್ತದೆ . ಅಂಕುರಾರ್ಪಣೆ , ಗಣಯಾಗ ದೊಂದಿಗೆ ಪ್ರಾರಂಭವಾಗಿ ಕಲ್ಯಾಣೋತ್ಸವಕ್ಕೆ ಅಷ್ಟದಿಕ್ಪಾಲಕರನ್ನು ಮತ್ತು ದೇವತೆಗಳನ್ನು ಆಹ್ವಾನಿಸಿ ಧ್ವಜಾರೋಹನ ಮಾಡಲಾಗುವುದು . ಪ್ರತಿನಿತ್ಯವೂ ವಿವಿಧ ವಾಹನಗಳ ಮೇಲೆ ಉತ್ಸವಗಳು ನಡೆಯುತ್ತದೆ . ವೃಭಷ ವಾಹನ, ನಂದಿವಾಹನ , ಹಂಸ ವಾಹನ, ಗಜ ವಾಹನ, ಸಿಂಹ ವಾಹನ ಮತ್ತು ಕೈಲಾಸ ವಾಹನ ಹತ್ತು ತಲೆಗಳ ರಾವಣ ಈಶ್ವರ ಮತ್ತು ಪಾರ್ವತಿಯರನ್ನು ತನ್ನ ತಲೆಗಳ ಮೇಲೆ ಹೊತ್ತುಕೊಂಡು ಹೋಗುತ್ತಾನೆ 51

ಹಬ್ಬಗಳ ಮಹತ್ವ 52 ಸಿಂಹ ವಾಹನ ವೃಷಭ ವಾಹನ ಹಂಸ ವಾಹನ

ಶೇಷ ವಾಹನ ಗಜ ವಾಹನ ಹಬ್ಬಗಳ ಮಹತ್ವ 53 ಅಶ್ವ ವಾಹನ ಉತ್ಸವ ವಾಹನಗಳು

ಹಬ್ಬಗಳ ಮಹತ್ವ 54 ಕೈಲಾಸ ವಾಹನ ಹತ್ತು ತಲೆಗಳ ರಾವಣ ಈಶ್ವರ ಮತ್ತು ಪಾರ್ವತಿಯನ್ನು ತನ್ನ ತಲೆಗಳ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು . ಬ್ರಹ್ಮ ರಥೋತ್ಸವದ ಉತ್ಸವ ವಾಹನ

ಹಬ್ಬಗಳ ಮಹತ್ವ 1. ಬ್ರಹ್ಮರಥೋತ್ಸವ ಈ ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವಗಳೆಂದರೆ ಧನುರ್ಮಾಸದಲ್ಲಿ ನಡೆಯುವ ವಿಶೇಷ ಪೂಜೆ ಕೈಂಕರ್ಯಗಳು , ಮಾಘ ಮಾಸದಲ್ಲಿ ನಡೆಯುವ ಪೂಜಾ ಉತ್ಸವಗಳು ಶಿವರಾತ್ರಿಯಂದು ನಡೆಯುವ ಬ್ರಹ್ಮರಥೋತ್ಸವ ಹಾಗೂ ನವರಾತ್ರಿ ಸಂದರ್ಭದಲ್ಲಿ ನಡೆಯುವ ಮಾತೃದೇವತೆಗಳ ಪೂಜಾ ಉತ್ಸವ . ಮಹಾಶಿವರಾತ್ರಿಯಲ್ಲಿ ಕಲ್ಯಾಣೋತ್ಸವ ಮತ್ತು ಬ್ರಹ್ಮರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ . ಶ್ರಿ ಕಾಡು ಮಲ್ಲೇಶ್ವರದಲ್ಲಿ ಶ್ರೀಶೈಲ ಸದೃಶ ಸ್ವಯಂಭು ಶ್ರಿ ಮಲ್ಲಿಕಾರ್ಜುನ ಸ್ವಾಮಿಗೆ ಶಿವರಾತ್ರಿಯ ಸಮಯದಲ್ಲಿ ವಾರ್ಷಿಕ ಕಲ್ಯಾಣೋತ್ಸವ ನಡೆಯುತ್ತದೆ . 55

ಹಬ್ಬಗಳ ಮಹತ್ವ ಗಣಪತಿ ಹೋಮದಿಂದಲೇ ಯಾಗಶಾಲೆಯ ಪೂಜೆಗಳು ಸಹ ಆರಂಭವಾಗುತ್ತದೆ . ಅಂಕುರಾರ್ಪಣೆ , ಗಣಯಾಗದೊಂದಿಗೆ ಪ್ರಾರಂಭವಾಗಿ ಕಲ್ಯಾಣೋತ್ಸವವನ್ನು ಆರಂಬಿಸಲಾಗಿತ್ತದೆ . ಮಹಾಶಿವರಾತ್ರಿಯ ಈ ಬ್ರಹ್ಮರಥೋತ್ಸವವನ್ನು ಕಣ್ಣುಂಬಿಕೊಳ್ಳಲು ನಗರದ ವಿವಿಧ ಕಡೆಗಳಿಂದ ಜನರು ಬಂದು ಸೇರುತ್ತಾರೆ . ಶಿವರಾತ್ರಿಯಂದು ಶಿವನಿಗೆ ವಿವಿಧ ಬಗೆಯ ಪೂಜೆಗಳು ಸಮರ್ಪಣಗೊಳ್ಳುತ್ತವೆ . 56

ಹಬ್ಬಗಳ ಮಹತ್ವ ಬೆಳಿಗ್ಗೆ 3 ರಿಂದ 6 ರವರೆಗೆ ನಮಗೆ ಪೂಜೆ ಇರುತ್ತದೆ ಮತ್ತು ಭಕ್ತರು ದೇವಾಲಯದಲ್ಲಿ ಕಿಕ್ಕಿರಿದು ಸೇರುತ್ತಾರೆ ಮೊದಲಿಗೆ ಗಣಪತಿ ಹೋಮ ಮತ್ತು ಉತ್ಸವದಿಂದ ಆರಂಭಗೊಳ್ಳುತ್ತದೆ . ಮರು ದಿವಸ ಈಶ್ವರ , ನಂದಿ ಮತ್ತು ತ್ರಿಶೂಲವಿರುವ ಧ್ವಜವನ್ನು ಹಾರಿಸಲಾಗುತ್ತದೆ . ಸಂಜೆ ವಾಸ್ತಶಾಂತಿ ಮತ್ತು ಪ್ರವೇಶ ಬಲಿ ಇರುತ್ತದೆ. ನಂತರ ನಂದಿ ಉತ್ಸವವನ್ನು ಆರಂಭಿಸುತ್ತಾರೆ . 57

ಹಬ್ಬಗಳ ಮಹತ್ವ ರಾತ್ರಿಯ ಜಾಗರಣೆಗೆ ಗಿರಿಜಾ ಕಲ್ಯಾಣ ನಾಟಕವಿರುತ್ತದೆ . ನವರಾತ್ರಿ ಸಮಯದಲ್ಲಿ ಪಂಚಾಮೃತ ಅಭಿಷೇಕ ವನ್ನು ಮಾಡಲಾಗುತ್ತದೆ . ಸರ್ವೋಪಚಾರ ಪೂಜೆಗಳನ್ನು ಮಾಡಲಾಗುತ್ತದೆ . ಬ್ರಹ್ಮರಥೋತ್ಸವಕ್ಕೂ ಮುನ್ನ ಒಂದು ವಾರದಿಂದಲೇ ಪೂಜಾ , ಹೋಮ , ಹವನಗಳು ನಡೆಯುತ್ತವೆ . ಆ ದಿನ ಸುಮಾರು ಒಂದು ಲಕ್ಷ ಜನರು ಬರುತ್ತಾರೆ . 58

ಹಬ್ಬಗಳ ಮಹತ್ವ ರಥೋತ್ಸವವು ದೇವಾಲಯದ ಗೋಪುರದಿಂದ ಆರಂಭಗೊಂಡು ಮಲ್ಲೇಶ್ವರಂ 18ನೇ ಅಡ್ಡರಸ್ತೆವರೆಗೂ ಮೆರವಣಿಗೆ ಮಾಡಲಾಗುತ್ತದೆ . ಈ ಸಮಯದಲ್ಲಿ 20 ರಿಂದ 25 ಜನ ಪುರೋಹಿತರು ಪಾಲ್ಗೋಳುತ್ತಾರೆ . ರಥವನ್ನು ಎಳೆಯಲು ದೇವಾಲಯದ ಕಮಿಟಿ ಸದಸ್ಯರು ಹಾಗೂ ಸ್ಥಳೀಯ ಜನರು ಪಾಲ್ಗೋಳ್ಳುತ್ತಾರೆ . 59

ಹಬ್ಬಗಳ ಮಹತ್ವ 60 2. ಕಡಲೇಕಾಯಿ ಪರಿಷೆ ಗಂಗಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ 20 ಅಡಿ ಅಗಲ , 22 ಅಡಿ ಎತ್ತರದ ನಂದಿ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು , 800 ಕೆ.ಜಿ . ಕಡಲೆಕಾಯಿಗಳಿಂದ ಅಲಂಕಾರ ಮಾಡಲಾಗಿದೆ .

ಹಬ್ಬಗಳ ಮಹತ್ವ ಈ ದೇವಾಲಯದ ಮತ್ತೊಂದು ವಿಶ್ಷಿಷ್ಟವೆಂದರೆ ಅದು ಕಡಲೇಕಾಯಿ ಪರೀಷೆ . ಇದು ಶ್ರಾವಣ ಮಾಸ ಮತ್ತು ಆಶ್ವಯುಜ ಮಾಸದ ಸಾಲು ಸಾಲು ಹಬ್ಬಗಳು ಮುಗಿದು ಇನ್ನೇನು ಮಾಗಿಯ ಚಳಿ ನಮ್ಮೆಲ್ಲರನ್ನು ಅಪ್ಪುವುದಕ್ಕೆ ಶುರುವಾಗುತ್ತಿದ್ದಂತೆಯೇ ಬರುವುದೇ   ಕಾರ್ತೀಕ ಮಾಸ .  ಶೈವಾರಾಧಕರಿಗೆ ಪ್ರತೀ ಕಾರ್ತೀಕ ಸೋಮವಾರವೂ ಅತ್ಯಂತ ಪುಣ್ಯಕರವಾದ ದಿನ. ಬೆಂಗಳೂರಿನವರಿಗೆ   ಬಸವನಗುಡಿಯ ಪ್ರತಿಷ್ಠಿತ ಕಡಲೇಕಾಯಿ ಪರೀಷೆಯಂತೆಯೆ ನಮ್ಮ ಮಲ್ಲೇಶ್ವರದಲ್ಲಿ ನಡೆಯುವ ಕಡಲೇಕಾಯಿ ಪರೀಷೆಯು ಎಲ್ಲಾರ ಗಮನವನ್ನು ಸೆಳೆಯುತ್ತದೆ . 61

ಹಬ್ಬಗಳ ಮಹತ್ವ ಮಲ್ಲೇಶ್ವರ ಮತ್ತು ಯಲಹಂಕದ ವೆಂಕಟಾಲ , ವಿದ್ಯಾರಣ್ಯಪುರದ ಬಡಾವಣೆಗಳಲ್ಲಿಯೂ ಕಡಲೇ ಕಾಯಿ ಪರೀಷೆಯನ್ನು ಆಚರಿಸಲು ಆರಂಭಿಸಿದರು .  ಕಡಲೆಕಾಯಿ ಪ ರೀ ಷೆ ನಡೆಯಲಿದೆ. ಕಾಡುಮಲ್ಲೇಶ್ವರ ಗೆಳೆಯರ ಬಳಗ ಮುಜಾರಾಯಿ ಇಲಾಖೆ ಹೆಸರಿನಲ್ಲಿ ಬೆಂಗಳೂರು ನಗರ ಮಲ್ಲೇಶ್ವರಂ 15ನೇ ಕ್ರಾಸ್‌ನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಶುಭಾ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಕಡಲೆಕಾಯಿ ಪ ರೀ ಷೆ ನಡೆಯಲಿದೆ.  ಮಲ್ಲೇಶ್ವರ ಬಡಾವಣೆಯವರು ಪ್ರತೀ ವರ್ಷದ ಕಾರ್ತೀಕ ಮಾಸದ ಮೂರನೇ ಸೋಮವಾರಕ್ಕೆ ಮುಂಚಿನ ಎರಡು ದಿನಗಳು ಅಂದರೆ ಕಾರ್ತೀಕ ಮಾಸದ ಎರಡನೇ ಶನಿವಾರ , ಭಾನುವಾರ ಮತ್ತು ಮೂರನೇ ಸೋಮವಾರ   ಮಲ್ಲೇಶ್ವರದ 15ನೇ ಅಡ್ಡರಸ್ತೆ , ದೇವಸ್ಥಾನಗಳ ಸಂಕೀರ್ಣವಾದ ಕಾಡು ಮಲ್ಲೇಶ್ವರ ಸ್ವಾಮಿಯ ಎದುರಿಗೆ ಅತ್ಯಂತ ಸಂಭ್ರಮ ಸಡಗರಗಳಿಂದ ವಿಜೃಂಭಣೆಯಿಂದ ಸುಮಾರು 9 ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ . ಪ್ರತೀ ವರ್ಷಕ್ಕಿಂತಲೂ ಮತ್ತಷ್ಟೂ ಮಗದಷ್ಟೂ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ . 62

ಹಬ್ಬಗಳ ಮ ಹತ್ವ ಕಾಡುಮಲ್ಲಿಕಾರ್ಜುನ ದೇವಾಲಯ ಸನ್ನಿಧಿಯಲ್ಲಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಳೆದ 7 ವರ್ಷಗಳಿಂದ ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ನೇತೃತ್ವದಲ್ಲಿ ಆಚರಣೆ ಮಾಡಿಕೊಂಡ ಬರಲಾಗುತ್ತಿದೆ . ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಮಾತನಾಡಿ ಕಡಲೆಕಾಯಿ ಪರೀಷೆಯಲ್ಲಿ ಕರ್ನಾಟಕ ತಮಿಳುನಾಡು , ತೆಲಂಗಾಣ , ಆಂದ್ರಪ್ರದೇಶ ರಾಜ್ಯಗಳಿಂದ 350 ಮಳಿಗೆಗಳನ್ನು ರೈತರು ಹಾಕಿದ್ದಾರೆ . 63

2023ನೇ ಸಾಲಿನ ಕಾಡು ಮಲ್ಲೇಶ್ವರ ಸ್ವಾಮಿ ಕಡಲೆಕಾಯಿ ಪರಿಷೆಗೆ ಶಾಸಕ ಮುನಿರತ್ನ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ   ಮಹೇಶ್ ಜೋಶಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್ ಜಂಟಿಯಾಗಿ ಉದ್ಘಾಟನೆ ಮಾಡಿದರು . ಬಸವನಗುಡಿಯಲ್ಲಿ ಜರುಗುವ ಮಾದರಿಯಲ್ಲಿಯೇ ಇಲ್ಲಿಯೂ ಕಡಲೆಕಾಯಿ ಪರಿಷೆಯನ್ನು ಆಯೋಜಿಸಲಾಗಿದೆ . 10 ವಿವಿಧ ಬಗೆಯ ಕಡಲೆಕಾಯಿ ಮಾರಾಟ , ರೈತರಿಂದ ನೇರ ಗ್ರಾಹಕರಿಗೆ ಮಾರಾಟ   ಮತ್ತು ವಿವಿಧ ಕರಕುಶಲ ವಸ್ತುಗಳು ಮಾರಾಟದ ವ್ಯವಸ್ಥೆ ಮಾಡಲಾಗಿದೆ . 64 ಹಬ್ಬಗಳ ಮಹತ್ವ

ಕಾಡುಮಲ್ಲೇಶ್ವರ ದೇವಾಲಯದ ಗರ್ಭಗೃಹ ಮತ್ತು ಅದರ ಉಪ ದೇಗುಲಗಳಿಗೆ ಕಡಲೇಕಾಯಿಯ ವಿಶೇಷ ಅಲಂಕಾರ 65 ಹಬ್ಬಗಳ ಮಹತ್ವ

ಕಾಡು ಮಲ್ಲೇಶ್ವರ ದೇವಸ್ಥಾನದ ಎದು ರು ಗಿರುವ 15ನೇ ಅಡ್ಡ ರಸ್ತೆಯಿಂದ ಹಿಡಿದು 8 ನೇ ಅಡ್ಡರಸ್ತೆಯ ಇಕ್ಕೆಲಗಳಲ್ಲಿ ತರತರಹದ ಕಡಲೆಕಾಯಿಗಳು , ಕಡಲೇಪುರಿ , ಬೆಂಡು , ಬತ್ತಾಸು , ಕಲ್ಯಾಣ ಸೇವೆ , ಚೌಚೌ ಹೀಗೆ ಎಲ್ಲವೂ ಒಂದೇ ಜಾಗದಲ್ಲಿ ಸಿಗುತ್ತದೆ. ಜಾತ್ರೆ ಎಂದರೆ , ಬಣ್ಣ ಬಣ್ಣದ ಉಸಿರುಬುಡ್ಡೆ ( ಬೆಲೂನ್ ) ಗಿರಿಗಿಟ್ಟಲೆ , ಬೊಂಬಾಯಿ ಮಿಠಾಯಿ , ಕಬ್ಬಿನ ಹಾಲು , ತರತರಹದ ಪೀಪೀಗಳು , ಮಣ್ಣಿನ ಗೊಂಬೆಗಳು , ಹೆಣ್ಣುಮಕ್ಕಳಿಗೆ ಬಣ್ಣ ಬಣ್ಣದ ಬಳೆಗಳು , ಹೀಗೇ ಒಂದೇ ಎರಡೇ ಈ ಎಲ್ಲವೂ ಒಂದೇ ಕಡೆ ಸಿಗುವ ಸ್ಥಳವಾಗಿದೆ . ಸುಮಾರು ದಿನಗಳಿಂದ ಬೆಂಗಳೂರಿಗರು ಮರೆತು ಹೋಗಿರುವ   ಪಿಂಗಾಣಿ ವಸ್ತುಗಳು ಮತ್ತು ಉಪ್ಪಿನ ಕಾಯಿ ಜಾಡಿಗಳು , ಅಲ್ಯೂಮಿನಿಯಂ ಪಾತ್ರೆಗಳು ,  ಬಣ್ಣ ಬಣ್ಣದ ಮಕ್ಕಳ ಆಟಿಕೆಗಳು , ಬಣ್ಣ ಬಣ್ಣದ ಗೋಣೀಚೀಲದ ಚೀಲಗಳು ಇಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ . 66 ಹಬ್ಬಗಳ ಮಹತ್ವ

ಕಾಡುಮಲ್ಲೇಶ್ವರ ದೇವಾಲಯದಲ್ಲಿ ನಡೆಯಲ್ಲಿರುವ ಕಡಲೇಕಾಯಿ ಪರೀಷೆಯಲ್ಲಿ ಲಭ್ಯವಿರುವ ತಿಂಡಿತಿನಿಸ್ಸುಗಳು , ಆಟಿಕೆಗಳು 67 ಹಬ್ಬಗಳ ಮಹತ್ವ

68 ಕಾಡುಮಲ್ಲೇಶ್ವರ ದೇವಾಲಯದಲ್ಲಿ ನಡೆಯಲ್ಲಿರುವ ಕಡಲೇಕಾಯಿ ಪರೀಷೆಯಲ್ಲಿ ಲಭ್ಯವಿರುವ ಆಟಿಕೆಗಳು , ಸಿಹಿತಿಂಡಿಗಳು ಹೆಣ್ಣು ಮಕ್ಕಳ ಬಣ್ಣಬಣ್ಣವಾದ ಬಳೆಗಳು ಹಬ್ಬಗಳ ಮಹತ್ವ

ಮೇಳ ಎಂದ ಮೇಲೆ ಹಿಮ್ಮೇಳವು ಇರಲೇ ಬೇಕಲ್ಲವೇ . ಅದಕ್ಕೆ ತಕ್ಕಂತೆ ಮೂರೂ ದಿನಗಳೂ ಹೆಸರಾಂತ ಕಲಾವಿದರುಗಳ ಕಾರ್ಯಕ್ರಮಕ್ಕೆ ಜನ ಕಿಕ್ಕಿರಿದು ತುಂಬಿದ್ದು ಆಯೋಜಕರಿಗೆ ಸಾರ್ಥಕತೆ ನೀಡುವುದರಲ್ಲಿ ಸಂದೇಹವೇ ಇಲ್ಲ . ಮೊದಲನೇ ದಿನ ದಾಸ ವಚನ ಸಂಗಮ   ಕಾರ್ಯಕ್ರಮವಿದ್ದರೆ , ಎರಡನೆಯ ದಿನ ಡಾ.ರಾಜ್ ಮರೆಯಲಾರದ ಗೀತೆಗಳು   ಕಾರ್ಯಕ್ರಮದಲ್ಲಿ ಅರವತ್ತು , ಎಪ್ಪತ್ತು ಮತ್ತು ಎಂಭತ್ತರ ದಶಕದ ಸುಮಧುರ ಹಾಡುಗಳು ಎಲ್ಲರನ್ನೂ ಮೂರು ದಶಕದ ಹಿಂದಿನ ಪ್ರಪಂಚಕ್ಕೆ ಕೊಂಡು ಹೋಗಿದ್ದಂತೂ ಸುಳ್ಳಲ್ಲ . ನಮ್ಮೆಲ್ಲರ ಕೆಲಸಗಳ ಮಧ್ಯೆಯೂ ಅಲ್ಪ ಸ್ವಲ್ಪ ಬಿಡುವು ಮಾಡುಕೊಂಡು   ಒಮ್ಮೆ ಇಂತಹ ಗ್ರಾಮೀಣ ಸೊಗಡಿನ ಹಬ್ಬಗಳನ್ನು ನಾವೆಲ್ಲರೂ ಸಕುಟುಂಬ ಸಮೇತವಾಗಿ ಭಾಗವಹಿಸುವುದರ ಮೂಲಕ ನಮ್ಮ ಸಂಪ್ರದಾಯ , ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಉಳಿಸೋಣ ಮತ್ತು ಬೆಳೆಸೋಣ .  ಇಂತಹ ಕಾರ್ಯಕ್ರಮಗಳ ಆಯೋಜಕರಿಗೆ ಮತ್ತವರ ಸ್ವಂಯಸೇವಕರ ನಿಸ್ವಾರ್ಥ ಸೇವೆಗೆ ನಮ್ಮ ಅಭಿನಂದನೆಗಳನ್ನು ಸಲ್ಲಿಸೋಣ . 69 ಹಬ್ಬಗಳ ಮಹತ್ವ

70 ದೇವಾಲಯದ ಆವರಣದಲ್ಲಿರುವ ಐತಿಹ್ಯದ ಅಟ್ಟನೆಗೆ ಇದು ಕೋರೋನ ಸಮಯದಲ್ಲಿ ಕಾಡು ಮಲ್ಲೇಶ್ವರ ಗೆಳೆಯ ಬಳಗದವರು ನಿರ್ಮಿಸಿದ್ದಾರೆ . ಇಲ್ಲಿ ಐತಿಹಾಸಕ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿರುತ್ತಾರೆ . ಸುಮಾರು 100 ವರ್ಷಗಳ ಇತಿಹಾಸವುಳ್ಳ ವಸ್ತುಗಳನ್ನು ನಾವು ನೋಡಬಹುದಾಗಿದೆ . ವೃಭಷ ವಾಹನ, ನಂದಿವಾಹನ , ಹಂಸ ವಾಹನ, ಗಜ ವಾಹನ, ಸಿಂಹ ವಾಹನ ಮತ್ತು ಕೈಲಾಸ ವಾಹನ ಹತ್ತು ತಲೆಗಳ ರಾವಣ ಈಶ್ವರ ಮತ್ತು ಪಾರ್ವತಿಯರನ್ನು ತನ್ನ ತಲೆಗಳ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯಗಳನ್ನು ನಾವು ನೋಡಬಹುದಾಗಿದೆ . ಈ ವಾಹನಗಳು ಮಹಾಶಿವರಾತ್ರಿ , ಬ್ರಹ್ಮರಥೋತ್ಸವದ ಸಮಯದಲ್ಲಿ ಮೆರವಣಿಗೆಯಾಗುತ್ತವೆ . ಇವುಗಳನ್ನು ಮನೆ ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ .

71 ದೇವಾಲಯದ ಆವರಣದಲ್ಲಿ ಇರುವ ಐತಿಹ್ಯದ ಅಟ್ಟನೆಗೆ ಪ್ರವೇಶ 100 ವರ್ಷದ ಹಳೆಯದಾದ ಪ್ರಭಾವಳಿ ದೀಪ ಕಂಬಗಳು

72 ದೇವಾಲಯದ ಆವರದಲ್ಲಿರುವ ಐತಿಹ್ಯದ ಅಟ್ಟನೆಗೆ 100 ವರ್ಷದ ಹಳೆಯದಾದ ಮರದ ಕಿಟಕಿ ವಾಹನಗಳ ಪ್ರಭಾವಳಿಗಳು ಉತ್ಸವ ದ್ವಾರ ಪಾಲಕರು

73 ದೇವಾಲಯದ ಆವರಣದಲ್ಲಿರುವ ಐತಿಹ್ಯದ ಅಟ್ಟನೆಗೆ ದೇವಾಯಲದ ನಿರ್ಮಾಣಕ್ಕೆ ಮುಖ್ಯ ಕಾರ್ಯ ಕರ್ತರು ಪ್ರಭಾವಳಿಯ ಕೈ ಬರಹ

1923ರಲ್ಲಿ ಪಟ್ಟಣದ ಪೂವಣ್ಣನವರ ಸೇವೆ ಎಂದು ಶ್ರೀ ಕಾಡು ಮಲ್ಲೇಶ್ವರ ಸ್ವಾಮಿಗೆ ಅರ್ಪಿತವಾಗಿರುವ ಪುರಾತನ ಪ್ರಭಾವಳಿ 74 ದೇವಾಲಯದ ಆವರಣದಲ್ಲಿರುವ ಐತಿಹ್ಯದ ಅಟ್ಟನೆಗೆ

75 1. ಶ್ರಿ ಕಲ್ಯಾಣ ಸುಬ್ರಮಣ್ಯ ಸ್ವಾಮಿ ದೇವಾಲಯ 2 . ಮಲ್ಲೇಶ್ವರದ ಶ್ರೀ ಸಾಯಿಬಾಬಾ ಮಂದಿರ ಶ್ರೀ ಕಾಡು ಮಲ್ಲಿಕಾರ್ಜುನ ದೇವಾಲಯದ ಸಮೀಪದಲ್ಲಿಇರುವಂತಹ ದೇವಾಲಯಗಳು

3. ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ 76 ಶ್ರೀ ಕಾಡು ಮಲ್ಲಿಕಾರ್ಜುನ ದೇವಾಲಯದ ಸಮೀಪದಲ್ಲಿಇರುವಂತಹ ದೇವಾಲಯಗಳು 4. ಶ್ರೀ ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ದೇವಾಲಯ

77 ಶ್ರೀ ಕಾಡು ಮಲ್ಲಿಕಾರ್ಜುನ ದೇವಾಲಯದ ಸಮೀಪದಲ್ಲಿಇರುವಂತಹ ದೇವಾಲಯಗಳು ಈ ಮೇಲಿನ ಎಲ್ಲಾ ದೇವಾಲಯಗಳು ಒಂದೇ ರಸ್ತೆಯಲ್ಲಿ ಇರುವುದರಿಂದ ಈ ರಸ್ತೆಯನ್ನು ಟೆಂಪಲ್ ‌ ಸ್ಟ್ರೀಟ್ ‌ ಎಂದು ಕರೆಯುತ್ತಾರೆ . ಈ ರಸ್ತೆಯಲ್ಲಿಯೇ ಕಡಲೆಕಾಯಿ ಪರೀಷೆಯು ನಡೆಯುತ್ತದೆ , ಮುಂದೆ ಹೊಂದಂತೆ ಭಾರತೀಯ ಜನತ ಪಾರ್ಟಿ (BJP) ಕಛೇರಿ ಸಹ ಇದೆ .

ಉಪಸಂಹಾರ 78 ಕಾಡು ಮಲ್ಲೇಶ್ವರ ದೇವಸ್ಥಾನವು ಕೇವಲ ಪೂಜಾಸ್ಥಳವಲ್ಲ, ಅದು ಬೆಂಗಳೂರು ನಗರದ ಇತಿಹಾಸ, ಸಂಸ್ಕೃತಿ ಮತ್ತು ಭಕ್ತಿಭಾವದ ಜೀವಂತ ಸಂಕೇತವಾಗಿದೆ. ಈ ದೇವಾಲಯದ ಸ್ಥಾಪನೆಯಿಂದಲೇ ಮಲ್ಲೇಶ್ವರಂ ಪ್ರದೇಶಕ್ಕೆ ಒಂದು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಗುರುತು ದೊರೆತಿದೆ. ಇಲ್ಲಿ ಪ್ರತಿವರ್ಷ ನಡೆಯುವ ಕಡಲೆಕಾಯಿ ಪಾರಿಷೆ, ದೇವಾಲಯದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಭಕ್ತರ ಭರವಸೆಯ ತಾಣವಾಗಿ, ರೈತರ ಕೃತಜ್ಞತೆಯ ಕೇಂದ್ರವಾಗಿ, ಮತ್ತು ಪರಂಪರೆಯ ಹಬ್ಬಗಳ ಆರಾಧನಾ ಸ್ಥಳವಾಗಿ ಕಾಡು ಮಲ್ಲೇಶ್ವರ ದೇವಸ್ಥಾನವು ಇಂದಿಗೂ ಅದೇ ಶ್ರದ್ಧೆ ಹಾಗೂ ಗೌರವದಿಂದ ಬೆಳಗುತ್ತಿದೆ. ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆ ಸೇರಿದೆ .

ಗ್ರಂಥ ಸೂಚಿ ನರಸಿಂಹಚಾರ್ .ಆರ್ ರವರು 1908 ರಲ್ಲಿ ಈ ದೇವಾಲಯದಲ್ಲಿ ಪತ್ತೆ ಹಚ್ಚಿದ ಶಾಸನವನ್ನು MAR ನಲ್ಲಿ 1909 ರಂದು ಸಂಪುಟ : 25 ರಲ್ಲಿ ಪ್ರಕಟಗೊಂಡಿದೆ. ಶೈಲಜ ಶರ್ಮಾ ಆರ್. ರವರ ಬೆಂಗಳೂರು ಆಕರ್ಷಕ ಸೂರು ; ಪು: 51-53; ಪ್ರ: ಪ್ರತಿಭಾ ಪ್ರಿಂಟರ್ಸ್ ಬೆಂಗಳೂರು - 2020. ಸುಂದ‌ರ್ ರಾವ್ ಬ.ನ ರವರ ಬೆಂಗಳೂರಿನ ಇತಿಹಾಸ ; ಪು: 641-645; ಪ್ರ: : 1985 (2011). ಕೃಷ್ಣಯ್ಯ ಎಂ.ಹೆಚ್ ಮತು ವಿಜಯ ರವರ ಬೆಂಗಳೂರು ದರ್ಶನ ಸಂಪುಟ: 3; ಪು: 7; ಪ್ರ: ಉದಯ ಬಾನು ಕಲಾಸಂಘ ಬೆಂಗಳೂರು 2005( 2016). ಶ್ರೀಧರ ಮೂರ್ತಿ ರಾ.ಕೃ ರವರ ಮಲ್ಲೇಶ್ವರಂ ಬೆಳೆದು ಬಂದ ದಾರಿ ( B); ಪು: 30-34; ಪ್ರ: ಓಂಕಾರ್ ಆಫ್ ಸೆಟ್ ಪ್ರಿಂಟರ್ಸ್ ಬೆಂಗಳೂರು- 2011. ಶೇಷಗಿರಿ ರಾವ್ ಎಲ್.ಎಸ್ ರವರ ಬೆಂಗಳೂರು ದರ್ಶನ ( 1); ಪು: 420; ಪ್ರ: ಉದಯ ಭಾನು ಕಲಾಸಂಗ ಬೆಂಗಳೂರು- 1916. ಚಂದ್ರಮೌಳಿ.ಕೆ ರವರ ಬೆಂಗಳೂರಿನ ನೋಟಗಳು ; ಪು: 27-28; ಪ್ರ: ಸಮರ್ಥ ಪ್ರಕಾಶನ ಬೆಂಗಳೂರು- 2018. ಪ್ರಕಾಶ್ ಎಚ್.ಆರ್ ರವರ ಬೆಂಗಳೂರು ಒಂದು ಅವಲೋಕನ: ಪು: 190-193; ಪು: SCPL ಬೆಂಗಳೂರು. ದೇವಾಲಯದ ಅರ್ಚಕರ ಸಂದರ್ಶನ https://kannada.asianetnews.com/gallery/karnataka-districts/bengaluru-kadu-malleshwaram-kadalekai-parishe-begins-grand-start-three-days-fair-sat-s51air?photo=2 https://traveltriangle.com/blog/kadu-malleshwara-temple/ https://nirvandiaries.com/kadu-malleshwara-temple-malleswaram-bangalore/ https://itms.kar.nic.in/hrcehome/history.php?tid=20 https://bengaluruprayana.com/kadu-malleshwara-temple/ 79

80 ವಂದನೆಗಳು